Fibre To Fabric Class 7 solutions In Kannada Medium.

Fibre To Fabric class 7 solutions in kannada – 7ನೇ ತರಗತಿ ವಿಜ್ಞಾನ ಎಳೆಯಿಂದ ಬಟ್ಟೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Fibre To Fabric Class 7 Best solutions In Kannada Medium.

ಎಳೆಯಿಂದ ಬಟ್ಟೆ ಪಾಠ ಪ್ರಶ್ನೆ ಉತ್ತರಗಳು-:KSEEB Solutions for Class 7 Science Karnataka State Syllabus.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ, ಸಸ್ಯಗಳಿಂದ ಕೆಲವು ನಾರುಗಳನ್ನು ಪಡೆಯುತ್ತೇವೆ. ಉಣ್ಣೆ ಮತ್ತು ರೇಷ್ಮೆ ನಾರುಗಳನ್ನು ಪ್ರಾಣಿಗಳಿಂದ ಪಡೆಯುತ್ತೇವೆ. ಕುರಿ ಅಥವಾ ಯಾಕ್‌ನ ತುಪ್ಪಳದಿಂದ ಉಣ್ಣೆ ದೊರೆಯುತ್ತದೆ. ರೇಷ್ಮೆ ಪತಂಗದ ಗೂಡಿನಿಂದ ರೇಷ್ಮೆ ಎಳೆ ದೊರೆಯುತ್ತದೆ. ಕುರಿಯ ದೇಹದ ಯಾವ ಭಾಗವು ಉಣ್ಣೆಯ ನಾರನ್ನು ನೀಡುವುದು. ಸ್ವೆಟರ್‌ಗಳನ್ನು ಹೆಣೆಯಲು ನಾವು ಮಾರುಕಟ್ಟೆಯಿಂದಖರೀದಿಸುವ ಉಣ್ಣೆಯ ದಾರವಾಗಿ ಈ ನಾರು/ಎಳೆಗಳನ್ನು ಪರಿವರ್ತಿಸಲಾಗುತ್ತದೆ.ಈ ಒಂದು ಬ್ಲಾಗ್ ಲೇಖನದಲ್ಲಿ Fibre To Fabric class 7 solutions in kannada – 7ನೇ ತರಗತಿ ವಿಜ್ಞಾನ ಎಳೆಯಿಂದ ಬಟ್ಟೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಈ ಕೆಳಗಿನವುಗಳಿಗೆ ಉತ್ತರಿಸಿ :Fibre To Fabric class 7 solutions in kannada.

(ಬಿ) ಕುರಿಮರಿಯ ಬಿಳಿ ತುಪ್ಪಳ ಯಾವುದರಿಂದ ಉಂಟಾಗಿದೆ?
ಉತ್ತರ-ಕುರಿಮರಿಯ ಬಿಳಿ ಉಣ್ಣೆ ಬಿಳಿ ಬಣ್ಣದ ಕೂದಲು/ ಎಳೆಗಳಿಂದ ಉಂಟಾಗಿದೆ.

Fibre To Fabric Class 7 Best solutions In Kannada Medium.
  1. ರೇಷ್ಮೆಹುಳುವು ಒಂದು (ಎ) ಕಂಬಳಿಹುಳು (ಬಿ) ಲಾರ್ವ. ಈ ಪರ್ಯಾಯಗಳಿಂದ
    ಸರಿಯಾದುದನ್ನು ಆರಿಸಿ.
    (i) ಎ (ii) ಬಿ (iii) ಎ ಮತ್ತು ಬಿ (iv) ಎ ಅಥವಾ ಬಿ ಎರಡೂ ಅಲ್ಲ

ಉತ್ತರ-(iii) ಎ ಮತ್ತು ಬಿ

Fibre To Fabric Class 7 Best solutions In Kannada Medium.

3.ಈ ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?
(i) ಯಾಕ್ (ii) ಒಂಟೆ (iii) ಮೇಕೆ (iv) ಜೂಲು ನಾಯಿ

ಉತ್ತರ-(iv) ಜೂಲು ನಾಯಿ

  1. ಈ ಕೆಳಗಿನ ಪದಗಳ ಅರ್ಥವೇನು?

(i) ಸಾಕಣೆ (ii) ಕತ್ತರಿಸುವಿಕೆ (iii) ರೇಷ್ಮೆಕೃಷಿ


(i) ಸಾಕಣೆ –
ಸಾಕು ಪ್ರಾಣಿಗಳಾದ ಹಸು, ಎಮ್ಮೆ,ಕುರಿ,ಮೇಕೆ,ಒಂಟೆ ಇತರೆ ಪ್ರಾಣಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಂದರೆ ಹಾಲು, ಮಾಂಸ,ಉಣ್ಣೆ ಇತರೆ ಉದ್ದೇಶಗಳಿಗಾಗಿ ಬೆಳೆಸುವುದು.

(ii) ಕತ್ತರಿಸುವಿಕೆ-
ಕುರಿಯ ಮೈಯಿಂದ ತುಪ್ಪಳವನ್ನು ಅತ್ಯಂತ ತೆಳುವಾದ ಚರ್ಮದೊಂದಿಗೆ ಬೇರ್ಪಡಿಸಲಾಗುತ್ತದೆ.
ಈ ಕ್ರಿಯೆಯನ್ನು ಕತ್ತರಿಸುವಿಕೆ (shearing) ಎನ್ನುವರು.ಇಲ್ಲಿ ಕೂದಲನ್ನು ಬೋಳಿಸಲು ಕ್ಷೌರಿಕರು ಬಳಸುವಂತಹ ಯಂತ್ರಗಳನ್ನು ಬಳಸಲಾಗುತ್ತದೆ.

(iii) ರೇಷ್ಮೆಕೃಷಿ-
ರೇಷ್ಮೆ ಎಳೆಗಳು ಕೂಡಾ ಪ್ರಾಣಿ ಎಳೆಗಳು. ರೇಷ್ಮೆ ಎಳೆಗಳನ್ನು ರೇಷ್ಮೆ ಹುಳುಗಳು ಉತ್ಪಾದಿಸುತ್ತವೆ. ರೇಷ್ಮೆಗಾಗಿ ರೇಷ್ಮೆಹುಳುಗಳನ್ನು ಸಾಕುವುದನ್ನು ರೇಷ್ಮೆಕೃಷಿ (sericulture) ಎನ್ನುವರು.

Fibre To Fabric Class 7 Best solutions In Kannada Medium.
  1. ಉಣ್ಣೆ ಸಂಸ್ಕರಣೆಯ ಹಂತಗಳ ಶ್ರೇಣಿಯನ್ನು ಈ ಕೆಳಗೆ ನೀಡಿದೆ. ಬಿಟ್ಟು ಹೋಗಿರುವ
    ಹಂತಗಳು ಯಾವುವು? ಅವುಗಳನ್ನು ಸೇರಿಸಿ.
    ಕತ್ತರಿಸುವುದು,______ ,ವಿಂಗಡಿಸುವುದು, , ___________ , _____________
Fibre To Fabric Class 7 Best solutions In Kannada Medium.

6.ರೇಷ್ಮೆ ಪತಂಗದ ಜೀವನ ಚರಿತ್ರೆಯಲ್ಲಿ, ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಹಂತಗಳ ಚಿತ್ರಗಳನ್ನು ಬರೆಯಿರಿ.

ರೇಷ್ಮೆ ಪತಂಗದ ಜೀವನ ಚರಿತ್ರೆ

Eleyinda batte question answer
7.ಈ ಕೆಳಗಿನವುಗಳಲ್ಲಿ ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಎರಡು ಪದಗಳು
ರೇಷ್ಮೆಕೃಷಿ, ಪುಷ್ಪಕೃಷಿ, ಹಿಪ್ಪುನೇರಳೆಕೃಷಿ, ಜೇನುಕೃಷಿ, ವೃಕ್ಷಕೃಷಿ
ಸುಳಿವುಗಳು :
(ಎ) ರೇಷ್ಮೆಕೃಷಿಯು ಹಿಪ್ಪುನೇರಳೆಎಲೆಗಳ ವ್ಯವಸಾಯ ಮತ್ತು ಹುಳಗಳ ಸಾಕಣೆಯನ್ನು ಒಳಗೊಂಡಿದೆ.
(ಬಿ) ಹಿಪ್ಪುನೇರಳೆಯ ವೈಜ್ಞಾನಿಕ ಹೆಸರು ಮೋರಸ್ ಅಲ್ಬಾ.

ಉತ್ತರ-ರೇಷ್ಮೆಕೃಷಿ, ಹಿಪ್ಪುನೇರಳೆಕೃಷಿ,

8. ಕಾಲಂ – I ರ ಪದಗಳನ್ನು ಕಾಲಂ – II ರ ಪದಗಳೊಂದಿಗೆ ಹೊಂದಿಸಿ :Fibre To Fabric class 7 solutions in kannada.

ಕಾಲಂ – Iಕಾಲಂ – II
1. ಉಜ್ಜಿ ಶುಭ್ರಗೊಳಿಸುವುದು(ಎ) ರೇಷ್ಮೆ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ
2. ಹಿಪ್ಪುನೇರಳೆ ಎಲೆಗಳು(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
3.ಯಾಕ್(ಸಿ) ರೇಷ್ಮೆಹುಳುಗಳ ಆಹಾರ
4.ರೇಷ್ಮೆಗೂಡು(ಡಿ) ಸುತ್ತುವಿಕೆ
(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
ಉತ್ತರ-
ಕಾಲಂ – Iಕಾಲಂ – II
1. ಉಜ್ಜಿ ಶುಭ್ರಗೊಳಿಸುವುದು(ಇ) ಚರ್ಮದೊಂದಿಗಿನ ಕತ್ತರಿಸಿದ ಕೂದಲನ್ನು ಸ್ವಚ್ಛಗೊಳಿಸುವುದು.
2. ಹಿಪ್ಪುನೇರಳೆ ಎಲೆಗಳು(ಸಿ) ರೇಷ್ಮೆಹುಳುಗಳ ಆಹಾರ
3.ಯಾಕ್(ಬಿ) ಉಣ್ಣೆಯನ್ನು ಉತ್ಪತ್ತಿ ಮಾಡುವ ಪ್ರಾಣಿ
4.ರೇಷ್ಮೆಗೂಡು(ಎ) ರೇಷ್ಮೆ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ
READ MORE-
ಪ್ರಾಣಿಗಳಲ್ಲಿ ಪೋಷಣೆ. ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳು
  1. ಈ ಅಧ್ಯಾಯವನ್ನು ಆಧರಿಸಿ ಪದಬಂಧವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಕೆಳಗಿನ- ಸುಳಿವುಗಳನ್ನು ಉಪಯೋಗಿಸಿ, ಸೂಕ್ತ ಪದಗಳನ್ನು ಗುರ್ತಿಸಿ.
    ಮೇಲಿನಿಂದ ಕೆಳಕ್ಕೆ
  2. ಚೆನ್ನಾಗಿ ತೊಳೆಯವುದು.
  3. ಪ್ರಾಣಿ ಜನ್ಯ ಎಳೆ.
  4. ಉದ್ದವಾದ ದಾರದಂತಹ ರಚನೆ 6. ಹುಳುವಿನ ಮೊಟ್ಟೆಯೊಡೆದು ಹೊರಬರುತ್ತದೆ.
    ಎಡದಿಂದ ಬಲಕ್ಕೆ
  5. ಬೆಚ್ಚಗಿಡುತ್ತದೆ.
  6. ಇದರ ಎಲೆಗಳು ರೇಷ್ಮೆಹುಳುಗಳಿಂದ ತಿನ್ನಲ್ಪಡುತ್ತವೆ.
    6.ಹುಳುವಿನ ಮೊಟ್ಟೆಯೊಡೆಯದು ಹೊರಬರುತ್ತದೆ.
Fibre To Fabric Class 7 Best solutions In Kannada Medium CROSSWORD

ಉತ್ತರ-

Fibre To Fabric Class 7 Best solutions In Kannada Medium. Crossword answer

Important points to keep in Mind.

  • ರೇಷ್ಮೆಯು ರೇಷ್ಮೆಹುಳುಗಳಿಂದ ದೊರೆಯುತ್ತದೆ ಮತ್ತು ಉಣ್ಣೆಯು ಕುರಿ, ಮೇಕೆ ಮತ್ತು
    ಯಾಕ್‌ಗಳಿಂದ ದೊರೆಯುತ್ತದೆ. ಆದ್ದರಿಂದ ರೇಷ್ಮೆ ಮತ್ತು ಉಣ್ಣೆ ಪ್ರಾಣಿ ಜನ್ಯ ಎಳೆಗಳು.
  • ಒಂಟೆ, ಲಾಮಾ ಮತ್ತು ಅಲ್ಪಾಕಾಗಳ ಕೂದಲುಗಳನ್ನು ಕೂಡಾ ಉಣ್ಣೆಯನ್ನು ಉತ್ಪಾದಿಸಲು
    ಸಂಸ್ಕರಿಸಲಾಗುತ್ತದೆ.
  • ಭಾರತದಲ್ಲಿ ಉಣ್ಣೆಯನ್ನು ಪಡೆಯಲು ಹೆಚ್ಚು ಪ್ರಮಾಣದಲ್ಲಿ ಕುರಿಗಳನ್ನು ಸಾಕುತ್ತಾರೆ.
  • ಉಣ್ಣೆಯನ್ನು ಉತ್ಪಾದಿಸಲು, ಕುರಿಯ ಮೈಮೇಲಿನ ಕೂದಲುಗಳನ್ನು ಕತ್ತರಿಸಿ, ಉಜ್ಜಿ
    ಶುಭ್ರಗೊಳಿಸಿ, ವಿಂಗಡಿಸಿ, ಒಣಗಿಸಿ, ಬಣ್ಣ ನೀಡಿ, ಹೊಸೆದು ನಂತರ ನೇಯಲಾಗುತ್ತದೆ.
  • ರೇಷ್ಮೆಹುಳುಗಳು ರೇಷ್ಮೆ ಪತಂಗದ ಕಂಬಳಿಹುಳುಗಳು.
  • ರೇಷ್ಮೆಹುಳುಗಳು ತಮ್ಮ ಜೀವನ ಚಕ್ರದಲ್ಲಿ, ರೇಷ್ಮೆ ಎಳೆಗಳ ಗೂಡುಗಳನ್ನು ಸುತ್ತಿಕೊಳ್ಳುತ್ತವೆ.
  • ರೇಷ್ಮೆ ಎಳೆಗಳು ಒಂದು ವಿಧದ ಪ್ರೊಟೀನ್ನಿಂದ ತಯಾರಾಗಿವೆ.
  • ಗೂಡುಗಳಿಂದ ರೇಷ್ಮೆ ಎಳೆಗಳನ್ನು ಬೇರ್ಪಡಿಸಿ, ಅನಂತರ ರೇಷ್ಮೆ ದಾರವಾಗಿ ಸುತ್ತಲಾಗುತ್ತದೆ.
  • ನೇಕಾರರು ರೇಷ್ಮೆ ದಾರಗಳನ್ನು ರೇಷ್ಮೆ ಬಟ್ಟೆಯಾಗಿ ನೇಯುತ್ತಾರೆ.

ಈ ಒಂದು ಬ್ಲಾಗ್ ಲೇಖನದಲ್ಲಿ Fibre To Fabric class 7 solutions in kannada – 7ನೇ ತರಗತಿ ವಿಜ್ಞಾನ ಎಳೆಯಿಂದ ಬಟ್ಟೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

ರೇಷ್ಮೆ ಮತ್ತು ಉಣ್ಣೆ ಪ್ರಾಣಿ ಜನ್ಯ ಎಳೆಗಳು.ಏಕೆ?

ರೇಷ್ಮೆಯು ರೇಷ್ಮೆಹುಳುಗಳಿಂದ ದೊರೆಯುತ್ತದೆ ಮತ್ತು ಉಣ್ಣೆಯು ಕುರಿ, ಮೇಕೆ ಮತ್ತು ಯಾಕ್‌ಗಳಿಂದ ದೊರೆಯುತ್ತದೆ. ಆದ್ದರಿಂದ ರೇಷ್ಮೆ ಮತ್ತು ಉಣ್ಣೆ ಪ್ರಾಣಿ ಜನ್ಯ ಎಳೆಗಳು

ಭಾರತದಲ್ಲಿ ಉಣ್ಣೆಯನ್ನು ಹೆಚ್ಚು ಪ್ರಮಾಣದಲ್ಲಿ ಯಾವುದರಿಂದ ಪಡೆಯುತ್ತಾರೆ?

ಭಾರತದಲ್ಲಿ ಉಣ್ಣೆಯನ್ನು ಪಡೆಯಲು ಹೆಚ್ಚು ಪ್ರಮಾಣದಲ್ಲಿ ಕುರಿಗಳನ್ನು ಸಾಕುತ್ತಾರೆ.

WATCH VIDEOS-

ALSO READ-Physical And Chemical Changes Class 7 Best Solutions In Kannada Medium

Leave a comment