Electric Current And Its Effects Class 7 Solutions In Kannada Medium.

electric current and its effects class 7 solutions in Kannada medium 7ನೇ ತರಗತಿ ವಿಜ್ಞಾನ ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ; Vidyut Pravaha Mattu Adara Parinamagalu.- ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಪ್ರಶ್ನೋತ್ತರಗಳು ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Electric Current And Its Effects Class 7 Solutions In Kannada Medium.

Electric Current And Its Effects Class 7 Solutions- Important Points-

  • ವಿದ್ಯುತ್ ಸಲಕರಣೆಗಳನ್ನು ಅವುಗಳ ಸಂಕೇತಗಳಿಂದ ಪ್ರತಿನಿಧಿಸುವುದು ಅನುಕೂಲಕರ. ಇವುಗಳನ್ನು ಉಪಯೋಗಿಸಿಕೊಂಡು ವಿದ್ಯುತ್ ಮಂಡಲವನ್ನು ಮಂಡಲನಕ್ಷೆಯಿಂದ ಪ್ರತಿನಿಧಿಸಬಹುದು.
  • ತಂತಿಯ ಮೂಲಕ ವಿದ್ಯುತ್ ಪ್ರವಹಿಸಿದಾಗ ತಂತಿಯು ಬಿಸಿಯಾಗುತ್ತದೆ. ಇದೇ ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ. ಈ ಪರಿಣಾಮ ಅನೇಕ ಅನ್ವಯಗಳನ್ನು ಹೊಂದಿದೆ.
  • ವಿಶೇಷ ಪದಾರ್ಥಗಳಿಂದ ತಯಾರಿಸಲ್ಪಟ್ಟ ತಂತಿಗಳ ಮೂಲಕ ಅತ್ಯಧಿಕ ವಿದ್ಯುತ್  ಪ್ರವಹಿಸಿದಾಗ ಕರಗಿ ತುಂಡಾಗುತ್ತವೆ. ಇಂತಹ ಪದಾರ್ಥಗಳನ್ನು ವಿದ್ಯುತ್ ಬೆಸೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇವು ವಿದ್ಯುತ್ ಉಪಕರಣಗಳು ಹಾನಿಗೆ ಒಳಗಾಗುವುದನ್ನು ತಪ್ಪಿಸುವುದರ ಜೊತೆಗೆ ಅವುಗಳನ್ನು ಬೆಂಕಿಯಿಂದ ರಕ್ಷಿಸುತ್ತವೆ.
  • ತಂತಿಯ ಮೂಲಕ ವಿದ್ಯುತ್ ಪ್ರವಹಿಸಿದಾಗ ಅದು ಕಾಂತದಂತೆ ವರ್ತಿಸುತ್ತದೆ.
  • ಕಬ್ಬಿಣದ ತುಂಡಿಗೆ ಸುತ್ತಿದ ವಿದ್ಯುತ್ ಪ್ರವಹಿಸುತ್ತಿರುವ ಅವಾಹಕ ಹೊದಿಕೆಯುಳ್ಳ ತಂತಿಯ ಸುರುಳಿಯನ್ನು ವಿದ್ಯುತ್ಕಾಂತ ಎನ್ನುವರು.
  • ವಿದ್ಯುತ್ಕಾಂತಗಳನ್ನು ಅನೇಕ ಸಾಧನಗಳಲ್ಲಿ ಬಳಸುವರು. 

ktbs Solutions For  Electric Current And Its Effects ಅಭ್ಯಾಸಗಳು-

೧. ನಿಮ್ಮ ನೋಟ್‌ಪುಸ್ತಕದಲ್ಲಿ ವಿದ್ಯುತ್ ಮಂಡಲದ ಕೆಳಕಂಡ ಸಲಕರಣೆಗಳನ್ನು ಪ್ರತಿನಿಧಿಸುವ ಸಂಕೇತಗಳನ್ನು ಬರೆಯಿರಿ : ಸಂಪರ್ಕ ತಂತಿಗಳು, ಸಂಪರ್ಕರಹಿತ ಸ್ಥಿತಿಯ ಒತ್ತುಗುಂಡಿ, ಬಲ್ಬ್, ವಿದ್ಯುತ್ಕೋಶ, ಸಂಪರ್ಕಸ್ಥಿತಿಯ ಒತ್ತುಗುಂಡಿ ಮತ್ತು ಬ್ಯಾಟರಿ.

Electric Current And Its Effects Class 7 Solutions In Kannada Medium.

೨. ಚಿತ್ರ ೧೪.೨೧ ರಲ್ಲಿ ತೋರಿಸಿದಂತೆ ವಿದ್ಯುತ್ ಮಂಡಲವನ್ನು ಪ್ರತಿನಿಧಿಸುವ ಮಂಡಲ ನಕ್ಷೆಯನ್ನು ಬರೆಯಿರಿ.

Electric Current And Its Effects Class 7 Solutions In Kannada Medium.

೩. ಚಿತ್ರ ೧೪.೨೨ ರಲ್ಲಿ ಹಲಗೆಯ ಮೇಲೆ ಇಟ್ಟಿರುವ ನಾಲ್ಕು ವಿದ್ಯುತ್ ಕೋಶಗಳನ್ನು ತೋರಿಸಿದೆ. ನಾಲ್ಕು ಕೋಶಗಳ ಬ್ಯಾಟರಿ ತಯಾರಿಸಲು ಕೋಶಗಳ ವಿದ್ಯುದಾಗ್ರಗಳನ್ನು ತಂತಿಗಳಿಂದ ಹೇಗೆ ಜೋಡಿಸುವಿರೆಂದು ತೋರಿಸುವ ಗೆರೆಗಳನ್ನು ಎಳೆಯಿರಿ.

Electric Current And Its Effects Class 7 Solutions In Kannada Medium.

ಉತ್ತರ- 

Electric Current And Its Effects Class 7 Solutions In Kannada Medium.

೪. ಚಿತ್ರ ೧೪.೨೩ರಲ್ಲಿ ತೋರಿಸಿದ ಮಂಡಲದಲ್ಲಿ ಬಲ್ಬ್ ಬೆಳಗುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ನೀವು ಗುರುತಿಸುವಿರ? ಬಲ್ಬ್ ಬೆಳಗಲು ಮಂಡಲದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ.

Electric Current And Its Effects Class 7 Solutions In Kannada Medium.

ಉತ್ತರ- ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ,ಎರಡು ಕೋಶಗಳು ಸರಿಯಾಗಿ ಸಂಪರ್ಕ ಹೊಂದಿಲ್ಲದ ಕಾರಣ ಮಂಡಲದಲ್ಲಿನ ಬಲ್ಪ್ ಬೆಳಗುತ್ತಿಲ್ಲ.ಬಲ್ಪ್ ಅನ್ನು ಬೆಳಗುವಂತೆ ಮಾಡಲು,  ಒಂದು ಕೋಶದ ಋಣಾತ್ಮಕ ವಿದ್ಯುದಾಗ್ರವನ್ನು ಇತರ ಕೋಶದ ಧನಾತ್ಮಕ ವಿದ್ಯುದಾಗ್ರಕ್ಕೆ ಸಂಪರ್ಕಿಸಬೇಕು.‌

೫. ವಿದ್ಯುತ್ ಪ್ರವಾಹದ ಯಾವುದಾದರೂ ಎರಡು ಪರಿಣಾಮಗಳನ್ನು ಹೆಸರಿಸಿ.

ಉತ್ತರ- ವಿದ್ಯುತ್ ಪ್ರವಾಹದ ಎರಡು ಪರಿಣಾಮಗಳು-

  1. ವಿದ್ಯುತ್ ಪ್ರವಾಹದ ಶಾಖದ ಪರಿಣಾಮ.
  2. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ.

೬. ಒತ್ತುಗುಂಡಿಯಿಂದ ತಂತಿಯಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡಿದಾಗ ತಂತಿಯ ಬಳಿಯಲ್ಲಿದ್ದ ದಿಕ್ಸೂಚಿಯ ಮುಳ್ಳು ತನ್ನ ಉತ್ತರ – ದಕ್ಷಿಣ ದಿಕ್ಕಿನಿಂದ ವಿಚಲಿತವಾಗುತ್ತದೆ. ಇದನ್ನು ವಿವರಿಸಿ.

ಉತ್ತರ- ದಿಕ್ಸೂಚಿಯ ಮುಳ್ಳು ಒಂದು ಸಣ್ಣ ಕಾಂತವೆಂದು ನಮಗೆ ತಿಳಿದಿದೆ. ಇದು ಉತ್ತರ – ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತದೆ. ದಿಕ್ಸೂಚಿಯ ಹತ್ತಿರಕ್ಕೆ ಮತ್ತೊಂದು ಕಾಂತವನ್ನು ತಂದಾಗ ಅದರ ಮುಳ್ಳು ವಿಚಲಿತವಾಗುತ್ತದೆ. ದಿಕ್ಸೂಚಿಯ ಹತ್ತಿರದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದಾಗ ಮುಳ್ಳು ವಿಚಲಿತವಾಗಿದ್ದನ್ನು ನಾವು ನೋಡಿದೆವು. ಆದ್ದರಿಂದ ತಂತಿಯ ಮೂಲಕ ವಿದ್ಯುತ್ ಪ್ರವಹಿಸಿದಾಗ ಅದು ಕಾಂತದಂತೆ ವರ್ತಿಸುತ್ತದೆ. ಇದೇ ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ವಾಸ್ತವವಾಗಿ ಕಾಂತಗಳ ರಚನೆಯಲ್ಲಿ ವಿದ್ಯುತ್ ಪ್ರವಾಹವನ್ನು ಉಪಯೋಗಿಸುವರು. 

೭. ಚಿತ್ರ ೧೪.೨೪ ರಲ್ಲಿ ತೋರಿಸಿರುವ ಮಂಡಲದ ಒತ್ತುಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ ದಿಕ್ಸೂಚಿಯ ಮುಳ್ಳು ವಿಚಲಿತವಾಗುವುದೇ?

Electric Current And Its Effects Class 7 Solutions In Kannada Medium.

ಉತ್ತರ- 

ಇಲ್ಲ .ಏಕೆಂದರೆ – ಈ ಮಂಡಲವು ಯಾವುದೇ ವಿದ್ಯುತ್ತಿನ ಮೂಲ ಹೊಂದಿಲ್ಲ. ವಿದ್ಯುತ್‌ ಪ್ರವಾಹ ಇಲ್ಲದ ಕಾರಣ, ತಂತಿಯು ಆಯಸ್ಕಾಂತದಂತೆ ವರ್ತಿಸುವುದಿಲ್ಲ, ಆದ್ದರಿಂದ ದಿಕ್ಕೂಚಿಯ ಸೂಜಿ ಯಾವುದೇ ವಿಚಲನವನ್ನು ತೋರಿಸುವುದಿಲ್ಲ.

Electric Current And Its Effects Class 7

೮. ಬಿಟ್ಟ ಸ್ಥಳಗಳನ್ನು ತುಂಬಿ :

(ಎ) ವಿದ್ಯುತ್ಕೋಶದ ಸಂಕೇತದ ಉದ್ದಗೆರೆ __________ ವಿದ್ಯುದಾಗ್ರವನ್ನು ಪ್ರತಿನಿಧಿಸುತ್ತದೆ.

ಉತ್ತರ- ಧನಾತ್ಮಕ

(ಬಿ) ಎರಡು ಅಥವಾ ಹೆಚ್ಚು ವಿದ್ಯುತ್ಕೋಶಗಳ ಜೋಡಣೆಯನ್ನು ________ ಎನ್ನುವರು.

ಉತ್ತರ- ಬ್ಯಾಟರಿ

(ಸಿ) ಕೋಣೆ ತಾಪಕದ ಒತ್ತು ಗುಂಡಿಯಿಂದ ವಿದ್ಯುತ್ ಪ್ರವಹಿಸುವಂತೆ ಮಾಡಿದಾಗ ಅದು _________ .

ಉತ್ತರ- ಶಾಖವನ್ನು ಉತ್ಪಾದಿಸುತ್ತದೆ.

(ಡಿ) ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮವನ್ನು ಆಧರಿಸಿದ ಒಂದು ಸುರಕ್ಷಾ ಸಾಧನ __________ .

ಉತ್ತರ- ವಿದ್ಯುತ್ ಬೆಸೆ

Electric Current And Its Effects Class 7

೯. ಹೇಳಿಕೆ ಸರಿಯಾಗಿದ್ದರೆ ಸರಿ ಎಂದು, ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.

(ಎ) ಎರಡು ಕೋಶಗಳ ಬ್ಯಾಟರಿ ತಯಾರಿಸಲು ಒಂದು ಕೋಶದ ಋಣಾಗ್ರವನ್ನು ಮತ್ತೊಂದು ಕೋಶದ ಋಣಾಗ್ರಕ್ಕೆ ಜೋಡಿಸಬೇಕು. (ಸರಿ/ ತಪ್ಪು)

ಉತ್ತರ- ತಪ್ಪು

(ಬಿ) ಬೆಸೆಯ ಮೂಲಕ ಹರಿಯುವ ವಿದ್ಯುತ್ ತನ್ನ ನಿರ್ದಿಷ್ಟ ಮಟ್ಟವನ್ನು ಮೀರಿದಾಗ, ಬೆಸೆಯ ತಂತಿ ಕರಗಿ ತುಂಡಾಗುತ್ತದೆ. (ಸರಿ/ ತಪ್ಪು)

ಉತ್ತರ- ಸರಿ

(ಸಿ) ವಿದ್ಯುತ್ಕಾಂತವು ಕಬ್ಬಿಣದ ತುಂಡನ್ನು ಆಕರ್ಷಿಸುವುದಿಲ್ಲ. (ಸರಿ/ ತಪ್ಪು)

ಉತ್ತರ- ತಪ್ಪು

(ಡಿ) ವಿದ್ಯುತ್ ಘಂಟೆಯು ವಿದ್ಯುತ್ಕಾಂತವನ್ನು ಒಳಗೊಂಡಿದೆ. (ಸರಿ/ ತಪ್ಪು)

ಉತ್ತರ- ಸರಿ

೧೦. ಕಸದ ರಾಶಿಯಿಂದ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸಲು ವಿದ್ಯುತ್ಕಾಂತವನ್ನು ಬಳಸಬಹುದು ಎಂದು ನೀವು ಆಲೋಚಿಸುವಿರ? ವಿವರಿಸಿ.

ಉತ್ತರ- 

ಇಲ್ಲ, ಏಕೆಂದರೆ ಪ್ಲಾಸ್ಟಿಕ್ ಆಯಸ್ಕಾಂತದತ್ತ ಆಕರ್ಷಿತವಾಗಲು ಕಾಂತೀಯ ಗುಣವನ್ನು ಹೊಂದಿಲ್ಲ;ವಿದ್ಯುತ್ಕಾಂತಗಳು ಕಾಂತೀಯ ವಸ್ತುಗಳನ್ನು ಮಾತ್ರ ಆಕರ್ಷಿಸುತ್ತವೆ. ಪ್ಲಾಸ್ಟಿಕ್ ಚೀಲವು ಕಾಂತೀಯವಲ್ಲದ ವಸ್ತುವಾಗಿದ್ದು ವಿದ್ಯುತ್ಕಾಂತದಿಂದ ಆಕರ್ಷಿತವಾಗುವುದಿಲ್ಲ. ಆದ್ದರಿಂದ, ಪ್ಲಾಸ್ಟಿಕ್ ಚೀಲಗಳನ್ನು ಕಸದ ರಾಶಿಯಿಂದ ಬೇರ್ಪಡಿಸಲು ವಿದ್ಯುತ್ಕಾಂತವನ್ನು ಬಳಸಲಾಗುವುದಿಲ್ಲ.

೧೧. ನಿಮ್ಮ ಮನೆಯಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆಯುವಾಗ ದುರಸ್ತಿ ಮಾಡುವ ವ್ಯಕ್ತಿಯು ಬೆಸೆಯ ಬದಲಾಗಿ ಯಾವುದೋ ಒಂದು ಸಣ್ಣ ತಂತಿಯನ್ನು ಬಳಸಲು ಮುಂದಾಗುವನು. ಇದಕ್ಕೆ ನೀವು ಒಪ್ಪುವಿರ? ನಿಮ್ಮ ಪ್ರತಿಕ್ರಿಯೆಗೆ ಕಾರಣ ನೀಡಿ.

ಉತ್ತರ- ಎಲೆಕ್ಟ್ರಿಷಿಯನ್  ಮನೆಯಲ್ಲಿರುವ ಬೆಸೆ ಅನ್ನು ತುಂಡು ತಂತಿಯಿಂದ ಬದಲಾಯಿಸಲು ಅನುಮತಿಸಲಾಗುವುದಿಲ್ಲ. ಏಕೆಂದರೆ ಪ್ರತಿ ತಂತಿಯನ್ನು ಬೆಸ ತಂತುಗಳಾಗಿ ಬಳಸಲಾಗುವುದಿಲ್ಲ.ಕೆಲವು ವಿಶೇಷ ಪದಾರ್ಥಗಳಿಂದ ಮಾಡಲ್ಪಟ್ಟ ತಂತಿಗಳ ಮೂಲಕ ಅಧಿಕ ವಿದ್ಯುತ್ ಪ್ರವಾಹ ಉಂಟಾದಾಗ ಅವು ಶೀಘ್ರವಾಗಿ ಕರಗಿ ತುಂಡಾಗುತ್ತವೆ. ಇಂತಹ ತಂತಿಗಳನ್ನು ವಿದ್ಯುತ್ ಬೆಸೆ . ಗಳ ತಯಾರಿಕೆಯಲ್ಲಿ ಬಳಸುವರು ಕಟ್ಟಡಗಳ ಎಲ್ಲ ವಿದ್ಯುತ್ ಮಂಡಲಗಳಲ್ಲಿಯೂ ಬೆಸೆಗಳನ್ನು ಅಳವಡಿಸಿರುತ್ತಾರೆ. ಒಂದು ಮಂಡಲದಲ್ಲಿ ಸುರಕ್ಷಿತವಾಗಿ ಪ್ರವಹಿಸಬಲ್ಲ ವಿದ್ಯುತ್‌ಗೆ ತನ್ನದೇ ಆದ ಗರಿಷ್ಠ ಮಿತಿ ಇರುತ್ತದೆ. ಆಕಸ್ಮಿಕವಾಗಿ ವಿದ್ಯುತ್ ತನ್ನ ಸುರಕ್ಷಾ ಮಿತಿಯನ್ನು ಮೀರಿದಾಗ ವಿದ್ಯುತ್ ತಂತಿಗಳ ಉಷ್ಣತೆಯ ಏರಿಕೆಯಿಂದ ಬೆಂಕಿ ಅವಘಡ ಸಂಭವಿಸಬಹುದು. ಮಂಡಲದಲ್ಲಿ ಸೂಕ್ತ ಬೆಸೆಯು ಇದ್ದಾಗ ಉರಿದು ಹೋಗಿ ಮಂಡಲ ಕಡಿತಗೊಳ್ಳುತ್ತದೆ. ಬೆಸೆಯು ಒಂದು ಸುರಕ್ಷಾ ಸಾಧನವಾಗಿದ್ದು ವಿದ್ಯುತ್ ಮಂಡಲಗಳ ಹಾನಿಯನ್ನು ಮತ್ತು ಸಂಭವಿಸಬಹುದಾದ ಬೆಂಕಿ ಅವಘಡಗಳನ್ನು ತಡೆಯುತ್ತದೆ.

೧೨. ಚಿತ್ರ ೧೪.೪ರಲ್ಲಿ ತೋರಿಸಿದಂತೆ ವಿದ್ಯುತ್‌ಕೋಶದ ಹಿಡಿಕೆ, ಒತ್ತುಗುಂಡಿ ಮತ್ತು ಒಂದು ಬಲ್ಬ್ ಬಳಸಿ, ಜುಬೇದಾ ಒಂದು ವಿದ್ಯುತ್ ಮಂಡಲವನ್ನು ಮಾಡಿರುವಳು. ಒತ್ತುಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ ಬಲ್ಬ್ ಬೆಳಗಲಿಲ್ಲ. ಮಂಡಲದಲ್ಲಿರಬಹುದಾದ ದೋಷಗಳನ್ನು ಗುರ್ತಿಸಲು ಅವಳಿಗೆ ಸಹಾಯ ಮಾಡಿ.

Electric Current And Its Effects Class 7 Solutions In Kannada Medium.

ಉತ್ತರ- ಎರಡು ಕೋಶಗಳು ಸರಿಯಾಗಿ ಸಂಪರ್ಕ ಹೊಂದಿಲ್ಲದಿರುಬಹುದು.  ಒಂದು ಕೋಶದ ಋಣಾತ್ಮಕ ವಿದ್ಯುದಾಗ್ರ ಅನ್ನು ಮತ್ತೊಂದು ಕೋಶದ ಧನಾತ್ಮಕ ವಿದ್ಯುದಾಗ್ರಕ್ಕೆ ಸಂಪರ್ಕಿಸಬೇಕು.

೧೩. ಚಿತ್ರ ೧೪.೨೫ರಲ್ಲಿ ತೋರಿಸಿರುವ ಮಂಡಲದಲ್ಲಿ

Electric Current And Its Effects Class 7 Solutions In Kannada Medium.

(i) ಒತ್ತು ಗುಂಡಿ ಸಂಪರ್ಕ ರಹಿತ ಸ್ಥಿತಿಯಲ್ಲಿದ್ದಾಗ ಬಲ್ಪ್ ಬೆಳಗುವುದೆ?

 ಉತ್ತರ-ಇಲ್ಲ

(ii) ಒತ್ತು ಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ A B ಮತ್ತು C ಬಲ್‌ಗಳು ಯಾವ ಕ್ರಮದಲ್ಲಿ ಬೆಳಗುತ್ತವೆ.

ಉತ್ತರ-ಬಲ್ಪ್‌ ಗಳು ಏಕಕಾಲದಲ್ಲಿ ಬೆಳಗುತ್ತವೆ.

Electric Current And Its Effects Class 7 FAQs👇

ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ ಎಂದರೇನು?

ತಂತಿಯ ಮೂಲಕ ವಿದ್ಯುತ್ ಪ್ರವಹಿಸಿದಾಗ ತಂತಿಯು ಬಿಸಿಯಾಗುತ್ತದೆ. ಇದೇ ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ.

ವಿದ್ಯುತ್ಕಾಂತ ಎಂದರೇನು?

ಕಬ್ಬಿಣದ ತುಂಡಿಗೆ ಸುತ್ತಿದ ವಿದ್ಯುತ್ ಪ್ರವಹಿಸುತ್ತಿರುವ ಅವಾಹಕ ಹೊದಿಕೆಯುಳ್ಳ ತಂತಿಯ ಸುರುಳಿಯನ್ನು ವಿದ್ಯುತ್ಕಾಂತ ಎನ್ನುವರು.

Electric Current And Its Effects Class 7 pdf

Download

YOU CAN ALSO READ- CLASS 5th EVS

Leave a comment