KSEEB Solutions For Class 6 Science Chapter 8 Body Movements In Kannada ಈ ಲೇಖನದಲ್ಲಿ, ಕರ್ನಾಟಕ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಸೂಚಿಸಿದಂತೆ 6 ನೇ ತರಗತಿ ವಿಜ್ಞಾನ ಅಧ್ಯಾಯ 8: ದೇಹ ಚಲನೆಗಳಿಗೆ ಪರಿಹಾರಗಳನ್ನು ನಾವು ಪರಿಶೀಲಿಸುತ್ತೇವೆ. ಶಿಕ್ಷಣದ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾನವ ದೇಹದ ಚಲನೆಗಳು ಮತ್ತು ಅವುಗಳನ್ನು ಸುಗಮಗೊಳಿಸುವ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ನಾವು ದೇಹದ ಚಲನೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಒಳಗೊಳ್ಳುತ್ತೇವೆ ಮತ್ತು ಪ್ರತಿಯೊಂದಕ್ಕೂ ಸಮಗ್ರ ವಿವರಣೆಯನ್ನು ನೀಡುತ್ತೇವೆ.
KSEEB Solutions For Class 6 Science Chapter 8 Body Movements In Kannada ಸಾರಾಂಶ
● ಮಾನವನ ದೇಹದ ಅಸ್ಥಿಪಂಜರವು, ಮೂಳೆಗಳು ಮತ್ತು ಮೃದ್ವಸ್ಥಿಗಳಿಂದ ಆಗಿದೆ. ಇದು ದೇಹಕ್ಕೆ ಚೌಕಟ್ಟು ಮತ್ತು ಆಕಾರವನ್ನು ಕೊಡುತ್ತದೆ ಹಾಗೂ ಚಲನೆಗೆಸಹಕರಿಸುತ್ತದೆ. ಇದುಆಂತರಿಕ ಅಂಗಾಂಗಗಳನ್ನು ರಕ್ಷಿಸುತ್ತದೆ.
● ಮಾನವನ ಅಸ್ಥಿಪಂಜರವು ತಲೆಬುರುಡೆ, ಬೆನ್ನುಮೂಳೆ, ಪಕ್ಕೆಲುಬುಗಳು ಮತ್ತು ಎದೆಯ ಮೂಳೆ, ಭುಜ ಮತ್ತು ಸೊಂಟದ ಮೂಳೆಗಳು ಮತ್ತು ಕೈ ಹಾಗೂ ಕಾಲಿನ ಮೂಳೆಗಳನ್ನು ಒಳಗೊಂಡಿದೆ.
● ಎರಡು ಗುಂಪುಗಳ ಸ್ನಾಯುಗಳ ಪರ್ಯಾಯ ಸಂಕೋಚನ ಮತ್ತು ವಿಕಸನದಿಂದ ಮೂಳೆಗಳು ಚಲಿಸುತ್ತವೆ.
● ಕೀಲುಗಳ ಸ್ವಭಾವ ಮತ್ತು ಅವು ಚಲನೆಗೆ ಅವಕಾಶ ನೀಡುವ ದಿಕ್ಕನ್ನು ಅವಲಂಬಿಸಿ ವಿವಿಧ ಬಗೆಯ ಮೂಳೆಯ ಕೀಲುಗಳಿವೆ.
● ಶಕ್ತಿಯುತವಾದ ಸ್ನಾಯುಗಳು ಮತ್ತು ಹಗುರವಾದ ಮೂಳೆಗಳು ಒಟ್ಟಿಗೆ ಕೆಲಸ ಮಾಡಿ ಹಕ್ಕಿಗಳು ಹಾರಲು ಸಹಾಯ ಮಾಡುತ್ತವೆ. ಅವು ತಮ್ಮ ರೆಕ್ಕೆಗಳ ಬಡಿತದಿಂದ ಹಾರುತ್ತವೆ.
● ತಮ್ಮ ದೇಹದ ಇಕ್ಕೆಲಗಳಲ್ಲಿ ಪರ್ಯಾಯವಾಗಿ ಕುಣಿಕೆಗಳನ್ನು ಉಂಟುಮಾಡಿ ಮೀನುಗಳು ಈಜುತ್ತವೆ.
● ಹಾವುಗಳು ಪಾರ್ಶ್ವಕುಣಿಕೆಗಳಿಂದ ನೆಲದ ಮೇಲೆ ಹರಿದಾಡುತ್ತವೆ. ಬಹುಸಂಖ್ಯೆಯ
ಮೂಳೆಗಳು ಮತ್ತು ಸಂಬಂಧಿತ ಸ್ನಾಯುಗಳು ದೇಹವನ್ನು ಮುಂದಕ್ಕೆ ತಳ್ಳುತ್ತವೆ.
● ಜಿರಳೆಗಳ ದೇಹ ಮತ್ತು ಕಾಲುಗಳಿಗೆ ಹೊರಕಂಕಾಲವೆಂಬ ಗಟ್ಟಿಯಾದ ಕವಚವಿದೆ. ಮೂರು ಜೊತೆ ಕಾಲುಗಳಿಗೆ ಮತ್ತು ಎರಡು ಜೊತೆ ರೆಕ್ಕೆಗಳಿಗೆ ಜೋಡಣೆಯಾಗಿರುವ ಎದೆಯ ಸ್ನಾಯುಗಳು ಜಿರಳೆ ನಡೆಯಲು ಮತ್ತು ಹಾರಲು ಸಹಕರಿಸುತ್ತವೆ.
● ಎರೆಹುಳುಗಳು ತಮ್ಮ ದೇಹದ ಸ್ನಾಯುಗಳ ಪರ್ಯಾಯ ವಿಕಸನ ಮತ್ತು ಸಂಕೋಚನಗಳಿಂದ ಚಲಿಸುತ್ತವೆ. ದೇಹದ ತಳಭಾಗದಲ್ಲಿರುವ ಬಿರುಗೂದಲುಗಳು ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕರಿಸುತ್ತವೆ.
● ಬಸವನಹುಳುಗಳು ಸ್ನಾಯುಯುತ ಪಾದದ ಸಹಾಯದಿಂದ ಚಲಿಸುತ್ತವೆ.
KSEEB Solutions For Class 6 Science Chapter 8 Body Movements In Kannada ಅಭ್ಯಾಸಗಳು
೧. ಬಿಟ್ಟ ಸ್ಥಳಗಳನ್ನು ತುಂಬಿ.
ಎ) ಮೂಳೆಗಳಲ್ಲಿರುವ ಕೀಲುಗಳು ದೇಹದ __________ ಗೆ ಸಹಾಯ ಮಾಡುತ್ತವೆ.
ಉತ್ತರ : ಚಲನೆ
ಬಿ) ಮೂಳೆ ಮತ್ತು ಮೃದ್ವಸ್ಥಿಗಳ ಸಂಯೋಜನೆಯು ದೇಹದ ____________ ವನ್ನು
ಉಂಟು ಮಾಡುತ್ತದೆ.
ಉತ್ತರ : ಆಕಾರ
ಸಿ) ಮೊಣಕೈನ ಬಳಿಯಿರುವ ಮೂಳೆಗಳು ____________ ಕೀಲಿನಿಂದ ಸೇರಿವೆ.
ಉತ್ತರ : ಬಿಜಾಗರಿ
ಡಿ) ಚಲನೆಯ ಸಮಯದಲ್ಲಿ ___________ ನ ಸಂಕೋಚನವು ಮೂಳೆಗಳನ್ನು
ಎಳೆಯುತ್ತದೆ.
ಉತ್ತರ : ಸ್ನಾಯು
೨. ಈ ಕೆಳಗಿನ ವಾಕ್ಯಗಳಲ್ಲಿ ಸರಿ (ಸ) ಮತ್ತು ತಪ್ಪು (ತ) ತಿಳಿಸಿ.
ಎ) ಎಲ್ಲಾ ಪ್ರಾಣಿಗಳ ಚಲನೆ ಮತ್ತು ಸ್ಥಾನಾಂತರ ಒಂದೇ ರೀತಿ ಇರುತ್ತದೆ. (ತ )
ಬಿ) ಮೂಳೆಗಳಿಗಿಂತ ಮೃದ್ವಸ್ಥಿಗಳು ಗಟ್ಟಿ. (ತ )
ಸಿ) ಕೈಬೆರಳಿನ ಮೂಳೆಗಳಿಗೆ ಕೀಲುಗಳಿರುವುದಿಲ್ಲ. (ತ )
ಡಿ) ಮುಂದೋಳಿನಲ್ಲಿ ಎರಡು ಮೂಳೆಗಳಿವೆ. (ಸ )
ಇ) ಜಿರಳೆಗಳಿಗೆ ಹೊರಕಂಕಾಲವಿರುತ್ತದೆ. (ಸ )
೩. ಕಾಲಂ-೧ರಲ್ಲಿರುವ ಅಂಶಗಳನ್ನು ಕಾಲಂ-೨ರಲ್ಲಿರುವ ಅಂಶಗಳೊಡನೆ ಹೊಂದಿಸಿ.
೪. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಎ) ಗೋಲ ಮತ್ತು ಗುಳಿ ಕೀಲು ಎಂದರೇನು?
ಉತ್ತರ : ಒಂದು ಮೂಳೆಯ ದುಂಡಾದ ತುದಿಯು ಇತರ ಮೂಳೆಯ ಟೊಳ್ಳಾದ ಜಾಗಕ್ಕೆ ಹೊಂದಿಕೊಳ್ಳುತ್ತದೆ. ಇದನ್ನು ಗೋಲ ಮತ್ತು ಗುಳಿ ಕೀಲು ಎನ್ನುವರು. ಈ ಕೀಲುಗಳು ಎಲ್ಲಾ ದಿಕ್ಕುಗಳಲ್ಲಿ ಚಲನೆಯನ್ನು ಅನುಮತಿಸುತ್ತದೆ.
ಬಿ) ತಲೆಬುರುಡೆಯಲ್ಲಿ ಚಲಿಸುವ ಮೂಳೆಗಳು ಯಾವುವು?
ಉತ್ತರ : ಕೆಳದವಡೆಯ ಮೂಳೆಗಳು
ಸಿ) ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆ?
ಉತ್ತರ : ನಮ್ಮ ಮೊಣಕೈ ಹಿಮ್ಮುಖವಾಗಿ ಚಲಿಸುವುದಿಲ್ಲ ಏಕೆಂದರೆ ಮೊಣಕೈ ಒಂದು ಬಿಜಾಗರಿ ಕೀಲು ಹೊಂದಿದ್ದು ಅದು ಕೇವಲ ಒಂದೆ ದಿಕ್ಕಿನಲ್ಲಿ ಮಾತ್ರ ಚಲಿಸುವಂತೆ ಮಾಡುತ್ತದೆ.
KSEEB Solutions For Class 6 Science Chapters in kannada.
ಅಧ್ಯಾಯ ೧ : ಆಹಾರ-ಇದು ಎಲ್ಲಿಂದ ದೊರಕುತ್ತದೆ?
ಅಧ್ಯಾಯ ೪ : ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು
ಅಧ್ಯಾಯ ೫ : ಪದಾರ್ಥಗಳನ್ನು ಬೇರ್ಪಡಿಸುವಿಕೆ
ಅಧ್ಯಾಯ ೬ : ನಮ್ಮ ಸುತ್ತಲಿನ ಬದಲಾವಣೆಗಳು
ಅಧ್ಯಾಯ ೭ : ಸಸ್ಯಗಳನ್ನು ತಿಳಿಯುವುದು
FAQS- Class 6 Science Chapter 8: Body Movements
Q1: What are the three types of body movements?
A1: The three types of body movements are voluntary, involuntary, and reflex actions.
Q2: Give an example of a voluntary movement.
A2: Waving our hand or jumping are examples of voluntary movements.
Q3: Provide an example of an involuntary movement.
A3: The beating of the heart or blinking are examples of involuntary movements.
Q4: What are reflex actions?
A4: Reflex actions are quick and automatic responses to stimuli without conscious control.
Q5: How does a ball and socket joint allow movement?
A5: A ball and socket joint allows movement in different directions, including rotation, due to its rounded ball-like end fitting into a cup-like socket.
Q6: Name an example of a ball and socket joint in our body.
A6: The shoulder joint is an example of a ball and socket joint.
Q7: What is the function of the skeletal system in our body?
A7: The skeletal system provides support, structure, protection, and aids in movement.
Q8: How do bones and muscles work together in movement?
A8: Muscles pull on bones, acting as levers to allow body movements.
Q9: Why is the spinal cord protected by the vertebral column?
A9: The vertebral column (spine) protects the delicate spinal cord, which is essential for transmitting nerve signals from the brain to the rest of the body.
Q10: What is the role of bone marrow in the skeletal system?
A10: Bone marrow produces red blood cells, white blood cells, and platelets, which are crucial for the immune system and oxygen transportation.
Q11: What is a hinge joint?
A11: A hinge joint is a type of joint that allows movement in only one plane, like a door hinge.
Q12: Give an example of a hinge joint.
A12: The knee joint is an example of a hinge joint.
Q13: What is a pivot joint?
A13: A pivot joint allows rotational movement around a central axis.
Q14: Name an example of a pivot joint in our body.
A14: The joint between the first two vertebrae in the neck is an example of a pivot joint, allowing us to turn our head from side to side.
Q15: What are antagonistic muscle pairs?
A15: Antagonistic muscle pairs are muscles that work together to create movement; one muscle contracts while the other relaxes.
Q16: Provide an example of antagonistic muscle pairs.
A16: The biceps and triceps in the upper arm are antagonistic muscle pairs responsible for bending and straightening the elbow.
Q17: How does exercise benefit our body movements?
A17: Regular exercise improves flexibility, strength, and coordination of body movements.
Q18: What can happen if bones don’t get enough calcium?
A18: Insufficient calcium intake can lead to weak and brittle bones, making them prone to fractures.
Q19: Why is it essential to maintain good posture?
A19: Maintaining good posture helps prevent strain on muscles and bones, reducing the risk of musculoskeletal problems.
Q20: How do reflex actions protect our body?
A20: Reflex actions help us quickly respond to potentially harmful situations, such as pulling our hands away from a hot surface, protecting us from injuries.