Site icon KTBS Solutions Hub

Acids Bases and Salts Solutions Class 7 in Kannada Medium.

Acids Bases and Salts Solutions Class 7 in Kannada Medium – 7ನೇ ತರಗತಿ ವಿಜ್ಞಾನ ಆಮ್ಲಗಳು,ಪ್ರತ್ಯಾಮ್ಲಗಳು ಮತ್ತು ಲವಣಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ https://solutionshub.in/ ಗೆ ಹೃದಯ ಪೂರ್ವಕ ಸ್ವಾಗತ ಮೊಸರು, ನಿಂಬೆರಸ, ಕಿತ್ತಳೆರಸ ಮತ್ತು ವಿನೆಗರ್‌ಗಳ ರುಚಿ ಹುಳಿ. ಇವುಗಳಲ್ಲಿ ಸೇರಿಕೊಂಡಿರುವ ಆಮ್ಲಗಳಿಂದಾಗಿ ಈ ಪದಾರ್ಥಗಳು ಹುಳಿಯಾಗಿವೆ. ಈ ಪದಾರ್ಥಗಳ ರಾಸಾಯನಿಕ ಗುಣ ಆಮ್ಲೀಯ. ಈ ಪದಾರ್ಥಗಳಲ್ಲಿರುವ ಆಮ್ಲಗಳು ನೈಸರ್ಗಿಕ ಆಮ್ಲಗಳು.ಆಡುಗೆ ಸೋಡದ ರುಚಿಯ ಬಗ್ಗೆ ನೀವೇನು ಹೇಳುವಿರಿ? ಅದರ ರುಚಿಯೂ ಹುಳಿಯಾಗಿತ್ತೆ?ಇಲ್ಲವಾದರೆ ಅದರ ರುಚಿ ಯಾವುದು? ಅದರ ರುಚಿ ಹುಳಿಯಾಗಿಲ್ಲದ ಕಾರಣ ಅದರಲ್ಲಿ ಆಮ್ಲವಿಲ್ಲಎಂದರ್ಥ. ಅದರ ರುಚಿ ಕಹಿ. ಸಾಮಾನ್ಯವಾಗಿ ಕಹಿರುಚಿ ಇದ್ದು, ಸ್ಪರ್ಶಿಸಿದಾಗ
ಸಾಬೂನಿನಂತಹ ಅನುಭವ ನೀಡುವ ಇಂತಹ ಪದಾರ್ಥಗಳನ್ನು ಪ್ರತ್ಯಾಮ್ಲಗಳು ಎನ್ನುವರು.
ಇಂತಹ ಪದಾರ್ಥಗಳ ಗುಣಗಳು ಪ್ರತ್ಯಾಮ್ಲೀಯ ವಾಗಿರುವುವ. ಈ ರೀತಿ ಪ್ರಸ್ತುತ ಅದ್ಯದಲ್ಲಿ ಹೆಚ್ಚಿನ ಮಾಹಿತಿ ಪಡೆದಿದ್ದಿರ. ಅವುಗಳ ಅನ್ವಯಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವೆಲ್ಲರೂ ತಿಳಿದಿದ್ದೀರಿ.ಈ ಒಂದು ಬ್ಲಾಗ್ ಲೇಖನದಲ್ಲಿ Acids Bases and Salts Class 7 Solutions in Kannada Medium – 7ನೇ ತರಗತಿ ವಿಜ್ಞಾನ ಆಮ್ಲಗಳು,ಪ್ರತ್ಯಾಮ್ಲಗಳು ಮತ್ತು ಲವಣಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

Table of Contents

Acids, Bases and Salts Class 7 Solutions. ಅಭ್ಯಾಸಗಳು.

೧) ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

ಉತ್ತರ:-

ಆಮ್ಲಗಳುಪ್ರತ್ಯಾಮ್ಲಗಳು
ಆಮ್ಲಗಳ ರುಚಿ ಹುಳಿ.ಪ್ರತ್ಯಾಮ್ಲಗಳ ರುಚಿ ಕಹಿ.
ಸ್ಪರ್ಶಿಸಿದಾಗ ಚರ್ಮವನ್ನು ಸುಡುತ್ತದೆ.ಸ್ಪರ್ಶಿಸಿದಾಗ ಸಾಬೂನಿನಂತಿರುತ್ತದೆ.
ನೀಲಿ ಲಿಟ್ಮಸ್ ಅನ್ನು ಕೆಂಪಾಗಿ ಪರಿವರ್ತಿಸುತ್ತದೆ.ಕೆಂಪು ಲಿಟ್ಮಸ್ ಅನ್ನು ನೀಲಿಯಾIಗಿ ಪರಿವರ್ತಿಸುತ್ತದೆ.
 
  
Acids, Bases and Salts Class 7 Solutions in Kannada Medium.

೨)  ಕಿಟಕಿ ಶುಭ್ರಕಾರಿಯಂತಹ ಅನೇಕ ಮನೆ ಬಳಕೆಯ ಉತ್ಪನ್ನಗಳಲ್ಲಿ ಅಮೋನಿಯ ಕಂಡು ಬರುತ್ತದೆ. ಇದು ಕೆಂಪು ಲಿಟ್ಮಸ್ ಅನ್ನು ನೀಲಿಯಾಗಿ ಬದಲಾಯಿಸುತ್ತದೆ. ಇದರ ಗುಣ ಯಾವುದು? Acids Bases and Salts Class 7 Notes

ಉತ್ತರ:  ಪ್ರತ್ಯಾಮ್ಲಗಳು ಕೆಂಪು ಲಿಟ್ಮಸ್ ಅನ್ನು ನೀಲಿಯಾಗಿ ಬದಲಾಯಿಸುತ್ತವೆ, ಆದುದರಿಂದ ಅಮೋನಿಯಾ ಒಂದು ಪ್ರತ್ಯಾಮ್ಲ.

೩). ಲಿಟ್ಮಸ್ ದ್ರಾವಣವನ್ನು ಪಡೆಯುವ ಆಕರವನ್ನು ಹೆಸರಿಸಿ. ದ್ರಾವಣದ ಉಪಯೋಗವೇನು ?ತಿಳಿಸಿ.

ಉತ್ತರ:- ಲಿಟ್ಮಸ್ (Litmus) ಸಾಮಾನ್ಯವಾಗಿ ಬಳಕೆಯಾಗುವ ಒಂದು ನೈಸರ್ಗಿಕ ಸೂಚಕ. ಇದನ್ನು ಕಲ್ಲು ಹೂಗಳಿಂದ ಪಡೆಯಲಾಗುತ್ತದೆ. ಇದು ದ್ರಾವಣದ ರೂಪದಲ್ಲಿ ಅಥವಾ ಕಾಗದದ ಪಟ್ಟಿಗಳ ರೂಪದಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದವಾಗಿ ದೊರೆಯುತ್ತದೆ.

ಇದನ್ನು ಆಮ್ಲೀಯ ದ್ರಾವಣದೊಂದಿಗೆ ಸೇರಿಸಿದಾಗ ಕೆಂಪಾಗಿ ಮತ್ತು ಪ್ರತ್ಯಾಮ್ಲೀಯ ದ್ರಾವಣದೊಂದಿಗೆ ಸೇರಿಸಿದಾಗ ನೀಲಿಯಾಗಿ ಬದಲಾಗುತ್ತದೆ,  ಬಣ್ಣದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ ಅದು ತಟಸ್ಥ ದ್ರಾವಣ. ಈ ರೀತಿಯಲ್ಲಿ ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

೪). ಆಸವಿತ ನೀರು ಆಮ್ಲಿಯವೇ /ಪ್ರತ್ಯಾಮ್ಲೀಯವೇ /ತಟಸ್ಥವೇ ಎಂಬುದನ್ನು ಹೇಗೆ ಪರಿಶೀಲಿಸುವಿರಿ?

ಉತ್ತರ:- ಆಸವಿತ ನೀರು  ತಟಸ್ಥ ಗುಣವನ್ನು ಹೊಂದಿದೆ. ಈ ಗುಣವನ್ನು ನಾವು ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದವನ್ನು ಬಳಸಿ ಪರೀಕ್ಷಿಸಬಹುದು.ಈ ಬಣ್ಣದ ಕಾಗದಗಳನ್ನು ನೀರಿನಲ್ಲಿದ್ದಾಗ ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದುದರಿಂದ ಆಸವಿತ ನೀರು ಆಮ್ಲಿಯವೂ ಅಲ್ಲ, ಪ್ರತ್ಯಾಮ್ಲೀಯ ವೂ   ಅಲ್ಲ, ಇದು ಒಂದು ತಟಸ್ಥ ಎಂದು ಈ ರೀತಿ ಪರಿಶೀಲಿಸಬಹುದು.

೫). ತಟಸ್ಥೀಕರಣ ಕ್ರಿಯೆಯನ್ನು ಒಂದು ಉದಾಹರಣೆಯ ಸಹಾಯದಿಂದ ವಿವರಿಸಿ.

ಉತ್ತರ:-

ಆಮ್ಲ ಮತ್ತು ಪ್ರತ್ಯಾಮ್ಲ ದ ನಡುವಿನ ಕ್ರಿಯೆಯನ್ನು ತಟಸ್ಥೀಕರಣ ಎನ್ನುವರು. ಈ ಕ್ರಿಯೆಯಲ್ಲಿ ಉಷ್ಣದ ಬಿಡುಗಡೆಯೊಂದಿಗೆ ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ.

ಆಮ್ಲ+ಪ್ರತ್ಯಾಮ್ಲ———>ಲವಣ+ನೀರು ( ಉಷ್ಣ ಬಿಡುಗಡೆ)

ಹೈಡ್ರೋಕ್ಲೋರಿಕ್ ಆಮ್ಲ ದೊದಿಗೆ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಸೇರಿಸಿದಾಗ ಸೋಡಿಯಂ ಕ್ಲೋರೈಡ್ ಎಂಬ ಲವಣ ಮತ್ತು ನೀರು ಜೊತೆಗೆಉಷ್ಣ ಬಿಡುಗಡೆಯಾಗುತ್ತದೆ.ಆಮ್ಲ ಮತ್ತು ಪ್ರತ್ಯಾಮ್ಲಗಳು ತಮ್ಮ ಮೂಲ ಗುಣವನ್ನು ಕಳೆದುಕೊಂಡು ಸೋಡಿಯಮ್ ಕ್ಲೋರೈಡ್ ಲವಣ, ನೀರು, ಮತ್ತು ಉಷ್ಣ ಉತ್ಪತ್ತಿ ಆಗುತ್ತದೆ.

HCl+ NaOH———-> NaCl+ ನೀರು [ಉಷ್ಣ]

Acids Bases and Salts Class 7 Notes

1). ನೈಟ್ರಿಕ್ ಆಮ್ಲವು ಕೆಂಪು ಲಿಟ್ಮಸ್ ಅನ್ನು ನೀಲಿಯಾಗಿಸುತ್ತದೆ.  (ಸರಿ/ತಪ್ಪು)

ಉತ್ತರ:-ತಪ್ಪು

2). ಸೋಡಿಯಂ ಹೈಡ್ರಾಕ್ಸೈಡ್ ನೀಲಿ ಲಿಟ್ಮಸ್ ಅನ್ನು ಕೆಂಪಾಗಿಸುತ್ತದೆ. (ಸರಿ/ತಪ್ಪು)

ಉತ್ತರ:-ತಪ್ಪು

3). ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಗಳು ಪರಸ್ಪರ ತಟಸ್ಥಗೊಂಡು ಲವಣ ಮತ್ತು ನೀರನ್ನು ಉಂಟುಮಾಡುತ್ತವೆ. (ಸರಿ/ತಪ್ಪು)

ಉತ್ತರ:-ಸರಿ

4). ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ದ್ರಾವಣಗಳಲ್ಲಿ ಬೇರೆ ಬೇರೆ ಬಣ್ಣಗಳನ್ನು ತೋರುವ ಪದಾರ್ಥವೇ ಸೂಚಕ.  (ಸರಿ/ತಪ್ಪು)

ಉತ್ತರ:-ಸರಿ

5). ಪ್ರತ್ಯಾಮ್ಲದ ಇರುವಿಕೆಯಿಂದ ಹಲ್ಲಿನ ಕುಳಿಯು ಉಂಟಾಗುತ್ತದೆ.  (ಸರಿ/ತಪ್ಪು)

ಉತ್ತರ:- ತಪ್ಪು

೭). ದೋರ್ಜಿಯ ಉಪಹಾರ ಗೃಹದಲ್ಲಿ ಕೆಲವು ಲಘು ಪಾನೀಯದ ಬಾಟಲಿಗಳಿವೆ. ಆದರೆ ದುರದೃಷ್ಟವಶಾತ್ ಅವುಗಳಿಗೆ ಹೆಸರಿನ ಪಟ್ಟಿಯನ್ನು ಅಂಟಿಸಿಲ್ಲ . ಗ್ರಾಹಕರ ಬೇಡಿಕೆಗೆ ತಕ್ಕಂತೆ ಆತ ಆ ಪಾನೀಯಗಳನ್ನು ನೀಡಬೇಕು. ಒಬ್ಬ ಗ್ರಾಹಕನು ಆಮ್ಲೀಯ ಪಾನೀಯವನ್ನು, ಇನ್ನೊಬ್ಬ ಪ್ರತ್ಯಾಮ್ಲೀಯ ಪಾನಿಯವನ್ನು ಹಾಗೂ ಮೂರನೆಯವನು ತಟಸ್ಥ ಪಾನಿಯವನ್ನು ಬಯಸುತ್ತಾನೆ.ಯಾವ ಪಾನೀಯವನ್ನು ಯಾರಿಗೆ ನೀಡಬೇಕೆಂದು ದೋರ್ಜಿ ಹೇಗೆ ತೀರ್ಮಾನಿಸುತ್ತಾನೆ ?

ದೋರ್ಜಿಯ ಉಪಹಾರ ಗೃಹದಲ್ಲಿ ಇರುವ ಪಾನೀಯಗಳು ಸೇವಿಸಬಹುದಾದ ಪಾನೀಯಗಳು. ದೋರ್ಜಿ ಸುಲಭವಾಗಿ ಅವುಗಳ ರುಚಿಯನ್ನು ನೋಡಿ ಗುರುತಿಸಬಹುದು, ಆಮ್ಲೀಯ ಪಾನೀಯಗಳು ಹುಳಿ ರುಚಿಯನ್ನು ಹೊಂದಿರುತ್ತವೆ, ಪ್ರತ್ಯಾಮ್ಲೀಯ ಪಾನೀಯಗಳು ಕಹಿ ರುಚಿಯನ್ನು ಹೊಂದಿರುತ್ತವೆ. ತಟಸ್ಥ ಪಾನೀಯಗಳು ಯಾವುದೇ ರುಚಿ ಹೊದಿರುವುದಿಲ್ಲ.

ಇನ್ನೊಂದು ವಿಧಾನ –

ಪಾನೀಯಗಳ ಕೆಲವು ಹನಿಗಳನ್ನು ಕೆಂಪು ಹಾಗೂ ನೀಲಿ ಬಣ್ಣದ ಲಿಟ್ಮಸ್ ಕಾಗದದ ಮೇಲೆ ಹಾಕಿದಾಗ, ನೀಲಿ ಲಿಟ್ಮಸ್ ಅನ್ನು ಕೆಂಪಾಗಿ ಪರಿವರ್ತಿಸುತ್ತದೆ.ಕೆಂಪು ಲಿಟ್ಮಸ್ ಅನ್ನು ನೀಲಿಯಾIಗಿ ಪರಿವರ್ತಿಸುತ್ತದೆ. ಯಾವುದೇ ಬಣ್ಣದಲ್ಲಿ ಬದಲಾವಣೆ ಆಗದೆ, ಅಥವಾ ಬೇರೆ ಬಣ್ಣ ಬಂದರೆ ಅದು ತಟಸ್ಥ ಪಾನೀಯ ಎಂದು ಸುಲಭವಾಗಿ ನಿರ್ಧರಿಸಬಹುದು.

Acids, Bases and Salts Class 7 Solutions in Kannada Medium – ಏಕೆಂದು ವಿವರಿಸಿ.

೮). ಏಕೆಂದು ವಿವರಿಸಿ.

ಅ). ನೀವು ಆಮ್ಲೀಯತೆಯಿಂದ ನರಳುವಾಗ ಆಮ್ಲರೋಧಕ ಮಾತ್ರೆಯನ್ನು ತೆಗೆದುಕೊಳ್ಳುವಿರಿ.

ಉತ್ತರ:- ಹೆಚ್ಚಾದ ಹೈಡ್ರೋಕ್ಲೋರಿಕ್ ಆಮ್ಲದ ಬಿಡುಗಡೆಯಿಂದ ನಮ್ಮಲ್ಲಿ ಆಮ್ಲೀಯತೆ ಉಂಟಾಗುತ್ತದೆ. ಅಮ್ಲ ರೋಧಕ ಮಾತ್ರೆಯು ಮೆಗ್ನೀಷಿಯಂ ಹೈಡ್ರಾಕ್ಸೈಡ್ ಅನ್ನು ಹೊಂದಿರುತ್ತದೆ ಇದು ಒಂದು ಪ್ರತ್ಯಾಮ್ಲ.ಇದು ಆಮ್ಲದ ಗುಣವನ್ನು ತಟಸ್ಥ ಗೊಳಿಸುತ್ತದೆ. 

ಆ). ಇರುವೆ ಕಚ್ಚಿದಾಗ ಚರ್ಮದ ಮೇಲೆ ಕ್ಯಾಲಮೈನ್ ದ್ರಾವಣವನ್ನು ಲೇಪಿಸಲಾಗುತ್ತದೆ.

ಉತ್ತರ

:- ಇರುವೆಯ ಜೊಲ್ಲು ರಸದಲ್ಲಿ ಫಾರ್ಮಿಕ್ ಆಸಿಡ್ ಇರುತ್ತದೆ, ಇದು ನಮಗೆ ಉರಿ ಮತ್ತು ಊತ ಉಂಟಾಗುವಂತೆ ಮಾಡುತ್ತದೆ. ಕ್ಯಾಲಮೈನ್ ದ್ರಾವಣದಲ್ಲಿ ಸಿಂಕ್ ಕಾರ್ಬೋನೇಟ್ ಇದ್ದು ಇದು ಒಂದು ಪ್ರತ್ಯಾಮ್ಲ, ಇದನ್ನು ಇರುವೆ ಕಚ್ಚಿದ ಜಾಗಕ್ಕೆ ಲೇಪಿಸಿದಾಗ ಆಮ್ಲದ ಜೊತೆ ಸೇರಿ ಅದರ ಗುಣವನ್ನು ತಟಸ್ಥ ಗೊಳಿಸಿ, ನಮಗೆ ಆ ಜಾಗದಲ್ಲಿ ಉಂಟಾದ ಉರಿ ಮತ್ತು ಊತ ಶಮನಗೊಳಿಸಲು ನೆರವಾಗುತ್ತದೆ.

ಇ). ಕಾರ್ಖಾನೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮುನ್ನ ಅವುಗಳನ್ನು ತಟಸ್ಥ ಗೊಳಿಸಬೇಕು.

ಉತ್ತರ:-

ಕಾರ್ಖಾನೆ ತ್ಯಾಜ್ಯಗಳು ಹಲವು ಅಪಾಯಕಾರಿ ಆಮ್ಲಗಳನ್ನು ಹೊಂದಿರುತ್ತವೆ . ತ್ಯಾಜ್ಯಗಳನ್ನು ವಿಲೇವಾರಿ ಮಾಡದೆ ನೀರಿನ ಮೂಲಗಳಿಗೆ ಹರಿಸಿದಾಗ ಅದರಲ್ಲಿರುವ ಹಲವಾರು ಜೀವ ವೈವಿಧ್ಯಗಳಿಗೆ ಹಾನಿ ಉಂಟಾಗುತ್ತದೆ .ಆದುದರಿಂದ ಕಾರ್ಖಾನೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮುನ್ನ ಪ್ರತ್ಯಾಮ್ಲ ಸೇರಿಸಿ ಅವುಗಳ ಗುಣವನ್ನು ತಟಸ್ಥ ಗೊಳಿಸಬೇಕು.

೯). ನಿಮಗೆ 3 ದ್ರವಗಳನ್ನು ನೀಡಲಾಗಿದೆ. ಒಂದು ಹೈಡ್ರೋಕ್ಲೋರಿಕ್ ಆಮ್ಲ, ಇನ್ನೊಂದು ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಮೂರನೆಯದು ಸಕ್ಕರೆಯ ದ್ರಾವಣ. ಅವುಗಳನ್ನು ನೀವು ಹೇಗೆ ಗುರುತಿಸುವಿರಿ? ನಿಮ್ಮ ಬಳಿ ಅರಿಶಿನದ ಸೂಚಕ ಮಾತ್ರ ಇದೆ.

ಉತ್ತರ:-  ಅರಿಶಿಣ ದ ಬಣ್ಣ ಹಳದಿ. ಅರಿಶಿಣದ ದ್ರಾವಣಕ್ಕೆ ನಾವು ಪ್ರತ್ಯಾಮ್ಲ ವನ್ನು ಹಾಕಿದಾಗ ಬಣ್ಣ ಕೆಂಪಾಗುತ್ತದೆ. ಆದರೆ ನಾವು ಆಮ್ಲ ಅಥವಾ ತಟಸ್ಥ ದ್ರಾವಣವನ್ನು ಇದಕ್ಕೆ ಬೆರೆಸಿದಾಗ ಬಣ್ಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಕೆಂಪು ಬಣ್ಣಕ್ಕೆ ಬದಲಾದ ದ್ರಾವಣವು ಸೋಡಿಯಂ ಹೈಡ್ರಾಕ್ಸೈಡ್ ಆಗಿದೆ. 

ಸಕ್ಕರೆ ಮತ್ತು ಹೈಡ್ರೊಕ್ಲೋರಿಕ್ ಆಮ್ಲ  ದ್ರಾವಣಗಳ ಹನಿಗಳನ್ನು ಅರಶಿನದ ಮೇಲೆ ಹಾಕಿದಾಗ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ.

ನಾವು ಸಕ್ಕರೆ ಮತ್ತು ಹೈಡ್ರೋಕ್ಲೋರಿಕ್ ಆಮ್ಲ  ದ್ರಾವಣದಲ್ಲಿ ಸ್ವಲ್ಪ ಸೋಡಿಯಂ ಹೈಡ್ರಾಕ್ಸೈಡ್ ಹನಿಗಳನ್ನು ಹಾಕಿದಾಗ, ಸಕ್ಕರೆ ದ್ರಾವಣ ಪ್ರತ್ಯಾಮ್ಲ ಗುಣವನ್ನು ಹೊಂದುತ್ತದೆ. ಈ ದ್ರಾವಣದ ಕೆಲವು ಹನಿಗಳನ್ನು ಅರಿಶಿಣ ದ ಮೇಲೆ ಹಾಕಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಸಕ್ಕರೆ ದ್ರಾವಣ. 

ನಾವು ಉಳಿದದ್ರಾವಣದ  ಹನಿಗಳನ್ನು ಅರಿಶಿನ ದ ಮೇಲೆ ಹಾಕಿದಾಗ ಯಾವುದೇ ಬಣ್ಣದ ಬದಲಾವಣೆ ಆಗುವುದಿಲ್ಲ. ಏಕೆಂದರೆ ನಾವು ಹೈಡ್ರೋಕ್ಲೋರಿಕ್ ಆಮ್ಲ ಕ್ಕೆ ಸೋಡಿಯಂ ಹೈಡ್ರಾಕ್ಸೈಡ್ ಹನಿಗಳನ್ನು ಹಾಕಿದಾಗ ತಟಸ್ಥ ದ್ರಾವಣವಾಗುತ್ತದೆ, ಆದುದರಿಂದ ತಟಸ್ಥ ದ್ರಾವಣದಲ್ಲಿ ಅರಿಶಿನ ದ ಬಣ್ಣ ಬದಲಾವಣೆ ಆಗುವುದಿಲ್ಲ.

೧೦). ನೀಲಿ ಲಿಟ್ಮಸ್ ಹಾಳೆಯನ್ನು ಒಂದು ದ್ರಾವಣದಲ್ಲಿ ಅದ್ದಲಾಗಿದೆ. ಅದು ನೀಲಿಯಾಗಿಯೇ ಉಳಿಯುತ್ತದೆ. ದ್ರಾವಣದ ಗುಣವೇನು? ವಿವರಿಸಿ.

ಉತ್ತರ:-  ನೀಲಿ ಲಿಟ್ಮಸ್ ಹಾಳೆಯನ್ನು ಒಂದು ದ್ರಾವಣದಲ್ಲಿ ಅದ್ದಿದಾಗ ಅದು ನೀಲಿಯಾಗಿಯೇ ಉಳಿದರೆ ದ್ರಾವಣವು ತಟಸ್ಥ ದ್ರಾವಣ ವಾಗಿರುತ್ತದೆ ಅಥವಾ ದ್ರಾವಣವು ಪ್ರತ್ಯಾಮ್ಲೀಯ ವಾಗಿರುತ್ತದೆ. ಪ್ರತ್ಯಾಮ್ಲ ವು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಪರಿವರ್ತಿಸುತ್ತದೆ ಆದರೆ ನೀಲಿಬಣ್ಣದ ಲಿಟ್ಮಸ್ ಕಾಗದದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬರುವುದಿಲ್ಲ.

೧೧). ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

ಅ). ಆಮ್ಲ ಮತ್ತು ಪ್ರತ್ಯಾಮ್ಲಗಳೆರಡೂ ಎಲ್ಲಾ ಸೂಚಕಗಳ ಬಣ್ಣಗಳನ್ನು ಬದಲಾಯಿಸುತ್ತವೆ.

ಆ).ಒಂದು ಸೂಚಕವೂ ಆಮ್ಲದಲ್ಲಿ ಬಣ್ಣ ಬದಲಾಯಿಸಿದರೆ, ಪ್ರತ್ಯಾಮ್ಲದಲ್ಲಿ ಬಣ್ಣ ಬದಲಾಯಿಸುವುದಿಲ್ಲ .

ಇ).ಒಂದು ಸೂಚಕವೂ ಪ್ರತ್ಯಾಮ್ಲದಲ್ಲಿ ಬಣ್ಣ ಬದಲಾಯಿಸಿದರೆ, ಆಮ್ಲದಲ್ಲಿ ಬಣ್ಣ ಬದಲಾಯಿಸುವುದಿಲ್ಲ .

ಉ). ಆಮ್ಲ ಮತ್ತು ಪ್ರತ್ಯಾಮ್ಲದಲ್ಲಿ ಬಣ್ಣದ ಬದಲಾವಣೆಯು ಸೂಚಕದ ವಿಧವನ್ನು ಅವಲಂಬಿಸಿದೆ.

 ಇವುಗಳಲ್ಲಿ ಯಾವ ಹೇಳಿಕೆಯು ಸರಿ.

a). ಎಲ್ಲಾ ನಾಲ್ಕು  b). ಎ ಮತ್ತು ಡಿ    c). ಬಿ, ಸಿ, ಮತ್ತು ಡಿ.   d).ಡಿ ಮಾತ್ರ.

ಉತ್ತರ:- d).ಡಿ ಮಾತ್ರ.

ನಮ್ಮ ಜಠರದಲ್ಲಿ ಇರುವ ಆಮ್ಲ ಯಾವುದು?

ನಮ್ಮ ಜಠರದಲ್ಲಿ ಹೈಡ್ರೊಕ್ಲೋರಿಕ್ ಆಮ್ಲವಿದೆ.

ಅತಿಯಾದ ಆಮ್ಲದ ಪರಿಣಾಮವನ್ನುಹೇಗೆ ಶಮನಗೊಳಿಸಲಾಗುತ್ತದೆ?

ಅಜೀರ್ಣದ ಶಮನಕ್ಕೆ, ಮೆಗ್ನೀಸಿಯಮ್ ಹೈಡ್ರಾಕ್ಸೈಡ್ ಉಳ್ಳ ಮೆಗ್ನೀಸಿಯಮ್ ಆಮ್ಲರೋಧಕಗಳನ್ನು ನಾವು ಸೇವಿಸುತ್ತೇವೆ. ಅತಿಯಾದ ಆಮ್ಲದ ಪರಿಣಾಮವನ್ನು ಇದು ತಟಸ್ಥಗೊಳಿಸುತ್ತದೆ.

Exit mobile version