Class 7 Science Light Solutions In Kannada Medium.

class 7 science light solutions In Kannada Medium 7ನೇ ತರಗತಿ ವಿಜ್ಞಾನ ಬೆಳಕು -Belaku- ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Class 7 Science Light Solutions In Kannada Medium.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ https://solutionshub.in/ ಗೆ ಹೃದಯ ಪೂರ್ವಕ ಸ್ವಾಗತ ಬೆಳಕು ಶಕ್ತಿಯ ಒಂದು ರೂಪವಾಗಿದೆ. ಬೆಳಕು ನಮಗೆ ನೋಡಲು ಸಹಾಯ ಮಾಡುವುದು ಭೌತಶಾಸ್ತ್ರ ಮತ್ತುಬೆಳಕಿನ ಅನ್ವಯಗಳನ್ನು ಆಪ್ಟಿಕ್ಸ್ ಎಂದು ಕರೆಯಲಾಗುತ್ತದೆ. ಈ ಅಧ್ಯಾಯದಲ್ಲಿ ಬೆಳಕಿನ ಸರಳ ರೇಖೀಯ ಚಲನೆ, ಪ್ರತಿಫಲನ, ಗೋಲಿಯ ದರ್ಪಣಗಳು, ಮಸೂರಗಳು, ಅವುಗಳ ಅನ್ವಯಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವೆಲ್ಲರೂ ತಿಳಿದಿದ್ದೀರಿ.ಈ ಒಂದು ಬ್ಲಾಗ್ ಲೇಖನದಲ್ಲಿclass 7 science light solutions In Kannada Medium 7ನೇ ತರಗತಿ ವಿಜ್ಞಾನ ಬೆಳಕು  Belaku.-ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

Class 7 Science Light Solutions – Important Points-

  • ಸಮತಲ ದರ್ಪಣದಿಂದ ಉಂಟಾಗುವ ಪ್ರತಿಬಿಂಬವು ನೇರವಾಗಿರುತ್ತದೆ. ಇದು ಮಿಥ್ಯವಾಗಿದ್ದು ವಸ್ತುವಿನ ಗಾತ್ರದಷ್ಟೇ ಇರುತ್ತದೆ. ವಸ್ತುವು ದರ್ಪಣದ ಮುಂದೆ ಇರುವಷ್ಟೇ ದೂರದಲ್ಲಿ ಪ್ರತಿಬಿಂಬವು ದರ್ಪಣದ ಹಿಂಭಾಗದಲ್ಲಿ ಉಂಟಾಗುತ್ತದೆ.
  • ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದಲ್ಲಿ ವಸ್ತುವಿನ ಎಡಭಾಗವು ಪ್ರತಿಬಿಂಬದ ಬಲಭಾಗದಲ್ಲಿ ಕಾಣುತ್ತದೆ ಮತ್ತು ವಸ್ತುವಿನ ಬಲಭಾಗವು ಪ್ರತಿಬಿಂಬದ ಎಡಭಾಗದಲ್ಲಿ ಇರುವಂತೆ ಕಾಣುತ್ತದೆ.
  • ನಿಮ್ನ ದರ್ಪಣವು ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ. ದರ್ಪಣದ ಬಹಳ ಸಮೀಪದಲ್ಲಿ ವಸ್ತುವನ್ನು ಇಟ್ಟಾಗ ಉಂಟಾದ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವರ್ಧಿತವಾಗಿರುತ್ತದೆ.
  • ಪೀನ ದರ್ಪಣದಲ್ಲಿ ಉಂಟಾದ ಪ್ರತಿಬಿಂಬವು ನೇರ, ಮಿಥ್ಯ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾಗಿರುತ್ತದೆ.
  • ಪೀನ ಮಸೂರವು ಸತ್ಯ ಮತ್ತು ತಲೆಕೆಳಕಾದ ಪ್ರತಿಬಿಂಬವನ್ನು ಉಂಟು ಮಾಡುತ್ತದೆ. ವಸ್ತುವನ್ನು ಮಸೂರಕ್ಕೆ ಬಹಳ ಸಮೀಪದಲ್ಲಿಟ್ಟಾಗ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವರ್ಧಿತವಾಗಿರುತ್ತದೆ. ವಸ್ತುಗಳನ್ನು ದೊಡ್ಡದಾಗಿ ನೋಡಲು ಬಳಸುವ ಪೀನ ಮಸೂರವನ್ನು ವರ್ಧಕ ಮಸೂರ ಎನ್ನುವರು.
  • ನಿಮ್ನ ಮಸೂರವು ಯಾವಾಗಲೂ ನೇರ, ಮಿಥ್ಯ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.
  • ಬಿಳಿಯ ಬೆಳಕು ಏಳು ಬಣ್ಣಗಳಿಂದ ಕೂಡಿದೆ.

Class 7 Science Light Solutions – ಅಭ್ಯಾಸಗಳು-

೧. ಖಾಲಿ ಸ್ಥಳ ತುಂಬಿ :

(ಎ) ಪರದೆಯ ಮೇಲೆ ಪಡೆಯಲಾಗದ ಪ್ರತಿಬಿಂಬವನ್ನು ________ ಎನ್ನುವರು.

ಉತ್ತರ-ಮಿಥ್ಯ ಪ್ರತಿಬಿಂಬ 

(ಬಿ) ಪೀನ ________ ದಿಂದ ಉಂಟಾದ ಪ್ರತಿಬಿಂಬವು ಯಾವಾಗಲೂ ಮಿಥ್ಯ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.

ಉತ್ತರ-ದರ್ಪಣ 

(ಸಿ) ಯಾವಾಗಲೂ ವಸ್ತುವಿನ ಗಾತ್ರದಷ್ಟೇ ಇರುವ ಪ್ರತಿಬಿಂಬವು __________ ದರ್ಪಣದಿಂದ ಉಂಟಾಗುತ್ತದೆ.

ಉತ್ತರ-ನಿಮ್ನ 

(ಡಿ) ಪರದೆಯ ಮೇಲೆ ಪಡೆಯಬಹುದಾದ ಪ್ರತಿಬಿಂಬವನ್ನು __________ ಪ್ರತಿಬಿಂಬ ಎನ್ನುವರು.

ಉತ್ತರ-ಸತ್ಯ 

(ಇ) ನಿಮ್ನ _______ ದಿಂದ ಉಂಟಾದ ಪ್ರತಿಬಿಂಬವನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ.

ಉತ್ತರ-ದರ್ಪಣ

೨. ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಸರಿ ಮತ್ತು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.

(ಎ) ಪೀನ ದರ್ಪಣದಿಂದ ನಾವು ವರ್ಧಿತ ಮತ್ತು ನೇರ ಪ್ರತಿಬಿಂಬವನ್ನು ಪಡೆಯಬಹುದು. (ಸರಿ/ತಪ್ಪು)

ತಉತ್ತರ-ಪ್ಪು

(ಬಿ) ನಿಮ್ನ ಮಸೂರವು ಯಾವಾಗಲೂ ಮಿಥ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ. (ಸರಿ/ತಪ್ಪು)

ಉತ್ತರ-ಸರಿ

(ಸಿ) ನಿಮ್ನ ದರ್ಪಣದಿಂದ ನೈಜ, ವರ್ಧಿತ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಪಡೆಯುತ್ತೇವೆ.(ಸರಿ/ತಪ್ಪು)

ಉತ್ತರ-ತಪ್ಪು

(ಡಿ) ಸತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ ಪಡೆಯಲಾಗುವುದಿಲ್ಲ. (ಸರಿ/ತಪ್ಪು)

ಉತ್ತರ-ತಪ್ಪು

(ಇ) ನಿಮ್ನ ದರ್ಪಣವು ಯಾವಾಗಲೂ ಸತ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ. (ಸರಿ/ತಪ್ಪು)

ಉತ್ತರ-ಸರಿ

೩. ಕಾಲಂ-I ರ ಅಂಶಗಳನ್ನು ಕಾಲಂ-II ರ ಸೂಕ್ತವಾದ ಒಂದು ಅಥವಾ ಹೆಚ್ಚಿನ ಅಂಶಗಳೊಂದಿಗೆ ಹೊಂದಿಸಿ.

ಕಾಲಂ – Iಕಾಲಂ – II
(a) ಸಮತಲ ದರ್ಪಣ(i) ವರ್ಧಕ ಮಸೂರವಾಗಿ ಬಳಸಲಾಗುತ್ತದೆ.
(b) ಪೀನ ದರ್ಪಣ(ii) ವಿಶಾಲವಾದ ಸ್ಥಳದಲ್ಲಿ ಹರಡಿರುವ ವಸ್ತುಗಳ ಪ್ರತಿಬಿಂಬವನ್ನುಂಟು ಮಾಡಬಲ್ಲದು.
(c) ಪೀನ ಮಸೂರ(iii) ಹಲ್ಲಿನ ದೊಡ್ಡದಾದ ಪ್ರತಿಬಿಂಬವನ್ನು ನೋಡಲು ದಂತ ವೈದ್ಯರು ಬಳಸುತ್ತಾರೆ.
(d) ನಿಮ್ನ ದರ್ಪಣ(iv) ಪ್ರತಿಬಿಂಬವು ಯಾವಾಗಲೂ ತಲೆಕೆಳಗಾಗಿ ಮತ್ತು ವರ್ಧಿತವಾಗಿರುತ್ತದೆ.
(e) ನಿಮ್ನ ಮಸೂರ(v) ಪ್ರತಿಬಿಂಬವು ನೇರ ಮತ್ತು ವಸ್ತುವಿನಷ್ಟೆ ಗಾತ್ರದ್ದಾಗಿರುತ್ತದೆ.
👀(vi) ಪ್ರತಿಬಿಂಬವು ನೇರವಾಗಿರುತ್ತದೆ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾಗಿರುತ್ತದೆ.

ಉತ್ತರ-

ಕಾಲಂ – Iಕಾಲಂ – II
(a) ಸಮತಲ ದರ್ಪಣ (v) ಪ್ರತಿಬಿಂಬವು ನೇರ ಮತ್ತು ವಸ್ತುವಿನಷ್ಟೆ ಗಾತ್ರದ್ದಾಗಿರುತ್ತದೆ.
(b) ಪೀನ ದರ್ಪಣ(ii) ವಿಶಾಲವಾದ ಸ್ಥಳದಲ್ಲಿ ಹರಡಿರುವ ವಸ್ತುಗಳ ಪ್ರತಿಬಿಂಬವನ್ನುಂಟು ಮಾಡಬಲ್ಲದು.
(c) ಪೀನ ಮಸೂರ(i) ವರ್ಧಕ ಮಸೂರವಾಗಿ ಬಳಸಲಾಗುತ್ತದೆ.
(d) ನಿಮ್ನ ದರ್ಪಣ(iii) ಹಲ್ಲಿನ ದೊಡ್ಡದಾದ ಪ್ರತಿಬಿಂಬವನ್ನು ನೋಡಲು ದಂತ ವೈದ್ಯರು ಬಳಸುತ್ತಾರೆ.
(e) ನಿಮ್ನ ಮಸೂರ(vi) ಪ್ರತಿಬಿಂಬವು ನೇರವಾಗಿರುತ್ತದೆ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾಗಿರುತ್ತದೆ.


೪. ಸಮತಲ ದರ್ಪಣ ಉಂಟುಮಾಡುವ ಪ್ರತಿಬಿಂಬದ ಲಕ್ಷಣಗಳನ್ನು ತಿಳಿಸಿ.

ಉತ್ತರ-

  • ಸಮತಲ ದರ್ಪಣದಿಂದ ಉಂಟಾಗುವ ಪ್ರತಿಬಿಂಬವು ನೇರವಾಗಿರುತ್ತದೆ. ಇದು ಮಿಥ್ಯವಾಗಿದ್ದು ವಸ್ತುವಿನ ಗಾತ್ರದಷ್ಟೇ ಇರುತ್ತದೆ. ವಸ್ತುವು ದರ್ಪಣದ ಮುಂದೆ ಇರುವಷ್ಟೇ ದೂರದಲ್ಲಿ ಪ್ರತಿಬಿಂಬವು ದರ್ಪಣದ ಹಿಂಭಾಗದಲ್ಲಿ ಉಂಟಾಗುತ್ತದೆ.
  • ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದಲ್ಲಿ ವಸ್ತುವಿನ ಎಡಭಾಗವು ಪ್ರತಿಬಿಂಬದ ಬಲಭಾಗದಲ್ಲಿ ಕಾಣುತ್ತದೆ ಮತ್ತು ವಸ್ತುವಿನ ಬಲಭಾಗವು ಪ್ರತಿಬಿಂಬದ ಎಡಭಾಗದಲ್ಲಿ ಇರುವಂತೆ ಕಾಣುತ್ತದೆ.

೫. ಸಮತಲ ದರ್ಪಣದಲ್ಲಿ ನೋಡಿದಾಗ ಮೂಲ ಅಕ್ಷರದಂತೆಯೇ ಕಾಣುವ ಇಂಗ್ಲಿಷ್ ವರ್ಣಮಾಲೆ ಅಥವಾ ನಿಮಗೆ ತಿಳಿದಿರುವ ಯಾವುದೇ ಭಾಷೆಯ ವರ್ಣಮಾಲೆಯ ಅಕ್ಷರಗಳನ್ನು ಕಂಡುಹಿಡಿಯಿರಿ. ನಿಮ್ಮ ವೀಕ್ಷಣೆಯನ್ನು ಚರ್ಚಿಸಿ.

ಉತ್ತರ-

A, H, I, M, O, T, U, V, W, X, ಮತ್ತು Y ವರ್ಣಮಾಲೆಗಳು ಸಮತಲ ಕನ್ನಡಿಯಲ್ಲಿ ಅಕ್ಷರದಂತೆಯೇ ಚಿತ್ರಗಳನ್ನು ರೂಪಿಸುತ್ತವೆ ಏಕೆಂದರೆ ಈ ವರ್ಣಮಾಲೆಗಳು ಪಾರ್ಶ್ವವಾಗಿ ಸಮ್ಮಿತೀಯವಾಗಿರುತ್ತವೆ.

೬. ಮಿಥ್ಯ ಪ್ರತಿಬಿಂಬ ಎಂದರೇನು? ಮಿಥ್ಯ ಪ್ರತಿಬಿಂಬವು ಉಂಟಾಗುವ ಸಂದರ್ಭವೊಂದನ್ನು ತಿಳಿಸಿ.

ಉತ್ತರ-

ಯಾವ ಪ್ರತಿಬಿಂಬಗಳನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲವೋ ಅವುಗಳನ್ನು ಮಿಥ್ಯ ಪ್ರತಿಬಿಂಬ ಎನ್ನುವರು. ಸಮತಲ ದರ್ಪಣದಿಂದ ಮಿಥ್ಯ ಪ್ರತಿಬಿಂಬ ಉಂಟಾಗುತ್ತದೆ. 

೭. ಪೀನ ಮತ್ತು ನಿಮ್ನ ಮಸೂರಗಳ ನಡುವಣ ಎರಡು ವ್ಯತ್ಯಾಸಗಳನ್ನು ತಿಳಿಸಿ.

ಉತ್ತರ-

ಪೀನ ಮಸೂರನಿಮ್ನ ಮಸೂರ
ಅಂಚಿಗಿಂತ ಮಧ್ಯದಲ್ಲಿ ದಪ್ಪನಾಗಿರುವ ಮಸೂರಗಳು ಪೀನ ಮಸೂರಗಳು.ಮಧ್ಯದಲ್ಲಿ ತೆಳುವಾಗಿದ್ದು ಅಂಚಿನಲ್ಲಿ ದಪ್ಪನಾಗಿರುವ ಮಸೂರಗಳು  ನಿಮ್ನ ಮಸೂರಗಳು
ಪೀನ ಮಸೂರವು ಸಾಮಾನ್ಯವಾಗಿ ತನ್ನ ಮೂಲಕ ಹಾಯುವ ಬೆಳಕನ್ನು ಕೇಂದ್ರೀಕರಿಸುತ್ತದೆ (ಒಳಮುಖವಾಗಿ ಬಾಗುತ್ತದೆ). ಆದ್ದರಿಂದ ಇದನ್ನು ಕೇಂದ್ರೀಕರಿಸುವ ಮಸೂರ ಎನ್ನುವರು.ನಿಮ್ನ ಮಸೂರವು ಬೆಳಕನ್ನು ವಿಕೇಂದ್ರೀಕರಿಸುತ್ತದೆ (ಹೊರಮುಖವಾಗಿ ಬಾಗುತ್ತದೆ) ಮತ್ತು ಇದನ್ನು ವಿಕೇಂದ್ರೀಕರಿಸುವ ಮಸೂರ ಎನ್ನುವರು.
Class 7 Science Light Solutions In Kannada Medium.

೮. ನಿಮ್ನ ಮತ್ತು ಪೀನ ದರ್ಪಣಗಳ ಒಂದೊಂದು ಉಪಯೋಗವನ್ನು ತಿಳಿಸಿ.

ಉತ್ತರ-

ಕಾರುಗಳು ಮತ್ತು ಸ್ಕೂಟರ್‌ಗಳ ಹೆಡ್‌ಲೈಟ್‌ಗಳಲ್ಲಿ ನಿಮ್ನ ದರ್ಪಣ ಕನ್ನಡಿಗಳನ್ನು ಬಳಸಲಾಗುತ್ತದೆ.

ಪೀನ ದರ್ಪಣ ಕನ್ನಡಿಗಳನ್ನು ವಾಹನಗಳಲ್ಲಿ ಸೈಡ್ ವ್ಯೂ ಮಿರರ್‌ಗಳಾಗಿ ಬಳಸಲಾಗುತ್ತದೆ.

Class 7 Science Light Solutions In Kannada Medium.

೯. ಯಾವ ವಿಧದ ದರ್ಪಣವು ಸತ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ?

ಉತ್ತರ-

ನಿಮ್ನ ದರ್ಪಣವು ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.

೧೦. ಯಾವ ವಿಧದ ಮಸೂರವು ಯಾವಾಗಲೂ ಮಿಥ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ?

ಉತ್ತರ-

ನಿಮ್ನ ಮಸೂರವು ಯಾವಾಗಲೂ ನೇರ, ಮಿಥ್ಯ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.

೧೧ ರಿಂದ ೧೩ರವರೆಗಿನ ಪ್ರಶ್ನೆಗಳಿಗೆ ಸರಿಯಾದ ಆಯ್ಕೆಯನ್ನು ಆರಿಸಿ.

೧೧. ವಸ್ತುವಿಗಿಂತ ದೊಡ್ಡದಾದ ಮಿಥ್ಯ ಪ್ರತಿಬಿಂಬವನ್ನು ಇದರಿಂದ ಪಡೆಯಬಹುದು.

(i) ನಿಮ್ನ ಮಸೂರ (ii) ನಿಮ್ನ ದರ್ಪಣ

(iii)ಪೀನ ದರ್ಪಣ (iv) ಸಮತಲ ದರ್ಪಣ

ಉತ್ತರ-(ii) ನಿಮ್ನ ದರ್ಪಣ

೧೨. ಸಮತಲ ದರ್ಪಣದಲ್ಲಿ ಡೇವಿಡ್ ತನ್ನ ಪ್ರತಿಬಿಂಬವನ್ನು ವೀಕ್ಷಿಸುತ್ತಿದ್ದಾನೆ. ದರ್ಪಣ ಮತ್ತು ಪ್ರತಿಬಿಂಬಗಳ ನಡುವಣ ದೂರ 4m. ಡೇವಿಡ್ ದರ್ಪಣದ ಕಡೆಗೆ 1m ಚಲಿಸಿದರೆ, ಡೇವಿಡ್ ಮತ್ತು ಅವನ ಪ್ರತಿಬಿಂಬದ ನಡುವಿನ ದೂರವು

(i) 3 m (ii) 5 m

(iii) 6 m (iv) 8 m

ಉತ್ತರ-(iii) 6 m

೧೩. ಒಂದು ಕಾರಿನ ಹಿನ್ನೋಟ ದರ್ಪಣವು ಸಮತಲ ದರ್ಪಣವಾಗಿದೆ. ಕಾರನ್ನು ಚಾಲಕ 2 m/s ವೇಗದಲ್ಲಿ ಹಿಂದಕ್ಕೆ ತರುತ್ತಿದ್ದಾನೆ. ಚಾಲಕ ಹಿನ್ನೋಟ ದರ್ಪಣದಲ್ಲಿ ತನ್ನ ಕಾರಿನ ಹಿಂಭಾಗದಲ್ಲಿ ಟ್ರಕ್ ನಿಲ್ಲಿಸಿರುವುದನ್ನು ಕಾಣುತ್ತಾನೆ. ಚಾಲಕನಿಗೆ ಟ್ರಕ್‌ನ ಪ್ರತಿಬಿಂಬವು ಸಮೀಪಿಸಿದಂತೆ ಕಾಣುವ ವೇಗ.

(ಎ) 1 m/s (ಬಿ) 2 m/s

(ಸಿ) 4 m/s (ಡಿ) 8 m/s

ಉತ್ತರ-(ಸಿ) 4 m/s

NCERT Solutions Class 7 Science Chapter-15 Light FAQs-

ಬೆಳಕಿನ ಪ್ರತಿಫಲನ ಎಂದರೇನು?

ದರ್ಪಣದಿಂದಾಗುವ ಬೆಳಕಿನ ದಿಕ್ಕಿನ ಬದಲಾವಣೆಯನ್ನು ಬೆಳಕಿನ ಪ್ರತಿಫಲನ ಎನ್ನುವರು.

ನಿಮ್ನ ದರ್ಪಣ ಎಂದರೇನು?

ಗೋಲೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ನಿಮ್ನವಾಗಿದ್ದರೆ ಅದನ್ನು ನಿಮ್ನ ದರ್ಪಣ ಎನ್ನುವರು.

ಪೀನ ದರ್ಪಣ ಎಂದರೇನು?

ಗೋಲೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ಪೀನವಾಗಿದ್ದರೆ (ಹೊರಬಾಗಿದ್ದರೆ) ಅದನ್ನು ಪೀನ ದರ್ಪಣ ಎನ್ನುವರು.

ಕಾಮನ ಬಿಲ್ಲಿನಲ್ಲಿ ಸುಲಭವಾಗಿ ಗುರ್ತಿಸಲಾಗದ ಏಳು ಬಣ್ಣಗಳಾವುವು?

ಕಾಮನ ಬಿಲ್ಲಿನಲ್ಲಿ ಸುಲಭವಾಗಿ ಗುರ್ತಿಸಲಾಗದ ಏಳು ಬಣ್ಣಗಳಿವೆ. ಅವುಗಳೆಂದರೆ – ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಊದ ಮತ್ತು ನೇರಳೆ.

👉NCERT Solutions Class 7 Science Chapter-15 Light PDF👈

1 thought on “Class 7 Science Light Solutions In Kannada Medium.”

Leave a comment