ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ,ಈ ಒಂದು ಬ್ಲಾಗ್ ಲೇಖನದಲ್ಲಿNutrition In Plants Class 7 Solutions in Kannada 7ನೇ ತರಗತಿ ವಿಜ್ಞಾನ ಸಸ್ಯಗಳಲ್ಲಿ ಪೋಷಣೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
ಮಾನವರು ಸೇರಿದಂತೆ ಅನೇಕ ಜೀವಿಗಳಿಗೆ ಸಸ್ಯಗಳು ಪೋಷಕಾಂಶಗಳ ಪ್ರಮುಖ ಮೂಲವಾಗಿದೆ. ಅವು ವ್ಯಾಪಕ ಶ್ರೇಣಿಯ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ, ಜೊತೆಗೆ ಫೈಬರ್ಗಳು ಮತ್ತು ರೋಗನಿರೋಧಕಗಳಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತವೆ. ಸಸ್ಯ ಪೋಷಣೆಯು ಸಸ್ಯಗಳು ಪೋಷಕಾಂಶಗಳನ್ನು ಹೇಗೆ ಹೀರಿಕೊಳ್ಳುತ್ತವೆ ಮತ್ತು ಬಳಸುತ್ತವೆ ಮತ್ತು ಪೌಷ್ಟಿಕಾಂಶದ ಅಸಮತೋಲನಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಅಧ್ಯಯನವಾಗಿದೆ. ಇದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಸಸ್ಯವು ಬೆಳೆಯುತ್ತಿರುವ ಮಣ್ಣಿನ ಪ್ರಕಾರ, ಸೂರ್ಯನ ಬೆಳಕು ಮತ್ತು ನೀರಿನ ಲಭ್ಯತೆ ಮತ್ತು ಸಸ್ಯದ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯತೆಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಸಸ್ಯಗಳ ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಗೆ ಸರಿಯಾದ ಪೋಷಣೆ ಅತ್ಯಗತ್ಯ, ಮತ್ತು ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.KSEEB 7th Standard Science Chapter-1 Solutions In kannada.
ಅಭ್ಯಾಸ-Nutrition In Plants Class 7.
೧). ಜೀವಿಗಳು ಆಹಾರವನ್ನು ಏಕೆ ಸೇವಿಸಬೇಕು?.
ಎಲ್ಲ ಜೀವಿಗಳಿಗೂ ಆಹಾರದ ಆವಶ್ಯಕತೆ ಇದೆ, ಜೀವಿಗಳು ಆಹಾರವನ್ನು ಸೇವಿಸಲು ಹಲವಾರು ಕಾರಣಗಳಿವೆ-
೧.ಆಹಾರ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ.
೨.ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಆಹಾರ ಒದಗಿಸುತ್ತದೆ.
೩ದೇಹದಲ್ಲಿ ಹಾನಿಗೊಳಗಾದ ಮತ್ತು ಗಾಯಗೊಂಡ ಭಾಗಗಳನ್ನು ಸರಿಪಡಿಸಲು ನೆರವಾಗುತ್ತದೆ.
೪.ಆಹಾರ ಮಾರಕ ಕಾಯಿಲೆಗಳ ವಿರುದ್ಧ ಕವಚವನ್ನು ಒದಗಿಸುತ್ತದೆ.
೫.ಅನೇಕ ಸೋಂಕುಗಳು/ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ
೨). ಪರಾವಲಂಬಿ ಮತ್ತು ಕೊಳೆತಿನಿಗಳ ನಡುವಣ ವ್ಯತ್ಯಾಸವನ್ನು ತಿಳಿಸಿ.
೩). ಎಲೆಯಲ್ಲಿ ಪಿಷ್ಟದ ಇರುವಿಕೆಯನ್ನು ಹೇಗೆ ಪರೀಕ್ಷಿಸುವಿರಿ?
ಎಲೆಗಳಲ್ಲಿ ಪಿಷ್ಟದ ಇರುವಿಕೆಯನ್ನು ಅಯೋಡಿನ್ ಪರೀಕ್ಷೆಯಿಂದ ಪರೀಕ್ಷಿಸಬಹುದು. ನಾವು ಎಲೆಯಿಂದ ಕ್ಲೋರೊಫಿಲ್ ಅನ್ನು ಆಲ್ಕೋಹಾಲ್ನಲ್ಲಿ ಕುದಿಸಿ ನಂತರ 2 ಹನಿ ಅಯೋಡಿನ್ ದ್ರಾವಣವನ್ನು ಹಾಕಿದಾಗ, ಅದರ ಬಣ್ಣ ನೀಲಿ ಬಣ್ಣಕ್ಕೆ ಬದಲಾಗುವುದು ಪಿಷ್ಟದ ಉಪಸ್ಥಿತಿಯನ್ನು ಸೂಚಿಸುತ್ತದೆ.
೪). ಹಸಿರು ಸಸ್ಯಗಳಲ್ಲಿ ಆಹಾರ ಸಂಶ್ಲೇಷಣ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ ಕೊಡಿ.
ಸಸ್ಯದ ಎಲೆಗಳು ಕ್ಲೋರೊಫಿಲ್ (ಪತ್ರಹರಿತ್ತು) ಎಂಬ ಹಸಿರು ರ್ಬೆಕೆಯನ್ನು ಹೊಂದಿರುತ್ತವೆ. ಸೂರ್ಯನ ಬೆಳಕಿನಲ್ಲಿರುವ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಅದು ಲೆಗಳಿಗೆ ಸಹಾಯ ಮಾಡುತ್ತದೆ. ಈ ಶಕ್ತಿಯು ಕಾರ್ಬನ್ ಡೈಆಕ್ಸೆಡ್ ಮತ್ತು ನೀರಿನಿಂದ ಆಹಾರವನ್ನು ಸಂಶ್ಲೇಷಿಸಲು ಬಳಕೆಯಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಆಹಾರ ಸಂಶ್ಲೇಷಣೆ ನಡೆಯುವುದರಿಂದ ಇದಕ್ಕೆ ದ್ಯುತಿಸಂಶ್ಲೇಷಣೆ (photosynthesis) ಎನ್ನುವರು (ದ್ಯುತಿ = ಬೆಳಕು, ಸಂಶ್ಲೇಷಣೆ = ತಯಾರಿಸುವುದು). ದ್ಯುತಿಸಂಶ್ಲೇಷಣ ಪ್ರಕ್ರಿಯೆ ನಡೆಯಲು ಕ್ಲೋರೊಫಿಲ್, ಸೂರ್ಯನ ಬೆಳಕು, ಕಾರ್ಬನ್ ಡೈಆಕ್ಸೆಡ್ ಮತ್ತು ನೀರು ಅವಶ್ಯಕ. ಎಲೆಗಳಿಂದ ಹೀರಿಕೆಯಾದ ಸೌರಶಕ್ತಿಯು ಸಸ್ಯಗಳಲ್ಲಿ ಆಹಾರದ ರೂಪದಲ್ಲಿ ಸಂಗ್ರಹಿಸಲ್ಪಡುತ್ತದೆ.
೫). ಸಸ್ಯಗಳು ಆಹಾರದ ಪ್ರಾಥಮಿಕ ಮೂಲಗಳು ಎಂಬುದನ್ನು ರೇಖಾಚಿತ್ರದ ಮೂಲಕ ತೋರಿಸಿ.
ಬಿಟ್ಟ ಸ್ಥಳ ತುಂಬಿ.Nutrition In Plants Class 7 Solutions.
a).ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸುವುದರಿಂದ ಹಸಿರು ಸಸ್ಯಗಳನ್ನು _______ ಎನ್ನುವರು.
-ಸ್ವಪೋಷಕಗಳು
b). ಸಸ್ಯಗಳಿಂದ ಸಂಶ್ಲೇಸಲ್ಪಟ್ಟ ಆಹಾರವು ________ ರೂಪದಲ್ಲಿ ಸಂಗ್ರಹವಾಗುವುದು.
-ಪಿಷ್ಟದ
c).ದ್ಯುತಿಸಂಶ್ಲೇಷಣೆಯಲ್ಲಿ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ __________.
-ಕ್ಲೋರೋಫಿಲ್
d).ಸಸ್ಯಗಳು ದ್ಯುತಿ ಸಂಶ್ಲೇಷಣೆಯಲ್ಲಿ __________ ಅನ್ನು ಒಳತೆಗೆದುಕೊಳ್ಳುತ್ತವೆ ಮತ್ತು __________ ಅನ್ನು ಬಿಡುಗಡೆ ಮಾಡುತ್ತವೆ.
ಸಸ್ಯಗಳು ದ್ಯುತಿ ಸಂಶ್ಲೇಷಣೆಯಲ್ಲಿ ಕಾರ್ಬನ್ ಡೈಆಕ್ಸೆಡ್ಅನ್ನು ಒಳತೆಗೆದುಕೊಳ್ಳುತ್ತವೆ ಮತ್ತು ಆಮ್ಲಜನಕ ಅನ್ನು ಬಿಡುಗಡೆ ಮಾಡುತ್ತವೆ.
1).ತೆಳುವಾದ, ಕೊಳವೆಯಾಕಾರದ ಹಳದಿ ಬಣ್ಣದ ಕಾಂಡ ಹೊಂದಿರುವ ಪರಾವಲಂಬಿ ಸಸ್ಯ-ಕಸ್ಕ್ಯೂಟ
2).ಭಾಗಶಃ ಸ್ವಪೋಷಿತ ಸಸ್ಯ.-ಕೀಟಾಹಾರಿ ಸಸ್ಯ
3).ಎಲೆಗಳು ಅನಿಲ ವಿನಿಮಯ ನಡೆಸುವ ರಂಧ್ರಗಳು.-ಪತ್ರ ರಂದ್ರಗಳು
ಸರಿ ಉತ್ತರವನ್ನು ಗುರುತು ಮಾಡಿ.Nutrition In Plants Class 7 Solutions.
ಎ). ಕಸ್ಕ್ಯೂಟ ಇದಕ್ಕೆ ಉದಾಹರಣೆ.
ಅ) ಸ್ವಪೋಷಕ ಆ) ಪರಾವಲಂಬಿ ಇ) ಕೊಳೆತಿನಿ ಈ)ಅತಿಥೇಯ ಸಸ್ಯ
ಬಿ). ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ.
ಅ) ಕಸ್ಕ್ಯೂಟ. ಆ) ದಾಸವಾಳ ಇ) ಹೂಜಿ ಗಿಡ. ಈ) ಗುಲಾಬಿ
೯). ಕಾಲಂ-೧ ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ-೨ ರಲ್ಲಿ ಇರುವ ಸೂಕ್ತ ಅಂಶಗಳೊಂದಿಗೆ ಹೊಂದಿಸಿ.7th Standard Science Notes 1st lesson.
Answers👇
ಹೇಳಿಕೆಗಳು ಸರಿಯಾಗಿದ್ದಲ್ಲಿ ಸರಿ ಎಂದು, ತಪ್ಪಾಗಿದ್ದಲ್ಲಿ ತಪ್ಪು ಎಂದು ಗುರ್ತಿಸಿ.
ಅ). ದ್ಯುತಿಸಂಶ್ಲೇಷಣೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. (ಸರಿ/ ತಪ್ಪು)-ತಪ್ಪು
ಆ). ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸಿಕೊಳ್ಳುವ ಸಸ್ಯಗಳನ್ನು ಕೊಳೆತಿನಿಗಳೆನ್ನುವರು. (ಸರಿ/ ತಪ್ಪು)- ತಪ್ಪು
ಇ). ದ್ಯುತಿಸಂಶ್ಲೇಷಣೆಯ ಉತ್ಪನ್ನವು ಪ್ರೋಟೀನ್ ಅಲ್ಲ.
(ಸರಿ/ ತಪ್ಪು)- ಸರಿ
ಈ). ದ್ಯುತಿಸಂಶ್ಲೇಷಣೆಯಲ್ಲಿ ಸೌರಶಕ್ತಿಯ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ. (ಸರಿ/ ತಪ್ಪು) –ಸರಿ
ಅ).ದ್ಯುತಿಸಂಶ್ಲೇಷಣೆಗಾಗಿ ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಸಸ್ಯದ ಯಾವ ಭಾಗ ಒಳತೆಗೆದುಕೊಳ್ಳುತ್ತದೆ.
ಎ) ಬೇರುರೋಮ. ಬಿ) ಪತ್ರರಂಧ್ರಗಳು ಸಿ) ಎಲೆಯ ಸಿರೆಗಳು ಡಿ) ದಳಗಳು
೧೨). ಕೆಳಗಿನವುಗಳಲ್ಲಿ ಸರಿ ಉತ್ತರ ಆರಿಸಿ :
ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಸಸ್ಯಗಳು ಮುಖ್ಯವಾಗಿ ಇವುಗಳ ಮೂಲಕ ಒಳಗೆಳೆದುಕೊಳ್ಳುತ್ತವೆ:
ಅ)ಬೇರುಗಳು ಆ) ಕಾಂಡ. ಇ) ಹೂಗಳು ಈ)ಎಲೆಗಳು
೧೩). ಬಹಳಷ್ಟು ಹಣ್ಣು ಮತ್ತು ತರಕಾರಿ ಸಸ್ಯಗಳನ್ನು ರೈತರು ದೊಡ್ಡದಾದ ಹಸಿರುಮನೆಗಳಲ್ಲಿ ಏಕೆ ಬೆಳೆಯುತ್ತಾರೆ? ಇದರಿಂದ ರೈತರಿಗೆ ಆಗುವ ಅನುಕೂಲಗಳೇನು?
ಸಸ್ಯವು ಬೆಳೆಯುತ್ತಿರುವ ಮಣ್ಣಿನ ಪ್ರಕಾರ, ಸೂರ್ಯನ ಬೆಳಕು ಮತ್ತು ನೀರಿನ ಲಭ್ಯತೆ ಮತ್ತು ಸಸ್ಯದ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯತೆಗಳನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಸಸ್ಯಗಳ ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಗೆ ಸರಿಯಾದ ಪೋಷಣೆ ಅತ್ಯಗತ್ಯ, ಮತ್ತು ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯದ ಮೇಲೆ ಹಸಿರುಮನೆ ಗಮನಾರ್ಹ ಪರಿಣಾಮ ಬೀರುತ್ತದೆ.ಇವೆಲ್ಲುವುಗಳ ಸಮತೋಲನ ಮಾಡಲು ಇದು ನೆರವಾಗುತ್ತದೆ. ರೈತರು ಇದರ ಮೂಲಕ ಹೆಚ್ಚಿನ ಬೆಳೆ ಉತ್ಪಾದನೆ ಮಾಡಿ , ಉತ್ತಮ ಇಳುವರಿ ಪಡೆಯಬಹುದು.
ಈ ಒಂದು ಬ್ಲಾಗ್ ಲೇಖನದಲ್ಲಿNutrition In Plants Class 7 Solutions in Kannada 7ನೇ ತರಗತಿ ವಿಜ್ಞಾನ ಸಸ್ಯಗಳಲ್ಲಿ ಪೋಷಣೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.
Nutrition In Plants Class 7 FAQs-
ಪೋಷಕಗಳು (Nutrients) ಎಂದರೇನು?
ಆಹಾರದ ಘಟಕಗಳಾದ ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೊಟೀನ್, ವಿಟಮಿನ್ ಮತ್ತು ಖನಿಜ ಲವಣಗಳನ್ನು ಪೋಷಕಗಳು ಎನ್ನುವರು.ಪೋಷಕಗಳು ಜೀವಿಗಳ ದೇಹ ನಿರ್ಮಾಣಕ್ಕೆ, ಹಾನಿಗೊಳಗಾದ ದೇಹದ ಭಾಗಗಳ ದುರಸ್ತಿಗೆ ಮತ್ತು ಜೈವಿಕ ಕ್ರಿಯೆಗಳಿಗೆ ಬೇಕಾದ ಶಕ್ತಿಯನ್ನು ಪಡೆಯಲು ಸಾಮರ್ಥ್ಯ ನೀಡುತ್ತವೆ.
ಪೋಷಣೆ (nutrition). ಎಂದರೇನು?
ಒಂದು ಜೀವಿಯು ಆಹಾರ ಪಡೆಯುವ ಮತ್ತು ದೇಹದಲ್ಲಿ ಅದನ್ನು ಬಳಸಿಕೊಳ್ಳುವ ವಿಧಾನವೇ ಪೋಷಣೆ (nutrition).
1 thought on “Nutrition In Plants Class 7 Best Solutions in Kannada-ಸಸ್ಯಗಳಲ್ಲಿ ಪೋಷಣೆ ಮಾದರಿಉತ್ತರಗಳು.”