Solutions for Class 7 Science Respiration in Organisms in kannada.

Solutions for Class 7 Science Respiration in Organisms in kannada medium 7ನೇ ತರಗತಿ ವಿಜ್ಞಾನ ಜೀವಿಗಳಲ್ಲಿ ಉಸಿರಾಟ jeevigalalli usiraata ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Solutions for Class 7 Science Chapter 10 Respiration in Organisms

Solutions for Class 7 Science Respiration in Organisms in kannada

-Important Points

  • ಜೀವಿಗಳು ಬದುಕಲು ಉಸಿರಾಟ ಅವಶ್ಯಕ. ಇದು ಆಹಾರದಿಂದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
  • ನಾವು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡ ಆಕ್ಸಿಜನ್, ಗ್ಲೂಕೋಸ್‌ಅನ್ನು ಕಾರ್ಬನ್ ಡೈಆಕ್ಸೆöÊಡ್ ಮತ್ತು ನೀರನ್ನಾಗಿ ವಿಭಜಿಸಲು ಉಪಯೋಗಿಸಲ್ಪಡುತ್ತದೆ. ಈ ಕ್ರಿಯೆಯಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ.
  • ಜೀವಿಗಳ ದೇಹದ ಜೀವಕೋಶಗಳಲ್ಲಿ ಗ್ಲೂಕೋಸ್‌ನ ವಿಭಜನೆ ನಡೆಯುತ್ತದೆ (ಕೋಶೀಯ ಉಸಿರಾಟ).
  • ಆಕ್ಸಿಜನ್‌ಅನ್ನು ಉಪಯೋಗಿಸಿಕೊಂಡು ಆಹಾರ ವಿಭಜಿಸಲ್ಪಟ್ಟರೆ ಅದನ್ನು ಆಕ್ಸಿಜನ್‌ಸಹಿತ ಉಸಿರಾಟ ಎನ್ನುವರು. ವಿಭಜನೆಯು ಆಕ್ಸಿಜನ್‌ನ ಬಳಕೆ ಇಲ್ಲದೇ ಆದರೆ ಆ ಉಸಿರಾಟವನ್ನು ಆಕ್ಸಿಜನ್‌ರಹಿತ ಉಸಿರಾಟ ಎನ್ನುವರು.
  • ತೀವ್ರ ವ್ಯಾಯಾಮದ ಸಂದರ್ಭದಲ್ಲಿ ನಮ್ಮ ಸ್ನಾಯುಕೋಶಗಳಿಗೆ ಆಕ್ಸಿಜನ್ ಪೂರೈಕೆಯ ಕೊರತೆಯುಂಟಾದಾಗ ಆಕ್ಸಿಜನ್‌ರಹಿತ ಉಸಿರಾಟದಿಂದ ಆಹಾರವು ವಿಭಜಿಸಲ್ಪಡುತ್ತದೆ.
  • ಜೀವಿಯೊಂದು ಆಕ್ಸಿಜನ್‌ಯುಕ್ತ ಗಾಳಿಯನ್ನು ಒಳತೆಗೆದುಕೊಂಡು ಕಾರ್ಬನ್ ಡೈಆಕ್ಸೆöÊಡ್‌ಯುಕ್ತ ಗಾಳಿಯನ್ನು ಹೊರಬಿಡುವ ಶ್ವಾಸಕ್ರಿಯೆಯು ಉಸಿರಾಟದ ಒಂದು ಭಾಗ. ಅನಿಲಗಳ ವಿನಿಮಯ ನಡೆಸುವ ಉಸಿರಾಟದ ಅಂಗಗಳು ವಿವಿಧ ಜೀವಿಗಳಲ್ಲಿ ಬೇರೆ ಬೇರೆಯಾಗಿರುತ್ತವೆ.
  • ಉಚ್ಛ್ವಾಸದಲ್ಲಿ ನಮ್ಮ ಶ್ವಾಸಕೋಶಗಳು ಹಿಗ್ಗುತ್ತವೆ ಮತ್ತು ನಿಶ್ವಾಸದಲ್ಲಿ ಗಾಳಿಯು ಹೊರ ಹೋದಂತೆ ಮೂಲಸ್ಥಿತಿಗೆ ಹಿಂತಿರುಗುತ್ತವೆ.
  • ದೈಹಿಕ ಚಟುವಟಿಕೆ ಹೆಚ್ಚಾದರೆ ಶ್ವಾಸಕ್ರಿಯೆಯ ದರವು ಹೆಚ್ಚಾಗುತ್ತದೆ.
  • ಹಸು, ಎಮ್ಮೆ, ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳಲ್ಲಿ ಉಸಿರಾಟದ ಅಂಗಗಳು ಮತ್ತು ಶ್ವಾಸಕ್ರಿಯೆಯು ಮಾನವನಲ್ಲಿ ಇರುವಂತೆಯೇ ಇರುತ್ತದೆ.
  • ಎರೆಹುಳುವಿನಲ್ಲಿ ಅನಿಲಗಳ ವಿನಿಮಯವು ಒದ್ದೆಚರ್ಮದ ಮೂಲಕ ನಡೆಯುತ್ತದೆ. 
  • ಮೀನುಗಳಲ್ಲಿ ಕಿವಿರುಗಳ ಮೂಲಕ ಮತ್ತು ಕೀಟಗಳಲ್ಲಿ ಶ್ವಾಸನಾಳಗಳ ಮೂಲಕ ನಡೆಯುತ್ತದೆ.
  • ಸಸ್ಯದ ಬೇರುಗಳು ಮಣ್ಣಿನಲ್ಲಿರುವ ಗಾಳಿಯನ್ನು ಪಡೆದುಕೊಳ್ಳುತ್ತವೆ. ಎಲೆಗಳಲ್ಲಿರುವ ಪತ್ರರಂಧ್ರಗಳೆಂಬ ಸೂಕ್ಷ್ಮ ರಂಧ್ರಗಳ ಮೂಲಕ ಅನಿಲಗಳ ವಿನಿಮಯ ನಡೆಯುತ್ತದೆ. ಸಸ್ಯ ಜೀವಕೋಶಗಳಲ್ಲಿ ಗ್ಲೂಕೋಸ್ ವಿಭಜನೆ ಇತರ ಜೀವಿಗಳಂತೆಯೇ ನಡೆಯುತ್ತದೆ.

Solutions for Class 7 Science Respiration in Organisms in kannada ಅಭ್ಯಾಸಗಳು-

೧. ಓಟವನ್ನು ಮುಗಿಸಿದ ಕ್ರೀಡಾಳುಗಳ ಶ್ವಾಸಕ್ರಿಯೆಯು ಸಾಮಾನ್ಯ ಶ್ವಾಸಕ್ರಿಯೆಗಿಂತ ವೇಗವಾಗಿ ಮತ್ತು ದೀರ್ಘವಾಗಿ ಇರುತ್ತದೆ. ಏಕೆ?

ಉತ್ತರ- ದೈಹಿಕ ಚಟುವಟಿಕೆ ಹೆಚ್ಚಾದರೆ ಶ್ವಾಸ ಕ್ರಿಯೆ ದರವು ಹೆಚ್ಚಾಗುತ್ತದೆ. ಕಠಿಣವಾದ ವ್ಯಾಯಾಮ ಮಾಡುವಾಗ, ವೇಗವಾಗಿ ಓಡುವಾಗ, ಸೈಕಲ್ ತಿಳಿಯುವಾಗ, ಗಂಟೆ ಕಟ್ಟಲೆ ನಡೆಯುವಾಗ ಅಥವಾ ಭಾರವಾದ ತೂಕ ಎತ್ತುವಾಗ ಶಕ್ತಿಯ ಬೇಡಿಕೆ ಹೆಚ್ಚು. ಆದರೆ ಶಕ್ತಿ ಬಿಡುಗಡೆಗೆ ಬೇಕಾದ ಆಕ್ಸಿಜನ್ ನ ಪೂರೈಕೆ ಪರಿಮಿತವಾಗಿರುತ್ತದೆ. ಆಗ ಶಕ್ತಿಯ ಬೇಡಿಕೆಯನ್ನು ಪೂರೈಸಲು ಶ್ವಾಸಕ್ರಿಯೆಯು ಸಾಮಾನ್ಯ ಶ್ವಾಸ ಕ್ರಿಯೆಗಿಂತ ವೇಗವಾಗಿ ಮತ್ತು ದೀರ್ಘವಾಗಿ ಇರುತ್ತದೆ.

೨. ಆಕ್ಸಿಜನ್‌ಸಹಿತ ಮತ್ತು ಆಕ್ಸಿಜನ್‌ರಹಿತ ಉಸಿರಾಟಗಳ ನಡುವಣ ಸಾಮ್ಯತೆಗಳು ಮತ್ತು ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

ಆಕ್ಸಿಜನ್‌ಸಹಿತ ಮತ್ತು ಆಕ್ಸಿಜನ್‌ರಹಿತ ಉಸಿರಾಟಗಳ ನಡುವಣ ಸಾಮ್ಯತೆಗಳು

Solutions for Class 7 Science Chapter 10 Respiration in Organisms

ಆಕ್ಸಿಜನ್‌ಸಹಿತ ಮತ್ತು ಆಕ್ಸಿಜನ್‌ರಹಿತ ಉಸಿರಾಟಗಳ ನಡುವಣ ವ್ಯತ್ಯಾಸಗಳು

Solutions for Class 7 Science Chapter 10 Respiration in Organisms

೩. ಹೆಚ್ಚು ಧೂಳು ತುಂಬಿದ ಗಾಳಿಯನ್ನು ಒಳತೆಗೆದುಕೊಂಡಾಗ ನಾವು ಸಾಮಾನ್ಯವಾಗಿ ಸೀನುತ್ತೇವೆ. ಏಕೆ?

Solutions for Class 7 Science Chapter 10 Respiration in Organisms

೪. ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಪ್ರತಿಯೊಂದನ್ನು3/4 ರಷ್ಟು ನೀರಿನಿಂದ ತುಂಬಿಸಿ. ಅವುಗಳನ್ನುA , B ಮತ್ತು C ಎಂದು ಗುರುತು ಮಾಡಿ.A ಪ್ರನಾಳದಲ್ಲಿ ಒಂದು ಬಸವನಹುಳುವನ್ನು,B ಪ್ರನಾಳದಲ್ಲಿ ಒಂದು ಜಲಸಸ್ಯವನ್ನು ಮತ್ತು C ಪ್ರನಾಳದಲ್ಲಿ ಬಸವನಹುಳು ಮತ್ತು ಜಲಸಸ್ಯ ಎರಡನ್ನೂ ಇಡಿ. ಯಾವ ಪ್ರನಾಳದಲ್ಲಿCO2 ನ ಸಾರತೆ ಹೆಚ್ಚಾಗುತ್ತದೆ?

Solutions for Class 7 Science Chapter 10 Respiration in Organisms

ಉತ್ತರ- ಟೆಸ್ಟ್ ಟ್ಯೂಬ್ ACO2 ನ ಅತ್ಯಧಿಕ ಸಾಂದ್ರತೆಯನ್ನು ಹೊಂದಿರುತ್ತದೆ ಏಕೆಂದರೆ ಟೆಸ್ಟ್ ಟ್ಯೂಬ್ A ಬಸವನನ್ನು ಹೊಂದಿದ್ದು ಅದು CO2 ಅನ್ನು ಬಿಡುಗಡೆ / ಹೊರಹಾಕುತ್ತದೆ. ಒಂದು ಸಸ್ಯವು B ಮತ್ತು C ಎರಡೂ  ಪರೀಕ್ಷಾ ಟ್ಯೂಬ್‌ಗಳಲ್ಲಿಯೂ ಇರುವುದರಿಂದ, CO2 ಸಾಂದ್ರತೆಯನ್ನು ಕಡಿಮೆ ಮಾಡಲು ಸಸ್ಯವು CO2 ಅನ್ನು ದ್ಯುತಿಸಂಶ್ಲೇಷಣೆಗೆ ಬಳಕೆ ಮಾಡಿ, ಆಮ್ಲಜನಕ ಬಿಡುಗಡೆ ಮಾಡುತ್ತದೆ. ಹೀಗಾಗಿ, ಈ ಕೊಳವೆಗಳಲ್ಲಿ CO2 ನ ಕಡಿಮೆ ಸಾಂದ್ರತೆ ಇರುತ್ತದೆ.

Solutions for Class 7 Science Respiration in Organisms in kannada

೫. ಸರಿ ಉತ್ತರವನ್ನು ಗುರುತು ಮಾಡಿ :

(ಎ) ಜಿರಳೆಗಳಲ್ಲಿ ಗಾಳಿಯು ದೇಹದ ಒಳಪ್ರವೇಶಿಸುವ ಭಾಗ ________ .

(i) ಶ್ವಾಸಕೋಶಗಳು (ii) ಕಿವಿರುಗಳು (iii) ಸ್ಪೈರಕಲ್‌ಗಳು (iv) ಚರ್ಮ

ಉತ್ತರ- (iii) ಸ್ಪೈರಕಲ್‌ಗಳು 

Solutions for Class 7 Science Chapter 10 Respiration in Organisms

(ಬಿ) ತೀವ್ರ ವ್ಯಾಯಾಮದ ಸಮಯದಲ್ಲಿ ಇದರ ಸಂಗ್ರಹದಿಂದ ಕಾಲುಗಳಲ್ಲಿ ಸೆಳೆತ ಕಂಡುಬರುವುದು ___________ .

(i) ಕಾರ್ಬನ್ ಡೈ ಆಕ್ಸೈಡ್  (ii) ಲ್ಯಾಕ್ಟಿಕ್ ಆಮ್ಲ (iii) ಆಲ್ಕೋಹಾಲ್ (iv) ನೀರು

 ಉತ್ತರ- (ii) ಲ್ಯಾಕ್ಟಿಕ್ ಆಮ್ಲ

(ಸಿ) ವಿಶ್ರಾಂತಿ ಸ್ಥಿತಿಯಲ್ಲಿರುವ ವಯಸ್ಕ ವ್ಯಕ್ತಿಯಲ್ಲಿ ಪ್ರತಿ ನಿಮಿಷಕ್ಕೆ ಶ್ವಾಸಕ್ರಿಯೆಯ ದರದ ಸಾಮಾನ್ಯ ವ್ಯಾಪ್ತಿ ___________ .

(i) 9 – 12 (ii) 15 – 18 (iii) 21 – 24  (iv) 30 – 33

ಉತ್ತರ- (ii) 15 – 18

(ಡಿ) ನಿಶ್ವಾಸದ ಸಮಯದಲ್ಲಿ ಪಕ್ಕೆಲುಬುಗಳು __________ .

(i) ಹೊರಕ್ಕೆ ಚಲಿಸುತ್ತವೆ (ii) ಕೆಳಕ್ಕೆ ಚಲಿಸುತ್ತವೆ (iii) ಮೇಲಕ್ಕೆ ಚಲಿಸುತ್ತವೆ (iv) ಚಲಿಸುವುದೇ ಇಲ್ಲ

ಉತ್ತರ- (ii) ಕೆಳಕ್ಕೆ ಚಲಿಸುತ್ತವೆ 

೬. ಕಾಲಂ-I ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ-II ರಲ್ಲಿರುವ ಸೂಕ್ತ ಅಂಶಗಳೊಂದಿಗೆ ಹೊಂದಿಸಿ.

ಕಾಲಂ – Iಕಾಲಂ- II
(a) ಯೀಸ್ಟ್(i) ಎರೆಹುಳು
(b) ವಪೆ(ii) ಕಿವಿರುಗಳು
(c) ಚರ್ಮ(iii) ಆಲ್ಕೋಹಾಲ್
(d) ಎಲೆಗಳು(iv) ಎದೆಯ ಕುಹರ
(e) ಮೀನು(v) ಪತ್ರರಂಧ್ರ
(f) ಕಪ್ಪೆ(vi) ಶ್ವಾಸಕೋಶಗಳು ಮತ್ತು ಚರ್ಮ
(vii) ಶ್ವಾಸನಾಳಗಳು

ಉತ್ತರ-

ಕಾಲಂ – Iಕಾಲಂ- II
(a) ಯೀಸ್ಟ್(iii) ಆಲ್ಕೋಹಾಲ್
(b) ವಪೆ(iv) ಎದೆಯ ಕುಹರ
(c) ಚರ್ಮ(i) ಎರೆಹುಳು
(d) ಎಲೆಗಳು(v) ಪತ್ರರಂಧ್ರ
(e) ಮೀನು(ii) ಕಿವಿರುಗಳು
(f) ಕಪ್ಪೆ(vi) ಶ್ವಾಸಕೋಶಗಳು ಮತ್ತು ಚರ್ಮ

೭. ಹೇಳಿಕೆ ಸರಿ ಇದ್ದರೆ ಸರಿ ಎಂದು ತಪ್ಪಿದ್ದರೆ ತಪ್ಪು ಎಂದು ಗುರ್ತಿಸಿ.

(ಎ) ತೀವ್ರ ವ್ಯಾಯಾಮದ ಸಂದರ್ಭದಲ್ಲಿ ವ್ಯಕ್ತಿಯ ಶ್ವಾಸಕ್ರಿಯೆಯ ದರ ಕಡಿಮೆಯಾಗುತ್ತದೆ. (ಸರಿ/ತಪ್ಪು)

ಉತ್ತರ-ತಪ್ಪು

(ಬಿ) ಸಸ್ಯಗಳು ದ್ಯುತಿಸಂಶ್ಲೇಷಣೆಯನ್ನು ಹಗಲಿನಲ್ಲಿ ಮಾತ್ರ ಮತ್ತು ಉಸಿರಾಟವನ್ನು ರಾತ್ರಿಯಲ್ಲಿ ಮಾತ್ರ ನಡೆಸುತ್ತವೆ. (ಸರಿ/ತಪ್ಪು)

ಉತ್ತರ-ತಪ್ಪು

(ಸಿ) ಕಪ್ಪೆಗಳು ತಮ್ಮ ಚರ್ಮ ಹಾಗೂ ಶ್ವಾಸಕೋಶಗಳ ಮೂಲಕ ಶ್ವಾಸಕ್ರಿಯೆ ನಡೆಸುತ್ತವೆ.  (ಸರಿ/ತಪ್ಪು)

ಉತ್ತರ-ಸರಿ

(ಡಿ) ಮೀನುಗಳಲ್ಲಿ ಉಸಿರಾಟಕ್ಕಾಗಿ ಶ್ವಾಸಕೋಶಗಳಿವೆ. (ಸರಿ/ತಪ್ಪು)

ಉತ್ತರ-ತಪ್ಪು

(ಇ) ಉಚ್ಛ್ವಾಸದಲ್ಲಿ ಎದೆಯ ಕುಹರದ ಗಾತ್ರ ಹೆಚ್ಚಾಗುತ್ತದೆ. (ಸರಿ/ತಪ್ಪು)

ಉತ್ತರ-ಸರಿ

೮. ಜೀವಿಗಳ ಉಸಿರಾಟಕ್ಕೆ ಸಂಬಂಧಿಸಿದ ಕೆಲವು ಪದಗಳು ಅಡಗಿಕೊಂಡಿರುವ ಅಕ್ಷರಗಳ ಚೌಕವನ್ನು ಕೆಳಗೆ ಕೊಡಲಾಗಿದೆ. ಆ ಪದಗಳು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಅಥವಾ ಕರ್ಣಗಳಲ್ಲಿ, ಹೀಗೆ ಯಾವ ದಿಕ್ಕಿನಲ್ಲಾದರೂ ಇರಬಹುದು. ನಿಮ್ಮ ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಪದಗಳನ್ನು ಕಂಡುಹಿಡಿಯಿರಿ. ಆ ಪದಗಳಿಗೆ ಸಂಬಂಧಿಸಿದ ಸುಳಿವುಗಳನ್ನು ಚೌಕದ ಕೆಳಗೆ ನೀಡಲಾಗಿದೆ.

Solutions for Class 7 Science Chapter 10 Respiration in Organisms

(ಎ) ಕೀಟಗಳ ಗಾಳಿ ಕೊಳವೆಗಳು.

ಉತ್ತರ-ಶ್ವಾಸನಾಳ 

(ಬಿ) ಎದೆಯ ಕುಹರವನ್ನಾವರಿಸಿರುವ ಅಸ್ಥಿ ರಚನೆಗಳು.

ಉತ್ತರ-ಪಕ್ಕೆಲುಬು

(ಸಿ) ಎದೆಯ ಕುಹರದ ಬುಡದಲ್ಲಿರುವ ಸ್ನಾಯುವಿನ ಹಾಳೆ.

ಉತ್ತರ-ವಪೆ

(ಡಿ) ಎಲೆಯ ಮೇಲ್ಮೈಯಲ್ಲಿರುವ ಸೂಕ್ಷ್ಮ ರಂಧ್ರಗಳು.

ಉತ್ತರ-ಪತ್ರರಂದ್ರ

(ಇ) ಕೀಟಗಳ ದೇಹದ ಪಾರ್ಶ್ವಗಳಲ್ಲಿರುವ ಸಣ್ಣರಂಧ್ರಗಳು.

ಉತ್ತರ-ಸ್ಪೈರಕಲ್ಸ್

(ಎಫ್) ಮಾನವರ ಉಸಿರಾಟದ ಅಂಗಗಳು.

ಉತ್ತರ-ಶ್ವಾಸಕೋಶಗಳು

(ಜಿ) ಉಚ್ಛ್ವಾಸದ ಮೂಲಕ ನಾವು ಗಾಳಿಯನ್ನು ಒಳಗೆಳೆದುಕೊಳ್ಳುವ ರಂಧ್ರಗಳು

ಉತ್ತರ-ನಾಸಿಕರಂಧ್ರಗಳು

(ಎಚ್) ಆಕ್ಸಿಜನ್‌ರಹಿತವಾಗಿ ಉಸಿರಾಡುವ ಒಂದು ಜೀವಿ.

ಉತ್ತರ-ಯೀಸ್ಟ್

(ಐ) ಶ್ವಾಸನಾಳ ವ್ಯವಸ್ಥೆ ಹೊಂದಿರುವ ಜೀವಿ.

ಉತ್ತರ-ಜಿರಲೆ

Solutions for Class 7 Science Chapter 10 Respiration in Organisms

೯. ಪರ್ವತಾರೋಹಿಗಳು ತಮ್ಮೊಡನೆ ಆಕ್ಸಿಜನ್ ಕೊಂಡೊಯ್ಯುತ್ತಾರೆ. ಏಕೆಂದರೆ,

(ಎ) 5km ಗಿಂತ ಹೆಚ್ಚಿನ ಎತ್ತರದಲ್ಲಿ ಗಾಳಿ ಇರುವುದಿಲ್ಲ

(ಬಿ) ವ್ಯಕ್ತಿಯೊಬ್ಬನಿಗೆ ಅಲ್ಲಿ ದೊರಕುವ ಗಾಳಿಯ ಪ್ರಮಾಣ ನೆಲದ ಮೇಲೆ ದೊರಕುವುದಕ್ಕಿಂತ ಕಡಿಮೆ.

(ಸಿ) ನೆಲದ ಮೇಲಿರುವುದಕ್ಕಿಂತ ಗಾಳಿಯ ತಾಪ ಅಲ್ಲಿ ಹೆಚ್ಚಿರುತ್ತದೆ.

(ಡಿ) ನೆಲದ ಮೇಲಿರುವುದಕ್ಕಿಂತ ಗಾಳಿಯ ಒತ್ತಡ ಅಲ್ಲಿ ಹೆಚ್ಚಿರುತ್ತದೆ.

ಉತ್ತರ-(ಬಿ) ವ್ಯಕ್ತಿಯೊಬ್ಬನಿಗೆ ಅಲ್ಲಿ ದೊರಕುವ ಗಾಳಿಯ ಪ್ರಮಾಣ ನೆಲದ ಮೇಲೆ ದೊರಕುವುದಕ್ಕಿಂತ ಕಡಿಮೆ.

Class 7 Science Respiration In Organisms  – FAQs.

ಸಸ್ಯಗಳಲ್ಲಿ ಅನಿಲಗಳ ವಿನಿಮಯ ಹೇಗೆ ನಡೆಯುತ್ತದೆ?

ಸಸ್ಯದ ಬೇರುಗಳು ಮಣ್ಣಿನಲ್ಲಿರುವ ಗಾಳಿಯನ್ನು ಪಡೆದುಕೊಳ್ಳುತ್ತವೆ. ಎಲೆಗಳಲ್ಲಿರುವ ಪತ್ರರಂಧ್ರಗಳೆಂಬ ಸೂಕ್ಷ್ಮ ರಂಧ್ರಗಳ ಮೂಲಕ ಅನಿಲಗಳ ವಿನಿಮಯ ನಡೆಯುತ್ತದೆ.

ಆಕ್ಸಿಜನ್‌ಸಹಿತ ಉಸಿರಾಟ ಮತ್ತು ಆಕ್ಸಿಜನ್‌ರಹಿತ ಉಸಿರಾಟ ಎಂದರೇನು?

ಆಕ್ಸಿಜನ್‌ಅನ್ನು ಉಪಯೋಗಿಸಿಕೊಂಡು ಆಹಾರ ವಿಭಜಿಸಲ್ಪಟ್ಟರೆ ಅದನ್ನು ಆಕ್ಸಿಜನ್‌ಸಹಿತ ಉಸಿರಾಟ ಎನ್ನುವರು. ವಿಭಜನೆಯು ಆಕ್ಸಿಜನ್‌ನ ಬಳಕೆ ಇಲ್ಲದೇ ಆದರೆ ಆ ಉಸಿರಾಟವನ್ನು ಆಕ್ಸಿಜನ್‌ರಹಿತ ಉಸಿರಾಟ ಎನ್ನುವರು. 

ಎರೆಹುಳುವಿನಲ್ಲಿ ಅನಿಲಗಳ ವಿನಿಮಯ ಯಾವುದರ ಮೂಲಕ ನಡೆಯುತ್ತದೆ?

ಎರೆಹುಳುವಿನಲ್ಲಿ ಅನಿಲಗಳ ವಿನಿಮಯವು ಒದ್ದೆಚರ್ಮದ ಮೂಲಕ ನಡೆಯುತ್ತದೆ.

👉respiration in organisms class 7 solutions in Kannada medium PDF👈

Class 7 Science Question Answer In Kannada Medium

Leave a comment