Site icon KTBS Solutions Hub

Reproduction in Plants Class 7 New Solutions In Kannada.

Reproduction in Plants Class 7 Solutions In Kannada.

Reproduction in Plants Class 7 Solutions In Kannada.

ಹಾಯ್, ಹಲೋ, ಸ್ನೇಹಿತರೆ, 👏ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ,Reproduction in Plants Class 7 New Solutions In Kannada ಏಳನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು. 7ನೇ ತರಗತಿ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಕನ್ನಡದಲ್ಲಿ ಅಭ್ಯಾಸ  ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ಸವಿವರವಾಗಿ ಚಿತ್ರಗಳೊಂದಿಗೆ ನೀಡಲಾಗಿದೆ. 

(ಎ) ಪೋಷಕ ಸಸ್ಯದ ಕಾಯಿಕ ಭಾಗದಿಂದ ಹೊಸ ಜೀವಿಯು ಉತ್ಪತ್ತಿಯಾಗುವುದಕ್ಕೆ  ಕಾಯಜ ಸಂತಾನೋತ್ಪತ್ತಿ ಎನ್ನುವರು.

ವಿವರಣೆ -:ಕಾಯಜ ಸಂತಾನೋತ್ಪತ್ತಿ ಇದು ಒಂದು ಅಲೈಂಗಿಕ ಸಂತಾನೋತ್ಪತ್ತಿಯ ವಿಧಾನವಾಗಿದೆ. ಇದರಲ್ಲಿ ಬೇರು, ಕಾಂಡ, ಎಲೆ ಮತ್ತು ಮೊಗ್ಗುಗಳಿಂದ ಹೊಸ ಗಿಡಗಳು ಹುಟ್ಟುತ್ತವೆ. ಸಸ್ಯದ ಕಾಯಜ ಭಾಗಗಳಿಂದ ಹೊಸ ಸಸಿಗಳು ಹುಟ್ಟುವ ಕಾರಣ ಈ ವಿಧಾನಕ್ಕೆಕಾಯಜ ಸಂತಾನೋತ್ಪತ್ತಿ ಎನ್ನುವರು.


(ಬಿ) ಒಂದು ಹೂವು ಗಂಡು ಅಥವಾ ಹೆಣ್ಣು ಪ್ರಜನನ ಭಾಗವನ್ನು ಹೊಂದಿರಬಹುದು. ಅಂತಹ ಹೂವಿಗೆ ಏಕಲಿಂಗಿ ಎನ್ನುವರು.

ವಿವರಣೆ -:ಕೇಸರ ಮತ್ತು ಶಲಾಕೆ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಹೊಂದಿರುವ ಹೂಗಳನ್ನು ಏಕಲಿಂಗಿ ಹೂಗಳು ಎನ್ನುವರು. ಜೋಳ ಪಪ್ಪಾಯ ಸೌತೆಕಾಯಿ ಏಕಲಿಂಗಿ ಹೂಗಳನ್ನು ಹೊಂದಿದ್ದು ಪುರುಷ ಮತ್ತು ಹೆಣ್ಣು ಏಕಲಿಂಗಿ ಹೂಗಳು ಒಂದೇ ಸಸ್ಯದಲ್ಲಿ ಅಥವಾ ಬೇರೆ ಬೇರೆ ಸಸ್ಯಗಳಲ್ಲಿ ಇರಬಹುದು.


(ಸಿ) ಒಂದು ಹೂವಿನ ಪರಾಗಕೋಶದಿಂದ ಅದೇ ಹೂವಿನ ಅಥವಾ ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆಗೆ ಪರಾಗಸ್ಪರ್ಶ ಎನ್ನುವರು.

ವಿವರಣೆ -:ಒಂದು ಹೂವಿನ ಕೇಸರದಿಂದ ಅಂದರೆ ಪರಾಗ ಕೋಶದಿಂದ ಶಾಲಾ ಕಾಗ್ರಕ್ಕೆ ಪರಾಗವು ವರ್ಗಾವಣೆಯಾಗುವ ಪ್ರಕ್ರಿಯೆಗೆ ಪರಾಗ ಸ್ಪರ್ಶ ಎನ್ನುವರು. ಕೀಟಗಳು, ಪಕ್ಷಿಗಳು ಹೂಗಳ ಮೇಲೆ ಕುಳಿತು ತಮ್ಮ ದೇಹದೊಂದಿಗೆ ಪರಾಗ ರೇಣುಗಳನ್ನು ಒಯ್ಯುತ್ತವೆ ಅದೇ ಜಾತಿಯ ಹೂವಿನ ಶಲಾಕಾಗ್ರ ದ ಮೇಲೆ ಕೆಲವು ಪರಾಗ ರೇಣುಗಳು ಬೀಳಬಹುದು.

(ಡಿ) ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣುವಿನ ಸಂಯೋಗಕ್ಕೆ ನಿಷೇಚನ ಎನ್ನುವರು.

ವಿವರಣೆ -:ಪುರುಷ ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ನಿಷೇಚನ ಎನ್ನುವರು. ಲಿಂಗಾನುಗಳ ಸಂಯೋಗಗೊಂಡು ಕೋಶವನ್ನು ಯುಗ್ಮಜ ಎನ್ನುವರು. ಯುಗ್ಮಜವು ಮುಂದೆ ಭ್ರೂಣವಾಗಿ ಬೆಳೆಯುತ್ತದೆ.

(ಇ) ಬೀಜ ಪ್ರಸರಣವು ಗಾಳಿ,  ನೀರು ಮತ್ತು ಪ್ರಾಣಿಗಳ ಮೂಲಕ ಜರುಗುತ್ತದೆ.

2. ಅಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳನ್ನು ವಿವರಿಸಿ. ಉದಾಹರಣೆಗಳನ್ನು ನೀಡಿ.

ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳ ಉತ್ಪತ್ತಿ ಇಲ್ಲದೆ ಹೊಸ ಸಸ್ಯಗಳು ಹುಟ್ಟುತ್ತವೆ.ಅಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳು-

3. ಲೈಂಗಿಕ ಸಂತಾನೋತ್ಪತ್ತಿಯ ಬಗ್ಗೆ ನೀವು ಏನು ಅರ್ಥ ಮಾಡಿಕೊಂಡಿರಿ? ವಿವರಿಸಿ.

ಸಸ್ಯಗಳಲ್ಲಿ ಅತಿ ಸುಂದರ ಆಕರ್ಷಣೀಯ ಭಾಗಗಳಾದ ಹೂಗಳು ಸಂತಾನೋತ್ಪತ್ತಿಯ ಭಾಗಗಳಾಗಿವೆ. ಹೂಗಳಲ್ಲಿ ಕೇಸರ ಮತ್ತು ಶಾಲಾಕೆ  ಪ್ರಮುಖ ಪ್ರಜನ ಭಾಗಗಳಾಗಿರುತ್ತವೆ. ಕೇಸರಗಳುStamen ಪುರುಷ ಪ್ರಜನನ ಭಾಗವಾಗಿದ್ದರೆ ಶಲಾಕೆ ಹೆಣ್ಣು ಪ್ರಜನನ ಭಾಗವಾಗಿದೆ.ಪರಾಗಸ್ಪರ್ಶ ಪ್ರಕ್ರಿಯೆಯಮೂಲಕ ಸಸ್ಯಗಳು ಬೀಜಗಳನ್ನು ಉತ್ಪತ್ತಿ ಮಾಡಿ ಸತಾನಾಭಿವೃದ್ದಿ ಮಾಡುತ್ತವೆ.

4. ಲೈಂಗಿಕ ಮತ್ತು ಅಲೈಂಗಿಕ ಸಂತಾನೋತ್ಪತ್ತಿಯ ನಡುವೆ ಇರುವ ಮುಖ್ಯ ವ್ಯತ್ಯಾಸವನ್ನು ತಿಳಿಸಿ.

5. ಹೂವಿನ ಪ್ರಜನನ ಭಾಗಗಳನ್ನು ಚಿತ್ರಿಸಿ.

6. ಸ್ವಕೀಯ ಪರಾಗಸ್ಪರ್ಶ ಹಾಗೂ ಪರಕೀಯ ಪರಾಗಸ್ಪರ್ಶದ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿ.

ksh

7. ಹೂಗಳಲ್ಲಿ ನಿಷೇಚನ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ನಿಷೇಚನ ನಂತರ ಹೂವಿನ ಉಳಿದೆಲ್ಲ ಭಾಗಗಳು ಉದುರಿ ಹೋಗಿ ಅಂಡಾಶಯ ಹಣ್ಣಾಗಿ ಬೆಳೆಯುತ್ತದೆ ಬಲಿತ ಅಂಡಾಶಯವನ್ನು ಹಣ್ಣು ಎನ್ನುವರು.

8. ಬೀಜ ಪ್ರಸರಣವಾಗುವ ಹಲವು ವಿಧಾನಗಳನ್ನು ವಿವರಿಸಿ.

ಸರಿಯಾದ ಉತ್ತರ

10. ಸರಿಯಾದ ಉತ್ತರವನ್ನು (✔) ಚಿಹ್ನೆಯಿಂದ ಗುರ್ತಿಸಿ

(ಎ) ಒಂದು ಸಸ್ಯದ ಪ್ರಜನನ ಭಾಗ       (i) ಎಲೆ (ii) ಕಾಂಡ (iii) ಬೇರು (iv) ಹೂವು

(ಬಿ) ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣು ಸಂಯೋಗಗೊಳ್ಳುವ ಪ್ರಕ್ರಿಯೆಯನ್ನು ಹೀಗೆನ್ನುವರು. (i) ನಿಷೇಚನ (ii) ಪರಾಗಸ್ಪರ್ಶ (iii) ಸಂತಾನೋತ್ಪತ್ತಿ (iv) ಬೀಜ ಉಂಟಾಗುವಿಕೆ 

(ಸಿ) ಬಲಿತ ಅಂಡಾಶಯವು ಹೇಗೆ ಮಾರ್ಪಡುತ್ತದೆ. (i) ಬೀಜ (ii) ಕೇಸರ (iii) ಶಲಾಕೆ (iv) ಹಣ್ಣು

(ಡಿ) ಇದು ಬೀಜಕವನ್ನು ಉತ್ಪತ್ತಿ ಮಾಡುವ ಜೀವಿ (i) ಗುಲಾಬಿ (ii) ಬ್ರೆಡ್ಡಿನ ಶಿಲೀಂಧ್ರ ✔ (iii) ಆಲೂಗಡ್ಡೆ (iv) ಶುಂಠಿ

(ಇ) ಬ್ರಯೊಫಿಲ್ಲಮ್ ಇದರ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ.

(i) ಕಾಂಡ (ii) ಎಲೆಗಳು ✔ (iii) ಬೇರುಗಳು (iv) ಹೂ

Reproduction in Plants Class 7 Solutions In Kannada 7ನೇ ತರಗತಿ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಕನ್ನಡದಲ್ಲಿ ಅಭ್ಯಾಸ  ಪ್ರಶ್ನೆಗಳಿಗೆ ಮಾದರಿ ಉತ್ತರ. ಮಾದರಿ ಉತ್ತರಗಳನ್ನು ಇಲ್ಲಿ ಸವಿವರವಾಗಿ ಚಿತ್ರಗಳೊಂದಿಗೆ ನೀಡಲಾಗಿದೆ.ನಿಮಗೆ ಇಲ್ಲಿನ ಉತ್ತರಗಳಲ್ಲಿ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ.

ಸಸ್ಯದ ಪ್ರಮುಖ ಭಾಗಗಳು ಯಾವುವು?

ಸಸ್ಯಗಳ ಭಾಗಗಳು  ಬೇರು, ಕಾಂಡ ಮತ್ತು ಎಲೆಗಳನ್ನು ಹೊಂದಿರುತ್ತವೆ. ಈ ಬೇರು ಕಾಂಡ ಮತ್ತು ಎಲೆಗಳನ್ನು ಸಸ್ಯದ ಕಾಯಕ ಭಾಗಗಳು ಎನ್ನುವರು.

ಹೂಗಳು ಸಾಮಾನ್ಯವಾಗಿ ವರ್ಣರಂಗಿತವಾಗಿದ್ದು ಸುವಾಸನೆ ಬೀರುತ್ತದೆ ಇದಕ್ಕೆ ಕಾರಣವೇನು?

ಅದು ಕೀಟಗಳನ್ನು ಆಕರ್ಷಿಸುವುದಕ್ಕಾಗಿ ಇರುವ ಪ್ರಕೃತಿಯ ಅದ್ಭುತ ವಿಸ್ಮಯವಾಗಿದೆ.

Exit mobile version