Physical And Chemical Changes Class 7 Best Solutions In Kannada Medium

ಭೌತ ಮತ್ತು ರಾಸಾಯನಿಕ ಬದಲಾವಣೆಗಳು ಕನ್ನಡ ಮಾಧ್ಯಮದಲ್ಲಿ ಪರಿಹಾರಗಳು.

Physical And Chemical Changes Class 7 Solutions In Kannada Medium – 7ನೇ ತರಗತಿ ವಿಜ್ಞಾನ ಭೌತ ಮತ್ತು ರಾಸಾಯನಿಕ ಬದಲಾವಣೆಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Physical And Chemical Changes Class 7 Best Solutions In Kannada Medium
Contents hide

physical and chemical changes class 7-Bhauta Mattu Rasayanika Badalavanegalu.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ, ನಿಮ್ಮ ಸುತ್ತಮುತ್ತ ಪ್ರತಿದಿನವೂ ಅನೇಕ ಬದಲಾವಣೆಗಳನ್ನು ನೀವು ಕಾಣುವಿರಿ. ಈ ಬದಲಾವಣೆಗಳು ಒಂದು ಅಥವಾ ಹೆಚ್ಚು ಪದಾರ್ಥಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, ನಿಮ್ಮ ತಾಯಿ ತಂಪು ಪಾನೀಯವನ್ನು ತಯಾರಿಸಲು ಸಕ್ಕರೆಯನ್ನು ನೀರಿನಲ್ಲಿ ವಿಲೀನಗೊಳಿಸಲು ನಿಮಗೆ ಹೇಳಬಹುದು. ಸಕ್ಕರೆಯದ್ರಾವಣವನ್ನು ತಯಾರಿಸುವುದು ಒಂದು ಬದಲಾವಣೆ. ಹಾಗೆಯೇ ಹಾಲನ್ನು ಮೊಸರಾಗಿಸುವುದೂ ಒಂದು ಬದಲಾವಣೆ. ಕೆಲವೊಮ್ಮೆ ಹಾಲು ಹುಳಿಯಾಗುತ್ತದೆ. ಹಾಲು ಹುಳಿಯಾಗುವುದೂ ಒಂದು ಬದಲಾವಣೆ. ಹಿಗ್ಗಿಸಿದ ರಬ್ಬರ್ ಬ್ಯಾಂಡ್ ಕೂಡಾ ಒಂದು ಬದಲಾವಣೆಯನ್ನು ಸೂಚಿಸುತ್ತದೆ.ಈ ಒಂದು ಬ್ಲಾಗ್ ಲೇಖನದಲ್ಲಿ physical and chemical changes class 7 ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಬದಲಾವಣೆಗಳಲ್ಲಿ ಎರಡು ವಿಧ –

i) ಭೌತ ಬದಲಾವಣೆ

ii) ರಾಸಾಯನಿಕ ಬದಲಾವಣೆ.

  • ಪದಾರ್ಥಗಳ ಭೌತಿಕ ಗುಣಗಳಲ್ಲಿನ ಬದಲಾವಣೆಗಳೆ ಭೌತ ಬದಲಾವಣೆಗಳು. ಈ
    ಬದಲಾವಣೆಗಳಲ್ಲಿ ಹೊಸ ಪದಾರ್ಥಗಳು ಉಂಟಾಗುವುದಿಲ್ಲ. ಈ ಬದಲಾವಣೆಗಳನ್ನು
    ಪರಾವರ್ತಗೊಳಿಸಬಹುದು.
  • ರಾಸಾಯನಿಕ ಬದಲಾವಣೆಗಳಲ್ಲಿ ಹೊಸ ಪದಾರ್ಥಗಳು ಉತ್ಪತ್ತಿಯಾಗುತ್ತವೆ.
  • ಸ್ಪಟಿಕೀಕರಣದಿಂದ ಕೆಲವು ಪದಾರ್ಥಗಳನ್ನು ಶುದ್ಧ ರೂಪದಲ್ಲಿ ಅವುಗಳ ದ್ರಾವಣದಿಂದ
    ಪಡೆಯಬಹುದು.

(ಎ) ದ್ಯುತಿಸಂಶ್ಲೇಷಣೆ
ಉತ್ತರ- ರಾಸಾಯನಿಕ ಬದಲಾವಣೆ
(ಬಿ) ನೀರಿನಲ್ಲಿ ಸಕ್ಕರೆಯನ್ನು ವಿಲೀನಗೊಳಿಸುವುದು.
ಉತ್ತರ- ಭೌತ ಬದಲಾವಣೆ
(ಸಿ) ಕಲ್ಲಿದ್ದಲಿನ ಉರಿಯುವಿಕೆ
ಉತ್ತರ- ರಾಸಾಯನಿಕ ಬದಲಾವಣೆ
(ಡಿ) ಮೇಣದ ದ್ರವೀಕರಣ
ಉತ್ತರ- ಭೌತ ಬದಲಾವಣೆ
(ಇ) ಅಲ್ಯೂಮಿನಿಯಮ್‌ಅನ್ನು ಬಡಿದು ತೆಳುವಾದ ಹಾಳೆಯಾಗಿ ಮಾಡುವುದು.
ಉತ್ತರ- ಭೌತ ಬದಲಾವಣೆ
(ಎಫ್) ಆಹಾರದ ಜೀರ್ಣವಾಗುವಿಕೆ.
ಉತ್ತರ- ರಾಸಾಯನಿಕ ಬದಲಾವಣೆ

(ಎ) ಮರದ ದಿಮ್ಮಿಯನ್ನು ತುಂಡುಗಳಾಗಿ ಕತ್ತರಿಸುವುದು ಒಂದು ರಾಸಾಯನಿಕ ಬದಲಾವಣೆ.
(ಸರಿ/ತಪ್ಪು)
ಉತ್ತರ- ತಪ್ಪು
ಮರದ ದಿಮ್ಮಿಯನ್ನು ತುಂಡುಗಳಾಗಿ ಕತ್ತರಿಸುವುದು ಒಂದು ಭೌತ ಬದಲಾವಣೆ.
(ಬಿ) ಎಲೆಗಳಿಂದ ಗೊಬ್ಬರವನ್ನು ತಯಾರಿಸುವುದು ಒಂದು ಭೌತ ಬದಲಾವಣೆ. (ಸರಿ/ತಪ್ಪು)
ಉತ್ತರ- ತಪ್ಪು
ಎಲೆಗಳಿಂದ ಗೊಬ್ಬರವನ್ನು ತಯಾರಿಸುವುದು ಒಂದು ರಾಸಾಯನಿಕ ಬದಲಾವಣೆ.
(ಸಿ) ಸತುವನ್ನು ಲೇಪಿಸಿದ ಕಬ್ಬಿಣದ ಪೈಪ್‌ಗಳು ಸುಲಭವಾಗಿ ತುಕ್ಕು ಹಿಡಿಯುವುದಿಲ್ಲ.
(ಸರಿ/ತಪ್ಪು)
ಉತ್ತರ- ಸರಿ
(ಡಿ) ಕಬ್ಬಿಣ ಮತ್ತು ತುಕ್ಕು ಒಂದೇ ರೀತಿಯ ಪದಾರ್ಥಗಳು. (ಸರಿ/ತಪ್ಪು)
ಉತ್ತರ- ತಪ್ಪು
ಕಬ್ಬಿಣ ಮತ್ತು ತುಕ್ಕು ಬೇರೆ ಬೇರೆ ರೀತಿಯ ಪದಾರ್ಥಗಳು
(ಇ) ಹಬೆಯ ಸಾಂದ್ರೀಕರಣ ಒಂದು ರಾಸಾಯನಿಕ ಬದಲಾವಣೆಯಲ್ಲ. (ಸರಿ/ತಪ್ಪು)
ಉತ್ತರ- ಸರಿ

(ಎ) ಕಾರ್ಬನ್ ಡೈ ಆಕ್ಸೈಡ್ ಅನ್ನು ಸುಣ್ಣದ ತಿಳಿಯ ಮೂಲಕ ಹಾಯಿಸಿದಾಗ, ಅದು
__________ ಉತ್ಪತ್ತಿಯ ಕಾರಣದಿಂದ ಹಾಲಿನಂತೆ ಬೆಳ್ಳಗಾಗುತ್ತದೆ.
ಉತ್ತರ- ಕ್ಯಾಲಿಯಂ ಕಾರ್ಬೋನೇಟ್
(ಬಿ) ಅಡುಗೆ ಸೋಡದ ರಾಸಾಯನಿಕ ಹೆಸರು________
ಉತ್ತರ- ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್
(ಸಿ) ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಗಟ್ಟುವ ಎರಡು ವಿಧಾನಗಳು
__________ ಮತ್ತು ________ .
ಉತ್ತರ- ಕಲಾಯಿ ಮತ್ತು ಬಣ್ಣದ ಲೇಪನ
(ಡಿ) ಒಂದು ಪದಾರ್ಥದ ಗುಣಗಳು ಮಾತ್ರ ಬದಲಾಗುವುದನ್ನು __________
ಬದಲಾವಣೆ ಎನ್ನುವರು.
ಉತ್ತರ- ಭೌತ
(ಇ) ಹೊಸ ಪದಾರ್ಥಗಳು ಉತ್ಪತ್ತಿಯಾಗುವುದನ್ನು __________ ಬದಲಾವಣೆ
ಎನ್ನುವರು.
ಉತ್ತರ- ರಾಸಾಯನಿಕ

ಉತ್ತರ- ನಿಂಬೆ ರಸ (ಸಿಟ್ರಿಕ್ ಆಸಿಡ್) + ಅಡಿಗೆ ಸೋಡಾ ( NaHCO3)——–‌co2 [ಗುಳ್ಳೆಗಳು) (ಸೋಡಿಯಂ ಹೈಡೋಜನ್ ಕಾರ್ಬೋನೇಟ್) + (ಕಾರ್ಬನ್ ಡೈಆಕ್ಸೆಡ್ )
ಈ ಕ್ರಿಯೆಯಲ್ಲಿ ಸಂಭವಿಸುವ ಬದಲಾವಣೆಗಳು ರಾಸಾಯನಿಕ ಬದಲಾವಣೆಗಳಾಗಿವೆ.

Physical And Chemical Changes Class 7 Best Solutions In Kannada Medium

ಉತ್ತರ- ಮೇಣದ ಬತ್ತಿಯು ಉರಿಯುವಾಗ ಭೌತ ಮತ್ತು ರಾಸಾಯನಿಕ ಬದಲಾವಣೆಗಳೆರಡೂ
ನಡೆಯುತ್ತವೆ
(ಎ) ಮೇಣದ ಬತ್ತಿಯು ಉರಿಯುವಾಗ ದೈಹಿಕ ಬದಲಾವಣೆ: ಮೇಣದಬತ್ತಿ ಉರಿದು ಮೇಣ ಕರಗಿ ಮೇಣ ಆವಿಯಾಗಿ ಕ್ರಮೇಣ ಕರಗುತ್ತದೆ.
(ಬಿ) ಮೇಣದ ಬತ್ತಿಯು ಉರಿಯುವಾಗ ರಾಸಾಯನಿಕ ಬದಲಾವಣೆ: ಮೇಣ ಉರಿಸುವುದರಿಂದ ಇಂಗಾಲದ ಡೈಆಕ್ಸೆಡ್, ಬೆಳಕು ಮತ್ತು ಶಾಖವನ್ನು ಉತ್ಪಾದಿಸಲಾಗುತ್ತದೆ.
ಭೌತ ಮತ್ತು ರಾಸಾಯನಿಕ ಕ್ರಿಯೆಗಳೆರಡೂ ನಡೆಯುವ ಪರಿಚಿತವಾದ ಇನ್ನೊಂದು ಕ್ರಿಯೆಯನ್ನು ಉದಾಹರಣೆ- ನಾವು ಅಡುಗೆ ಮನೆಯಲ್ಲಿ ಬಳಸುವ ಅನಿಲವನ್ನು ದ್ರವೀಕೃತ ಪೆಟ್ರೋಲಿಯಮ್ ಅನಿಲ (Liquified Petroleum Gas – LPG) ಎನ್ನುವರು. ಸಿಲಿಂಡರ್‌ನ ಒಳಗೆ ಅದು ದ್ರವ
ರೂಪದಲ್ಲಿರುತ್ತದೆ. ಸಿಲಿಂಡರ್‌ನಿಂದ ಹೊರಗೆ ಬರುವಾಗ ಅನಿಲವಾಗುತ್ತದೆ ಇದು ಭೌತ ಬದಲಾವಣೆ. ನಂತರ ಅದು ಉರಿಯುತ್ತದೆ ರಾಸಾಯನಿಕ ಬದಲಾವಣೆ.

Physical And Chemical Changes Class 7 Best Solutions In Kannada Medium

ಉತ್ತರ- ಮೊಸರಿನ ತಯಾರಿಕೆ ರಾಸಾಯನಿಕ ಬದಲಾವಣೆ ಏಕೆಂದರೆ ಮೊಸರು ರೂಪುಗೊಂಡಾಗ, ನಾವು ಮೂಲ ವಸ್ತುವಾದ  ಹಾಲು ಮರಳಿ ಪಡೆಯಲು ಸಾಧ್ಯವಿಲ್ಲ: ಮತ್ತು ವಿಭಿನ್ನ ರುಚಿ, ರಾಸಾಯನಿಕ ಗುಣಲಕ್ಷಣಗಳು ಮತ್ತು ವಾಸನೆಯನ್ನು ಹೊಂದಿರುವ ಹೊಸ ವಸ್ತುವು ರೂಪುಗೊಳ್ಳುತ್ತದೆ.

Physical And Chemical Changes Class 7 Best Solutions In Kannada Medium

ಉತ್ತರ- ಮರವನ್ನು ಸುಡುವುದು ರಾಸಾಯನಿಕ ಪ್ರಕ್ರಿಯೆಯಾಗಿದೆ ಏಕೆಂದರೆ ಮರವನ್ನು ಸುಟ್ಟಾಗ ಇದ್ದಿಲು ಮುಂತಾದವುಗಳನ್ನು ಪಡೆಯಲಾಗುತ್ತದೆ.ಮೂಲ ವಸ್ತುವಾದ  ಮರವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಮರವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದಾಗ, ಅದು ಭೌತಿಕ ಬದಲಾವಣೆಯಾಗಿದೆ ಏಕೆಂದರೆ ಯಾವುದೇ ಹೊಸ ವಸ್ತುವು ರೂಪುಗೊಳ್ಳುವುದಿಲ್ಲ. ಮರದ ಗಾತ್ರ  ಮತ್ತು ಆಕಾರ ಮಾತ್ರ ಬದಲಾಗುತ್ತದೆ.

ಉತ್ತರ- ಒಂದು ಬೀಕರಲ್ಲಿ ಒಂದು ಲೋಟದಷ್ಟು ನೀರನ್ನು ತೆಗೆದುಕೊಳ್ಳಬೇಕು. ಇದಕ್ಕೆ ಸಾರರಿಕ್ತ ಸಲ್ಯೂರಿಕ್ ಆಮ್ಲದ ಕೆಲವು ಹನಿಗಳನ್ನು ಸೇರಿಸಿ ಕಾಯಿಸಬೇಕು. ಈ ನೀರು ಕುದಿಯಲು ಪ್ರಾರಂಭವಾದಾಗ ಅದಕ್ಕೆ ಕಾಪರ್ ಸಲ್ವೇಟ್‌ನ ಪುಡಿಯನ್ನು ನಿಧಾನವಾಗಿ ಸೇರಿಸಬೇಕು, ಜೊತೆಗೆ ಕಲಕುತ್ತಿರಬೇಕು. ಇನ್ನಷ್ಟು ಪುಡಿಯನ್ನು ವಿಲೀನಗೊಳಿಸಲು ಸಾಧ್ಯವಾಗುವವರೆಗೂ ಕಾಪರ್ ಸಲ್ವೇಟ್ ಸೇರಿಸುವುದನ್ನು ಮುಂದುವರಿಸಬೇಕು. ದ್ರಾವಣವನ್ನು ಸೋಸಿ, ತಣ್ಣಗಾಗಲು ಬಿಡಬೇಕು. ತಣಿಯುತ್ತಿರುವಾಗ ದ್ರಾವಣವನ್ನು ಅಲುಗಾಡಿಸಬಾರದು. ಸ್ವಲ್ಪ ಹೊತ್ತಿನ ನಂತರ ಕಾಪರ್ ಸಲ್ವೇಟ್‌ನ ಹರಳುಗಳು ಕಾಣಿಸುತ್ತವೆ.

Crystals of copper sulphate
Physical And Chemical Changes Class 7 Best Solutions In Kannada Medium

ಉತ್ತರ-
ಕಬ್ಬಿಣದ ತುಕ್ಕು ಹಿಡಿಯುವಿಕೆ ಇದು ಕಬ್ಬಿಣದ ಪರಿಕರಗಳ ಮೇಲೆ ಪ್ರಭಾವಬೀರಿ, ಅನಂತರ ಅವುಗಳನ್ನು ನಿಧಾನವಾಗಿ ಹಾಳು ಮಾಡುವ ಒಂದು ಬದಲಾವಣೆ.
ತುಕ್ಕು ಹಿಡಿಯುವ ಪ್ರಕ್ರಿಯೆಯನ್ನು ಈ ಕೆಳಗಿನ ಸಮೀಕರಣದಿಂದ ಸೂಚಿಸಬಹುದು.
ಕಬ್ಬಿಣ + ಆಕ್ಸಿಜನ್ + ನೀರು → ತುಕ್ಕು (ಕಬ್ಬಿಣದ ಆಕ್ಸೈಡ್)
ತುಕ್ಕು ಹಿಡಿಯಲು, ಆಕ್ಸಿಜನ್ ಮತ್ತು ನೀರು (ಅಥವಾ ನೀರಾವಿ) ಇವೆರಡರ ಇರುವಿಕೆಯೂ ಅವಶ್ಯಕ.
ವಾಸ್ತವವಾಗಿ ಗಾಳಿಯಲ್ಲಿ ತೇವಾಂಶವು ಹೆಚ್ಚಾಗಿದ್ದರೆ, ಅಂದರೆ ಅದು ಹೆಚ್ಚು ಆರ್ದ್ರತೆಯುಳ್ಳದ್ದಾಗಿದ್ದರೆ ತುಕ್ಕು ಹಿಡಿಯುವಿಕೆ ವೇಗವಾಗಿ ನಡೆಯುತ್ತದೆ.ಕಬ್ಬಿಣದ ಪರಿಕರಗಳು ಆಕ್ಸಿಜನ್ ಅಥವಾ ನೀರು ಅಥವಾ ಇವೆರಡರ ಸಂಪರ್ಕಕ್ಕೆ ಬರುವುದನ್ನು ತಡೆಗಟ್ಟುವ ಒಂದು ಸರಳ ವಿಧಾನವೆಂದರೆ ಬಣ್ಣ ಬಣ್ಣ ಬಳಿಯುವುದು. ವಾಸ್ತವವಾಗಿ, ತುಕ್ಕು ಹಿಡಿಯುವುದನ್ನು ತಪ್ಪಿಸಲು
ಈ ಪದರಗಳನ್ನು ನಿಯತವಾಗಿ ಲೇಪಿಸುತ್ತಿರಬೇಕು.

ಉತ್ತರ- ಮರುಭೂಮಿಗಳಲ್ಲಿನ ಗಾಳಿಗೆ ಹೋಲಿಸಿದಾಗ ಗಾಳಿಯಲ್ಲಿರುವ ತೇವಾಂಶವು ನೀರು (ಅಥವಾ ನೀರಾವಿ) ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿರುವುದರಿಂದ, ಕರಾವಳಿ ಪ್ರದೇಶಗಳಲ್ಲಿ ತುಕ್ಕು ಹಿಡಿಯುವ ಪ್ರಕ್ರಿಯೆಯು ವೇಗವಾಗಿರುತ್ತದೆ.

೧೧. ನಾವು ಅಡುಗೆ ಮನೆಯಲ್ಲಿ ಬಳಸುವ ಅನಿಲವನ್ನು ದ್ರವೀಕೃತ ಪೆಟ್ರೋಲಿಯಮ್ ಅನಿಲ
(Liquified Petroleum Gas – LPG) ಎನ್ನುವರು. ಸಿಲಿಂಡರ್‌ನ ಒಳಗೆ ಅದು ದ್ರವ
ರೂಪದಲ್ಲಿರುತ್ತದೆ. ಸಿಲಿಂಡರ್‌ನಿಂದ ಹೊರಗೆ ಬರುವಾಗ ಅನಿಲವಾಗುತ್ತದೆ (ಬದಲಾವಣೆ-A)
ನಂತರ ಅದು ಉರಿಯುತ್ತದೆ (ಬದಲಾವಣೆ-B). ಈ ಬದಲಾವಣೆಗಳಿಗೆ ಸಂಬಂಧಿಸಿದ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿ.

(i) ಪ್ರಕ್ರಿಯೆ -A ಯು ಒಂದು ರಾಸಾಯನಿಕ ಬದಲಾವಣೆ.
(ii) ಪ್ರಕ್ರಿಯೆ -Bಯು ಒಂದು ರಾಸಾಯನಿಕ ಬದಲಾವಣೆ.
(iii) A ಮತ್ತುBಪ್ರಕ್ರಿಯೆಗಳೆರಡೂ ರಾಸಾಯನಿಕ ಬದಲಾವಣೆಗಳು.
(iv) ಇವುಗಳಲ್ಲಿ ಯಾವುದೂ ರಾಸಾಯನಿಕ ಬದಲಾವಣೆಯಲ್ಲ.

ಉತ್ತರ- (ii) ಪ್ರಕ್ರಿಯೆ -Bಯು ಒಂದು ರಾಸಾಯನಿಕ ಬದಲಾವಣೆ.

೧೨. ಆಕ್ಸಿಜನ್‌ರಹಿತ ಉಸಿರಾಟದ ಬ್ಯಾಕ್ಟೀರಿಯಾವು ಪ್ರಾಣಿತ್ಯಾಜ್ಯವನ್ನು ಜೀರ್ಣಿಸಿಕೊಂಡು ಜೈವಿಕ
ಅನಿಲವನ್ನು ಉತ್ಪಾದಿಸುತ್ತದೆ (ಬದಲಾವಣೆ-A). ಈ ಜೈವಿಕ ಅನಿಲವು ನಂತರ ಇಂಧನವಾಗಿ
ಉರಿಯುತ್ತದೆ (ಬದಲಾವಣೆ-B). ಈ ಬದಲಾವಣೆಗಳಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳಲ್ಲಿ
ಸರಿಯಾದುದನ್ನು ಆರಿಸಿ.

(i) ಪ್ರಕ್ರಿಯೆ -A ಒಂದು ರಾಸಾಯನಿಕ ಬದಲಾವಣೆ.
(ii) ಪ್ರಕ್ರಿಯೆ -B ಒಂದು ರಾಸಾಯನಿಕ ಬದಲಾವಣೆ.
(iii Aಮತ್ತುB ಪ್ರಕ್ರಿಯೆಗಳೆರಡೂ ರಾಸಾಯನಿಕ ಬದಲಾವಣೆಗಳು.
(iv) ಇವುಗಳಲ್ಲಿ ಯಾವುದೂ ರಾಸಾಯನಿಕ ಬದಲಾವಣೆಯಲ್ಲ

ಉತ್ತರ- (iii) Aಮತ್ತುB ಪ್ರಕ್ರಿಯೆಗಳೆರಡೂ ರಾಸಾಯನಿಕ ಬದಲಾವಣೆಗಳು.

ಈ ಒಂದು ಬ್ಲಾಗ್ ಲೇಖನದಲ್ಲಿPhysical And Chemical Changes Class 7 Best Solutions In Kannada Medium 7ನೇ ತರಗತಿ ವಿಜ್ಞಾನ ಭೌತ ಮತ್ತು ರಾಸಾಯನಿಕ ಬದಲಾವಣೆಗಳು ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳ ನಡುವಿನ 3 ವ್ಯತ್ಯಾಸಗಳು ಯಾವುವು?

ಭೌತಿಕ ಬದಲಾವಣೆಯಲ್ಲಿ, ಯಾವುದೇ ಹೊಸ ಪದಾರ್ಥವು ರೂಪುಗೊಳ್ಳುವುದಿಲ್ಲ. ರಾಸಾಯನಿಕ ಬದಲಾವಣೆಯು ಯಾವಾಗಲೂ ಒಂದು ಅಥವಾ ಹೆಚ್ಚಿನ ಹೊಸ ಪದಾರ್ಥಗಳೊಂದಿಗೆ ಇರುತ್ತದೆ. ಭೌತಿಕ ಬದಲಾವಣೆಯನ್ನು ಸುಲಭವಾಗಿ ಹಿಂತಿರುಗಿಸಬಹುದು ಅಂದರೆ ಮೂಲ ವಸ್ತುವನ್ನು ಮರುಪಡೆಯಬಹುದು. ರಾಸಾಯನಿಕ ಬದಲಾವಣೆಗಳು ಬದಲಾಯಿಸಲಾಗದವು ಅಂದರೆ ಮೂಲ ಪದಾರ್ಥವನ್ನು ಮರುಪಡೆಯಲಾಗುವುದಿಲ್ಲ.

ALSO READ –

Nutrition In Animals Class 7 Best Solutions In Kannada.

Reproduction in Plants Class 7 New Solutions In Kannada.

ALSO READ THE SOLUTIONS OF 5th EVS CHAPTERS👇👇👇

ಅಧ್ಯಾಯ -1 ಜೀವ ಪ್ರಪಂಚ.

ಅಧ್ಯಾಯ-2 ಕುಟುಂಬ

ಅಧ್ಯಾಯ-3 ಸಮುದಾಯ

ಅಧ್ಯಾಯ-4 ಸಮುದಾಯ-ಕ್ರೀಡೆಗಳು

ಅಧ್ಯಾಯ-5 ನೈಸರ್ಗಿಕ ಸಂಪನ್ಮೂಲಗಳು 

ಅಧ್ಯಾಯ-6 ವಾಯು

ಅಧ್ಯಾಯ-7 ನೀರು

ಅಧ್ಯಾಯ-8 ಕೃಷಿ

ಅಧ್ಯಾಯ-9 ಆಹಾರ-ಜೀವದ ಜೀವಾಳ 

ಅಧ್ಯಾಯ-10 ಜನವಸತಿಗಳು

ಅಧ್ಯಾಯ-11 ವಸ್ತು ಸ್ವರೂಪ 

ಅಧ್ಯಾಯ-12 ಧಾತು,ಸಂಯುಕ್ತ ಮತ್ತು ಮಿಶ್ರಣಗಳು. 

ಅಧ್ಯಾಯ-13 ವಿಸ್ಮಯ ಶಕ್ತಿ.

Leave a comment