Site icon KTBS Solutions Hub

Winds Storms and Cyclones Class 7 Best Solutions In Kannada Medium.

Winds Storms and Cyclones Class 7 Solutions In Kannada Medium – 7ನೇ ತರಗತಿ ವಿಜ್ಞಾನ ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು.-  ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ, ೧೮ನೇ ಅಕ್ಟೋಬರ್ ೧೯೯೯ ರಂದು ೨೦೦km/h ವೇಗದ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸಿತು. ಈ ಚಂಡಮಾರುತವು ೪೫,೦೦೦ ಮನೆಗಳನ್ನು ಧ್ವಂಸಗೊಳಿಸಿ, ೭,೦೦,೦೦೦ ಜನರನ್ನು ನಿರಾಶ್ರಿತರನ್ನಾಗಿಸಿತು. ಅದೇ ವರ್ಷ ಅಕ್ಟೋಬರ್ ೨೯ ರಂದು ೨೬೦ km/h ವೇಗದ ಎರಡನೇ ಚಂಡಮಾರುತವು ಪುನಃ ಒರಿಸ್ಸಾಗೆ ಅಪ್ಪಳಿಸಿತು. ಇದು ೯ ಮೀ ಎತ್ತರದ ನೀರಿನ ಅಲೆಗಳನ್ನು ಹೊತ್ತು ತಂದಿತ್ತು. ಸಾವಿರಾರು ಜನರ ಪ್ರಾಣ ಹಾನಿಯಾಯಿತು. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿ ಪಾಸ್ತಿ ನಾಶವಾಯಿತು. ಚಂಡಮಾರುತವು ಕೃಷಿ, ಸಾರಿಗೆಸಂಪರ್ಕ ಮತ್ತು ವಿದ್ಯುತ್ ಸರಬರಾಜಿನ ಮೇಲೆ ದುಷ್ಪರಿಣಾಮ ಬೀರಿತು.ಹಾಗಾದರೆ ಚಂಡಮಾರುತಗಳು ಎಂದರೇನು? ಅವು ಹೇಗೆ ಉಂಟಾಗುತ್ತವೆ? ಅವು ಏಕೆ ವಿನಾಶಕಾರಿ? ಇಂತಹ ಹಲವು ಪ್ರಶ್ನೆಗಳಿಗೆ ಈ ಅಧ್ಯಾಯದಲ್ಲಿ ಉತ್ತರ ಕಂಡು ಕೊಂಡಿದ್ದೀರಿ. ಈ ಒಂದು ಬ್ಲಾಗ್ ಲೇಖನದಲ್ಲಿ Winds Storms and Cyclones Class 7 Solutions In Kannada Medium– 7ನೇ ತರಗತಿ ವಿಜ್ಞಾನ ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

Contents hide

ಇಂಪಾರ್ಟೆಂಟ್ ಪಾಯಿಂಟ್ಸ್ – weather climate and adaptations of animals to climate.

  1. ನಮ್ಮ ಸುತ್ತಲಿನ ಗಾಳಿಯು ಒತ್ತಡವನ್ನು ಉಂಟುಮಾಡುತ್ತದೆ.
  2. ಗಾಳಿಯು ಉಷ್ಣತೆಯಿಂದ ಹಿಗ್ಗುತ್ತದೆ, ತಣಿದಾಗ ಕುಗ್ಗುತ್ತದೆ.
  3. ಬಿಸಿಯಾದ ಗಾಳಿಯು ಮೇಲೇರುತ್ತದೆ ಇದಕ್ಕೆ ಹೋಲಿಸಿದಾಗ ತಂಪಾದ ಗಾಳಿಯು ಭೂಮಿಯ ಮೇಲ್ಮೈ ಕಡೆಗೆ ಕುಸಿಯಲು ಯತ್ನಿಸುತ್ತದೆ.
  4. ಬಿಸಿಯಾದ ಗಾಳಿಯು ಮೇಲೇರಿದಾಗ ಅಲ್ಲಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಮತ್ತು ತಂಪಾದ ಗಾಳಿಯು ಆ ಸ್ಥಳವನ್ನು ಪ್ರವೇಶಿಸುತ್ತದೆ.
  5. ಬೀಸುವ ಗಾಳಿಯೇ ಮಾರುತ.
  6. ಭೂಮಿಯ ಅಸಮ ಉಷ್ಣತೆಯೇ ಮಾರುತಗಳ ಚಲನೆಗೆ ಮೂಲ ಕಾರಣ
  7. ಮಾರುತಗಳು ಕೊಂಡೊಯ್ಯುವ ನೀರಾವಿಯು ಮಳೆಯನ್ನು ತರುತ್ತದೆ.
  8. ಅತಿವೇಗದ ಮಾರುತಗಳು ಮತ್ತು ಗಾಳಿಯ ಒತ್ತಡದಲ್ಲಿನ ವ್ಯತ್ಯಾಸವು ಚಂಡಮಾರುತಗಳನ್ನು ಉಂಟುಮಾಡಬಲ್ಲವು.
  9. ಉಪಗ್ರಹಗಳು ಮತ್ತು ರಡಾರ್‌ಗಳಂತಹ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಚಂಡಮಾರುತಗಳ ಉಸ್ತುವಾರಿ ಸುಲಭವೆನಿಸಿದೆ.
  10. ಸ್ವ-ಸಹಾಯವೇ ಶ್ರೇಷ್ಠ ಸಹಾಯ. ಆದ್ದರಿಂದ ಸಮೀಪಿಸುವ ಚಂಡಮಾರುತದ ವಿರುದ್ಧ ರಕ್ಷಣೆಗಾಗಿ ಸನ್ನದ್ಧರಾಗಿರಲು ಮುಂದಾಲೋಚಿಸಿ, ಯೋಜನೆ ರೂಪಿಸುವುದು ಉತ್ತಮ.
  11. ಕೆಳಗಿನ ನಕ್ಷಾ ನಿರೂಪಣೆಯು ಮೋಡಗಳ ರಚನೆ, ಮಳೆ ಸುರಿಯುವಿಕೆ, ಹಾಗೂ ಬಿರುಗಾಳಿ ಮತ್ತು ಚಂಡಮಾರುತಗಳ ಸೃಷ್ಟಿಗೆ ಕಾರಣವಾದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ
    • ಎರಡು ಪ್ರದೇಶಗಳ ನಡುವಿನ ತಾಪದ ವ್ಯತ್ಯಾಸ.
    • ಗಾಳಿಯಲ್ಲಿ ಸಂವಹನ ಏರ್ಪಡುವುದು.
    • ಗಾಳಿಯು ಮೇಲೇರಿ, ಕನಿಷ್ಠ ಒತ್ತಡದ ಪ್ರದೇಶವನ್ನು ಉಂಟುಮಾಡುವುದು.
    • ತಂಪಾದ ಗಾಳಿಯು ಕಡಿಮೆ ಒತ್ತಡದ ಪ್ರದೇಶದಲ್ಲಿ ಕೇಂದ್ರೀಕೃತವಾಗುವುದು.
    • ಬಿರುಗಾಳಿಯು ಮೇಲೇರಿ ತಣಿದು, ನೀರಾವಿ ಘನೀಕರಿಸಿ ಮೋಡಗಳನ್ನು ನಿರ್ಮಿಸುತ್ತದೆ.
    • ಮೋಡದಲ್ಲಿ ನೀರಿನ ದಪ್ಪ ಹನಿಗಳು, ಮಳೆ, ಆಲಿಕಲ್ಲು ಅಥವಾ ಹಿಮವಾಗಿ ಭೂಮಿಗೆ ಸುರಿಯುತ್ತವೆ.
    • ಕೆಳಗೆ ಬೀಳುವ ನೀರಿನ ಹನಿಗಳು ಮತ್ತು ಮೇಲೆರುವ ಗಾಳಿಯ ಕ್ಷಿಪ್ರ ಚಲನೆ ಬಿರುಗಾಳಿಯನ್ನು ಸೃಷ್ಟಿಸುತ್ತವೆ.
    • ಕೆಲವು ಹವಾಮಾನ ಪರಿಸ್ಥಿತಿಗಳಲ್ಲಿ ಬಿರುಗಾಳಿಗಳು ಚಂಡಮಾರುತಗಳಾಗುತ್ತವೆ.

೧. ಕೆಳಕಂಡ ಹೇಳಿಕೆಗಳಲ್ಲಿನ ಖಾಲಿ ಜಾಗಗಳಲ್ಲಿ ಬಿಟ್ಟು ಹೋದ ಪದಗಳನ್ನು ತುಂಬಿ.

(ಎ) ಮಾರುತ ಎಂದರೆ ____________ ಗಾಳಿ.

ಉತ್ತರ-ಚಲಿಸುವ

(ಬಿ) ಭೂ ಮೇಲ್ಮೆನ __________ ಉಷ್ಣತೆಯಿಂದ ಮಾರುತಗಳು ಉಂಟಾಗುತ್ತವೆ.

ಉತ್ತರ-ಅಸಮ

(ಸಿ) ಭೂ ಮೇಲ್ಮೈ ನಲ್ಲಿ _________ ಗಾಳಿಯು ಮೇಲೇರುತ್ತದೆ. ಆದರೆ ________ ಗಾಳಿಯು ಕೆಳಗೆ ಬರುತ್ತದೆ.

ಉತ್ತರ-ಬಿಸಿ  ಮತ್ತು ತಣ್ಣನೆಯ

(ಡಿ) ಗಾಳಿಯು _________ ಒತ್ತಡದ ಪ್ರದೇಶದಿಂದ _________ ಒತ್ತಡದ ಪ್ರದೇಶಕ್ಕೆ ಚಲಿಸುತ್ತದೆ.

ಉತ್ತರ-ಹೆಚ್ಚು  ಮತ್ತು ಕಡಿಮೆ

೨. ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾರುತದ ದಿಕ್ಕನ್ನು ಕಂಡುಹಿಡಿಯುವ ಎರಡು ವಿಧಾನಗಳನ್ನು ಸೂಚಿಸಿ.

ಉತ್ತರ- 

  1. ಗಾಳಿಪಟವನ್ನು ಹಾರಿಸುವಾಗ ಗಾಳಿಪಟದ ಮೇಲೆ ಗಾಳಿಯು ಒತ್ತಡವನ್ನು ಉಂಟುಮಾಡುತ್ತದೆ, ಗಾಳಿಪಟ ಯಾವ ದಿಕ್ಕಿನಲ್ಲಿ ಹಾರುತ್ತದೆಯೋ ಅದು ಗಾಳಿ ಬೀಸುವ ದಿಕ್ಕು.
  2. ಒಣ ಮರಳನ್ನು ಕೈಯಲ್ಲಿ ಹಿಡಿದುಕೊಳ್ಳಿ, ನಿಧಾನವಾಗಿ ಅದನ್ನು ಎತ್ತರದಿಂದ ಕೆಳಗಿ ಬಿಡಿ ಮರಳು ಯಾವ ದಿಕ್ಕಿನಲ್ಲಿ ಹಾರುತ್ತದೆಯೋ ಗಾಳಿಯ ಅದು ಗಾಳಿ ಬೀಸುವ ದಿಕ್ಕು.

೩. ಗಾಳಿಯು ಒತ್ತಡವನ್ನು ಉಂಟು ಮಾಡುತ್ತದೆ ಎಂದು ನಿಮ್ಮನ್ನು ಆಲೋಚಿಸುವಂತೆ ಮಾಡಿದ ಎರಡು ಅನುಭವಗಳನ್ನು ತಿಳಿಸಿ (ಪಠ್ಯದಲ್ಲಿ ನೀಡಿರುವುದನ್ನು ಹೊರತು ಪಡಿಸಿ).

ಉತ್ತರ- 

  1. ನಾವು ಬಲೂನ್‌ನಲ್ಲಿ ಗಾಳಿಯನ್ನು ತುಂಬಿದಾಗ, ಅದುಹಿಗ್ಗುತ್ತದೆ ಮತ್ತು ನಾವು ಹೆಚ್ಚು ಗಾಳಿಯನ್ನು ತುಂಬಲು ಪ್ರಯತ್ನಿಸಿದರೆ, ಬಲೂನ್ ಒಡೆದು ಗಾಳಿಯ ಒತ್ತಡವನ್ನು ಸಾಬೀತುಪಡಿಸುತ್ತದೆ.
  2. ಗಾಳಿಯು ಪರದೆಗಳು, ಬಾಗಿಲುಗಳು ಮತ್ತು ಕಿಟಕಿಗಳನ್ನು ಗಾಳಿಯ ದಿಕ್ಕಿನೊಂದಿಗೆ ಚಲಿಸುವಂತೆ ಮಾಡುತ್ತದೆ. ಇದು ಗಾಳಿಯ ಒತ್ತಡವನ್ನು ತೋರಿಸುತ್ತದೆ.

೪. ನೀವು ಒಂದು ಮನೆಯನ್ನು ಕೊಂಡುಕೊಳ್ಳಬೇಕೆಂದಿರುವಿರಿ. ವಾತಾಯನ ಕಿಂಡಿಗಳಿಲ್ಲದೆ (ventilators), ಕಿಟಕಿಗಳು ಮಾತ್ರ ಇರುವ ಮನೆಯನ್ನು ಕೊಂಡುಕೊಳ್ಳುವಿರ? ನಿಮ್ಮ ಉತ್ತರವನ್ನು ವಿವರಿಸಿ.

ಉತ್ತರ-ಇಲ್ಲಾ ವಾತಾಯನ ಕಿಂಡಿಗಳಿಲ್ಲದ/ ವೆಂಟಿಲೇಟರ್‌ಗಳಿಲ್ಲದ ಮನೆ ವಾಸಿಸಲು ಸುರಕ್ಷಿತವಲ್ಲ ಏಕೆಂದರೆ ಮನೆಯಲ್ಲಿ ಬೆಚ್ಚಗಿನ ಗಾಳಿಯು ತಂಪಾದ ಗಾಳಿಗಿಂತ ಹಗುರವಾಗಿರುತ್ತದೆ. ವಾತಾಯನ ಕಿಂಡಿಯಲ್ಲಿ ಬೆಚ್ಚಗಿನ ಗಾಳಿಯು ಮೇಲಕ್ಕೇರಿ ವೆಂಟಿಲೇಟರ್‌ಗಳ ಮೂಲಕ ಹೊರ ಹೋಗುತ್ತದೆ. ಮತ್ತು ಶುದ್ಧ ಗಾಳಿಯು ಒಳ ಬರುತ್ತದೆ.ವಾತಾಯನ ಕಿಂಡಿಗಳು ಇರುವ ಮನೆಯಲ್ಲಿ ಗಾಳಿಯ ಸಮಪರ್ಪಕ ಗಾಳಿಯ ಚಾಲನೆ ಉಂಟಾಗುತ್ತದೆ. 

೫. ತೂಗು ಹಾಕುವ ಬ್ಯಾನರ್ ಮತ್ತು ಫಲಕಗಳಲ್ಲಿ ರಂಧ್ರಗಳನ್ನು ಮಾಡಲು ಕಾರಣವೇನು?

ಉತ್ತರ- ಬ್ಯಾನರ್‌ಗಳು ಮತ್ತು ಫಲಕಗಳಲ್ಲಿ ರಂಧ್ರಗಳು ಗಾಳಿಯು ಅವುಗಳ ಮೂಲಕ ಹಾದುಹೋಗಲು ಸಹಾಯ ಮಾಡುತ್ತದೆ. ಆದ್ದರಿಂದ, ಬ್ಯಾನರ್‌ಗಳು ಗಾಳಿಯ ಒತ್ತಡವನ್ನು ತಡೆದುಕೊಳ್ಳಬಲ್ಲವು ಇದರಿಂದ ಅವು ಹರಿಯುವುದಿಲ್ಲ ಮತ್ತು ಕೆಳಗೆ ಬೀಳುವುದಿಲ್ಲ ಮತ್ತು ಹಾಗೇ ಉಳಿಯುತ್ತವೆ.

೬. ಚಂಡಮಾರುತವು ನಿಮ್ಮ ಹಳ್ಳಿ/ನಗರವನ್ನು ಸಮೀಪಿಸುವಾಗ ನಿಮ್ಮ ನೆರೆಹೊರೆಯವರಿಗೆ ನೀವು ಹೇಗೆ ಸಹಾಯ ಮಾಡುವಿರಿ?

ಉತ್ತರ-

  1. ಚಂಡಮಾರುತಗಳ ಬಗ್ಗೆ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆ.
  2. ಸರ್ಕಾರಿ ಸಂಸ್ಥೆಗಳು, ಬಂದರುಗಳು, ಮೀನುಗಾರರು, ಹಡಗುಗಳು ಹಾಗೂ ಜನಸಾಮಾನ್ಯರಿಗೆ  ಎಚ್ಚರಿಕೆ ಸಂದೇಶಗಳ ಕ್ಷಿಪ್ರ ಸಂವಹನ.
  3. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳ ನಿರ್ಮಾಣ ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಆಡಳಿತಾತ್ಮಕ ವ್ಯವಸ್ಥೆ ಮಾಡುವುದು.
  4. ದೂರದರ್ಶನ, ರೇಡಿಯೊ ಮತ್ತು ವಾರ್ತಾಪತ್ರಿಕೆಗಳ ಮೂಲಕ ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳನ್ನು ಕಡೆಗಣಿಸಬಾರದು. ಮುಖ್ಯವಾಗಿ ನಾವು ಮನೆಯ ಅಗತ್ಯ ವಸ್ತುಗಳು, ಸಾಕುಪ್ರಾಣಿಗಳು, ವಾಹನಗಳು ಮುಂತಾದವುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
  5. ಪ್ರವಾಹಗಳಿಂದ ರಸ್ತೆಗಳು ಹಾಳಾಗಿರುವ ಸಾಧ್ಯತೆ ಇರುವುದರಿಂದ ನೀರು ನಿಂತ ರಸ್ತೆಗಳಲ್ಲಿ ವಾಹನ ನಡೆಸಬಾರದು.
  6. ಪೊಲೀಸ್, ಅಗ್ನಿಶಾಮಕದಳ ಮತ್ತು ಆರೋಗ್ಯ ಕೇಂದ್ರಗಳಂತಹ ಎಲ್ಲಾ ತುರ್ತುಸೇವೆಗಳ ದೂರವಾಣಿ ಸಂಖ್ಯೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

೭. ಚಂಡಮಾರುತವು ಉಂಟುಮಾಡುವ ಸನ್ನಿವೇಶವನ್ನು ನಿರ್ವಹಿಸಲು ಯಾವ ಪೂರ್ವ ಯೋಜನೆಯ ಅಗತ್ಯವಿದೆ?

ಉತ್ತರ-

  1. ಕಲುಷಿತವಾದ ನೀರನ್ನು ಕುಡಿಯಬೇಡಿ, ತುರ್ತು ಸಂದರ್ಭಗಳಿಗಾಗಿ ಯಾವಾಗಲೂ ಕುಡಿಯುವ ನೀರನ್ನು ಸಂಗ್ರಹಿಸಿಡಿ.
  2. ಒದ್ದೆಯಾದ ವಿದ್ಯುತ್ ಸ್ವಿಚ್‌ಗಳು ಮತ್ತು ಕೆಳಗೆ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ.
  3. ಚಂಡಮಾರುತವಿದ್ದಾಗ ವಿನೋದಕ್ಕಾಗಿ ಮನೆಯಿಂದ ಹೊರಗೆ ಹೋಗದಿರಿ.
  4. ರಕ್ಷಣಾದಳದ ಮೇಲೆ ಅನುಚಿತ ಬೇಡಿಕೆಗಳಿಂದ ಒತ್ತಡ ಹೇರಬೇಡಿ.
  5. ನಿಮ್ಮ ಸ್ನೇಹಿತರಿಗೆ ಮತ್ತು ನೆರೆಹೊರೆಯವರಿಗೆ ಸಹಾಯಮಾಡಿ. 

೮. ಈ ಕೆಳಗಿನವುಗಳಲ್ಲಿ ಯಾವ ಸ್ಥಳವು ಚಂಡಮಾರುತದ ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇಲ್ಲ?

(i) ಚನ್ನೈ  (ii) ಮಂಗಳೂರು (iii) ಅಮೃತಸರ (iv) ಪುರಿ

ಉತ್ತರ-  (iii) ಅಮೃತಸರ

೯. ಕೆಳಗೆ ನೀಡಿರುವ ಯಾವ ಹೇಳಿಕೆ ಸರಿಯಾಗಿದೆ?

(i) ಚಳಿಗಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.

(ii) ಬೇಸಿಗೆ ಕಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.

(iii)ಹೆಚ್ಚು ಒತ್ತಡದ ವ್ಯವಸ್ಥೆಯ ಸುತ್ತ ತೀವ್ರ ವೇಗದ ಮಾರುತಗಳು ಪರಿಭ್ರಮಿಸಿದಾಗ ಚಂಡಮಾರುತ ಉಂಟಾಗುತ್ತದೆ.

(iv) ಭಾರತದ ಕರಾವಳಿ ತೀರ ಚಂಡಮಾರುತಗಳಿಂದ ಬಾಧಿತವಲ್ಲ.

ಉತ್ತರ- (i) ಚಳಿಗಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.

ಈ ಒಂದು ಬ್ಲಾಗ್ ಲೇಖನದಲ್ಲಿ winds storms and cyclones class 7 Solutions in kannada medium – 7ನೇ ತರಗತಿ ವಿಜ್ಞಾನ ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

FAQs-Winds Storms and Cyclones Class 7

ಮಾರುತಗಳ ಚಲನೆಗೆ ಮೂಲ ಕಾರಣ ಯಾವುದು?

ಭೂಮಿಯ ಅಸಮ ಉಷ್ಣತೆಯೇ ಮಾರುತಗಳ ಚಲನೆಗೆ ಮೂಲ ಕಾರಣ.

ಗಾಳಿಯ ಮೇಲೆ ಉಷ್ಣತೆಯ ಪ್ರಭಾವವೇನು?

ಗಾಳಿಯು ಉಷ್ಣತೆಯಿಂದ ಹಿಗ್ಗುತ್ತದೆ, ತಣಿದಾಗ ಕುಗ್ಗುತ್ತದೆ.

👉Winds, Storms, and Cyclones Class 7 PDF👈

5th Standard EVS Notes In Kannada

Exit mobile version