Solutions For Class 7 Science WasteWater Story Best In Kannada Medium.

solutions for class 7 science wastewater story in kannada medium 7ನೇ ತರಗತಿ ವಿಜ್ಞಾನ [Tyajya neerina kathe ತ್ಯಾಜ್ಯ ನೀರಿನ ಕಥೆ – ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Solutions For Class 7 Science WasteWater Story In Kannada Medium.

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ ನಾವೆಲ್ಲರೂ ನಮ್ಮ ಮನೆಗಳಲ್ಲಿ ನೀರನ್ನು ಬಳಸುತ್ತೇವೆ ಮತ್ತು ಅದನ್ನು ಕೊಳಕು ಮಾಡುತ್ತೇವೆ. ಸಿಂಕ್‌ಗಳು, ಸ್ನಾನದ ಕೋಣೆ, ಶೌಚಾಲಯಗಳು, ಲಾಂಡ್ರಿಗಳಿಂದ ಹೊರಗೆ ಹರಿಯುವ ನೀರು ನೊರೆಯಿಂದ ಕೂಡಿದ್ದು, ತೈಲಮಿಶ್ರಿತ, ಕಪ್ಪು-ಕಂದು ಬಣ್ಣವಾಗಿ ಕೊಳಕಾಗಿರುತ್ತದೆ. ಇದನ್ನು ತ್ಯಾಜ್ಯ ನೀರು ಎನ್ನುವರು. ಬಳಸಿದ ಈ ನೀರನ್ನೂ ವ್ಯರ್ಥ ಮಾಡಬಾರದು. ಮಾಲಿನ್ಯಕಾರಕಗಳನ್ನು ತೆಗೆದು ಹಾಕುವ ಮೂಲಕ ಅದನ್ನು ನಾವು ಸ್ವಚ್ಛಗೊಳಿಸಬೇಕು. ತ್ಯಾಜ್ಯ ನೀರು ಎಲ್ಲಿಗೆ ಹೋಗುತ್ತದೆ ಮತ್ತು ಏನಾಗುತ್ತದೆ ಎಂದು ಈ ಅಧ್ಯಾಯದಲ್ಲಿ ಮಾಹಿತಿ ಪಡೆದಿದ್ದೀರಿ. ಈ ಒಂದು ಬ್ಲಾಗ್ ಲೇಖನದಲ್ಲಿ Solutions for Class 7 Science Chapter 18 Wastewater Story in Kannada medium 7ನೇ ತರಗತಿ ವಿಜ್ಞಾನ ತ್ಯಾಜ್ಯ ನೀರಿನ ಕಥೆ ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

solutions for class 7 science wastewater story Important Points To keep in mind-

 • ಬಳಸಿದ ನೀರೇ ತ್ಯಾಜನೀರು. ತ್ಯಾಜ್ಯನೀರನ್ನು ಮರುಬಳಕೆ ಮಾಡಬಹುದು. ಮನೆ, ಕೈಗಾರಿಕೆ, ಕೃಷಿ ಕ್ಷೇತ್ರಗಳು ಮತ್ತು ಮಾನವನ ಇತರೆ ಚಟುವಟಿಕೆಗಳಿಂದ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತದೆ. ಇದನ್ನು ಚರಂಡಿ ನೀರು ಎನ್ನುತ್ತೇವೆ.
 • ಚರಂಡಿ ನೀರು ದ್ರವ ತ್ಯಾಜ್ಯವಾಗಿದ್ದು, ಜಲ ಮತ್ತು ಭೂ ಮಾಲಿನ್ಯವನ್ನು ಉಂಟುಮಾಡುತ್ತದೆ. ತ್ಯಾಜನೀರನ್ನು ಸಂಸ್ಕರಣಾ ಸ್ಥಾವರದಲ್ಲಿ ಸಂಸ್ಕರಿಸಲಾಗುತ್ತದೆ.
 • ನಿಸರ್ಗವು ನಿರ್ವಹಣೆ ಮಾಡುವ ಮಟ್ಟಕ್ಕೆ ಸಂಸ್ಕರಣಾ ಸ್ಥಾವರವು ತ್ಯಾಜ್ಯನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ.
 • ಎಲ್ಲಿ ಒಳಚರಂಡಿ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇರುವುದಿಲ್ಲವೋ ಅಲ್ಲಿ ಅತ್ಯಲ್ಪ ವೆಚ್ಚದ ಸ್ಥಳೀಯ ನೈರ್ಮಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
 • ಕೆಸರು ಮತ್ತು ಜೈವಿಕ ಅನಿಲಗಳು ತ್ಯಾಜ್ಯ ನೀರಿನ ಸಂಸ್ಕರಣೆಯ ಉಪ ಉತ್ಪನ್ನಗಳು.
 • ತೆರೆದ ಚರಂಡಿ ವ್ಯವಸ್ಥೆಯು ಖಾಯಿಲೆಗಳನ್ನು ಹರಡುವ ನೊಣ, ಸೊಳ್ಳೆ ಮತ್ತು ರೋಗಾಣುಗಳು ಉತ್ಪತ್ತಿಯಾಗುವ ಸ್ಥಳವಾಗಿದೆ.
 • ಬಯಲು ಪ್ರದೇಶದಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು. ಕಡಿಮೆ ವೆಚ್ಚದಲ್ಲಿ ಮಲಮೂತ್ರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸಾಧ್ಯವಿದೆ.

ಅಭ್ಯಾಸಗಳು-

(ಎ) ನೀರನ ಶುದ್ದೀಕರಣವು _________ ನ್ನು ಬೇರ್ಪಡಿಸುವ ಒಂದು ಪ್ರಕ್ರಿಯೆಯಾಗಿದೆ.

ಉತ್ತರ- ಮಾಲಿನ್ಯಕಾರಕಗಳು

Solutions For Class 7 Science WasteWater Story in kannada medium

(ಬಿ) ಮನೆಗಳಿಂದ ಬಿಡುಗಡೆಯಾದ ತ್ಯಾಜ್ಯ ನೀರನ್ನು _________ ಎನ್ನುವರು.

ಉತ್ತರ- ಚರಂಡಿ

(ಸಿ) ಒಣಗಿದ __________ ನ್ನು ಗೊಬ್ಬರವಾಗಿ ಬಳಸಲಾಗುತ್ತದೆ.

ಉತ್ತರ- ಕೆಸರು/ಕಸ

(ಡಿ) ಚರಂಡಿಗಳು ________ ಮತ್ತು ________ ನಿಂದ ಕಟ್ಟಿಕೊಳ್ಳುತ್ತವೆ.

ಉತ್ತರ- ತೈಲ ಮತ್ತು ಕೊಬ್ಬಿನ ಪದಾರ್ಥಗಳು

೨. ಚರಂಡಿ ನೀರು ಎಂದರೇನು? ಸಂಸ್ಕರಿಸದ ಚರಂಡಿ ನೀರನ್ನು ನದಿ ಮತ್ತು ಸಮುದ್ರಗಳಿಗೆ ಬಿಡುವುದು ಹಾನಿಕಾರಕ. ಏಕೆ? ವಿವರಿಸಿ.

ಉತ್ತರ-ಮನೆ, ಕೈಗಾರಿಕೆ, ಆಸ್ಪತ್ರೆ, ಕಛೇರಿ ಮತ್ತು ಇತರೆ ಬಳಕೆಗಳಿಂದ ಹೊರಬರುವ ತ್ಯಾಜ್ಯ ನೀರೇ ಚರಂಡಿ ನೀರು. ಚಂಡಮಾರುತದ ಸಮಯದಲ್ಲಿ ಅಥವಾ ಭಾರೀ ಮಳೆಯಾದಾಗ ರಸ್ತೆ ಮೇಲೆ ಹರಿಯುವ ಮಳೆ ನೀರನ್ನು ಕೂಡ ಇದು ಒಳಗೊಂಡಿದೆ. ರಸ್ತೆಗಳು ಮತ್ತು ಮೇಲ್ಛಾವಣಿಗಳನ್ನು ತೊಳೆದು ಹರಿಯುವ ನೀರು ಅದರೊಂದಿಗೆ ಹಾನಿಕರ ಪದಾರ್ಥಗಳನ್ನು ಒಯ್ಯುತ್ತದೆ. ಚರಂಡಿ ನೀರು ದ್ರವ ರೂಪದ ತ್ಯಾಜ್ಯವಾಗಿದೆ. ಅದರಲ್ಲಿ ಹೆಚ್ಚಿನಂಶ ನೀರಾಗಿದ್ದು, ಕರಗಿದ ಮತ್ತು ತೇಲಾಡುವ ಕಲ್ಮಶಗಳನ್ನು ಒಳಗೊಂಡಿದೆ.

ತೇಲಾಡುವ ಘನವಸ್ತುಗಳು, ಸಾವಯವ ಮತ್ತು ನಿರವಯವ ಕಲ್ಮಶಗಳು, ಕಗಳು, ಕೊಳೆತಿನಿ ಮತ್ತು ರೋಗಕಾರಕ ಬ್ಯಾಕ್ಟೀರಿಯಾಗಳು ಹಾಗೂ ಇತರೆ ಸೂಕ್ಷ್ಮ ಜೀವಿಗಳನ್ನು ಹೊಂದಿರುವ ಒಂದು ಸಂಕೀರ್ಣ ಮಿಶ್ರಣವಾಗಿರುತ್ತದೆ,ಸಂಸ್ಕರಿಸದ ಚರಂಡಿ ನೀರನ್ನು ನದಿಗಳು ಅಥವಾ ಸಮುದ್ರಗಳಿಗೆ ಬಿಟ್ಟರೆ,ನದಿಗಳು ಅಥವಾ ಸಮುದ್ರಗಳಲ್ಲಿನ ನೀರು ಸಹ ಕಲುಷಿತಗೊಳ್ಳುತ್ತದೆ. ಈ ಕಲುಷಿತ ನೀರನ್ನು ಕುಡಿಯಲು ಬಳಸಿದರೆ, ಕಾಲರಾ, ಟೈಫಾಯಿಡ್, ಭೇದಿ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ, ಅದು ಜಲಚರಗಳಾ ಸಾವಿಗೂ ಕಾರಣವಾಗುತ್ತದೆ. 

Solutions For Class 7 Science WasteWater Story In Kannada Medium.

೩. ತೈಲ ಮತ್ತು ಕೊಬ್ಬಿನ ಪದಾರ್ಥಗಳನ್ನು ಚರಂಡಿಗಳಿಗೆ ಬಿಡಬಾರದು ಏಕೆ? ವಿವರಿಸಿ.

ಉತ್ತರ-ತೈಲ ಮತ್ತು ಕೊಬ್ಬಿನ ಪದಾರ್ಥಗಳು ಚರಂಡಿ ನೀರು ಹರಿವ ಕೊಳವೆಗಳನ್ನು ಜಿಗುಟಾಗಿಸಿ, ಕಟ್ಟಿಕೊಳ್ಳುವಂತೆ ಮಾಡುತ್ತವೆ ತೆರೆದ ಚರಂಡಿಗಳಲ್ಲಿ ಕೊಬ್ಬಿನ ಪದಾರ್ಥಗಳು ಮಣ್ಣಿನ ರಂಧ್ರಗಳನ್ನು ತಡೆದು, ನೀರಿನ ಸೂಸುವಿಕೆಯ ಸಾಮಥ್ಯವನ್ನು ಕಡಿಮೆಗೊಳಿಸುತ್ತವೆ.

೪. ತ್ಯಾಜ್ಯ ನೀರಿನಿಂದ ಸ್ವಚ್ಛ ನೀರನ್ನು ಪಡೆಯಲು ಅನುಸರಿಸುವ ಹಂತಗಳನ್ನು ವಿವರಿಸಿ.

ಉತ್ತರ-ತ್ಯಾಜ್ಯನೀರಿನ ಸಂಸ್ಕರಣೆಯು ಭೌತಿಕ, ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಇದು ನೀರನ್ನು ಕಲುಷಿತಗೊಳಿಸುವ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಪದಾರ್ಥಗಳನ್ನು ತೆಗೆದು ಹಾಕುತ್ತದೆ.

 • ೧. ತ್ಯಾಜ್ಯನೀರನ್ನು ಸರಳುಗಳ ಪರದೆಯ ಮೂಲಕ ಹಾಯಿಸಲಾಗುತ್ತದೆ. ಇದರಿಂದ ಚಿಂದಿಬಟ್ಟೆ, ಕಡ್ಡಿಗಳು, ತಗಡಿನ ಡಬ್ಬಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ನ್ಯಾಪ್ಕಿನ್‌ಗಳಂತಹ ದೊಡ್ಡ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ.
 • ೨. ನಂತರ ಕಲ್ಲಿನ ಚೂರು ಮತ್ತು ಮರಳನ್ನು ಬೇರ್ಪಡಿಸುವ ತೊಟ್ಟಿಗೆ ನೀರು ಹರಿಯುತ್ತದೆ. ಮರಳು, ಕಲ್ಲಿನ ಚೂರು ಮತ್ತು ಜಲ್ಲಿ ಕಲ್ಲುಗಳು ತಳದಲ್ಲಿ ಉಳಿಯುವಂತೆ ಮಾಡಲು ಒಳಬರುವ ತ್ಯಾಜ್ಯನೀರಿನ ರಭಸವನ್ನು ಕಡಿಮೆ ಮಾಡಲಾಗುತ್ತದೆ.
 • ೩. ನಂತರ ನೀರನ್ನು ಮಧ್ಯಭಾಗದಲ್ಲಿ ಇಳಿಜಾರಿನಂತಿರುವ ದೊಡ್ಡ ತೊಟ್ಟಿಯಲ್ಲಿ ನಿಲ್ಲುವಂತೆ ಮಾಡಲಾಗುತ್ತದೆ. ಚರಟದಂಥ ಘನ ಪದಾರ್ಥವು ತಳದಲ್ಲಿ ಉಳಿಯುತ್ತದೆ ಅನಂತರ ಅದನ್ನು ಕೆರೆಯುವ ಸಾಧನದಿಂದ ಬೇರ್ಪಡಿಸಲಾಗುತ್ತದೆ. ಇದು ಕೆಸರು ಅಥವಾ ರಾಡಿ (sludge) ಆಗಿರುತ್ತದೆ. ತೈಲ ಮತ್ತು ಗ್ರೀಸ್‌ನಂಥ ತೇಲುವ ಪದಾರ್ಥಗಳನ್ನು ಜಾಲರಿಯಿಂದ ತೆಗೆಯಲಾಗುತ್ತದೆ. ಈಗ ದೊರೆತ ನೀರನ್ನು ತಿಳಿಯಾದ ನೀರು (clarified water) ಎನ್ನುವರು.
 • ೪. ರಾಡಿಯನ್ನು ಬೇರೆ ತೊಟ್ಟಿಗೆ ವರ್ಗಾಯಿಸಿ, ಅಲ್ಲಿ ಅವಾಯುವಿಕ ಬ್ಯಾಕ್ಟೀರಿಯಾಗಳಿಂದ ವಿಘಟಿಸಲಾಗುತ್ತದೆ. ಈ ಕ್ರಿಯೆಯಲ್ಲಿ ಬಿಡುಗಡೆಯಾದ ಜೈವಿಕ ಅನಿಲವನ್ನು ಇಂಧನವಾಗಿ ಉಪಯೋಗಿಸಲಾಗುತ್ತದೆ ಅಥವಾ ವಿದ್ಯುತ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
 • ೫. ತಿಳಿನೀರಿನೊಳಗೆ ವಾಯುವಿಕ ಬ್ಯಾಕ್ಟೀರಿಯಾ ಬೆಳೆಯುವಂತೆ ಮಾಡಲು ತಿಳಿನೀರಿನಲ್ಲಿ ಇನ್ನೂ ಉಳಿದಿರುವ ಮಾನವ ತ್ಯಾಜ್ಯ, ಆಹಾರ ತ್ಯಾಜ್ಯ, ಸೋಪು ಮತ್ತು ಇತರೆ ಅನಗತ್ಯ ಪದಾರ್ಥಗಳನ್ನು ಬ್ಯಾಕ್ಟೀರಿಯಾಗಳು ಸೇವಿಸುತ್ತವೆ.
 • ೬. ಕೆಲವು ಗಂಟೆಗಳ ಬಳಿಕ ತೇಲಾಡುವ ಸೂಕ್ಷö್ಮ ಜೀವಿಗಳು ತೊಟ್ಟಿಯ ತಳಭಾಗದಲ್ಲಿ ಪಟುಕೃತ ಕೆಸರಾಗಿ ಸಂಗ್ರಹವಾಗುತ್ತವೆ. ನಂತರ ನೀರನ್ನು ಮೇಲ್ಭಾಗದಿಂದ ಬೇರ್ಪಡಿಸಲಾಗುತ್ತದೆ.
 • ೭. ಪಟುಕೃತ ಕೆಸರಿನಲ್ಲಿ ಶೇ. ೯೭ ರಷ್ಟು ನೀರು ಇರುತ್ತದೆ. ನೀರನ್ನು ಮರಳಿನ ಒಣ ಹಾಸಿನಿಂದ ಅಥವಾ ಯಂತ್ರಗಳ ಮೂಲಕ ಬೇರ್ಪಡಿಸಲಾಗುವುದು. ಒಣಗಿದ ಕೆಸರನ್ನು ಗೊಬ್ಬರವಾಗಿ ಬಳಸುವ ಮೂಲಕ ಸಾವಯವ ವಸ್ತು ಮತ್ತು ಪೋಷಕಗಳನ್ನು ಪುನಃ ಮಣ್ಣಿಗೆ ಹಿಂದಿರುಗಿಸಲಾಗುತ್ತದೆ.
 • ೮. ಸಂಸ್ಕರಿಸಿದ ನೀರು ಅತ್ಯಲ್ಪ ಪ್ರಮಾಣದಲ್ಲಿ ಸಾವಯವ ವಸ್ತು ಮತ್ತು ತೇಲಾಡುವ ಕಣಗಳನ್ನು ಹೊಂದಿರುತ್ತದೆ. ಇದನ್ನು ಸಮುದ್ರ, ನದಿಗಳು ಅಥವಾ ಭೂಮಿಯೊಳಗೆ ವಿಸರ್ಜಿಸಲಾಗುತ್ತದೆ. ಪ್ರಕೃತಿಯೇ ಇದನ್ನು ಮತ್ತಷ್ಟು ಸ್ವಚ್ಛಗೊಳಿಸುತ್ತದೆ. ಕೆಲವು ವೇಳೆ ನೀರನ್ನು ವಿತರಣಾ ವ್ಯವಸ್ಥೆಗೆ ಬಿಡುಗಡೆ ಮಾಡುವ ಮೊದಲು ಕ್ಲೋರಿನ್ ಮತ್ತು ಓಝೋನ್ಗಳಿಂದ ನೀರಿನ ಸೋಂಕು ನಿವಾರಿಸುವ ಅಗತ್ಯವಿರುತ್ತದೆ.

೫. ಕೆಸರು ಎಂದರೇನು? ಇದನ್ನು ಹೇಗೆ ಸಂಸ್ಕರಿಸಲಾಗುತ್ತದೆ? ವಿವರಿಸಿ.

ಉತ್ತರ-ತ್ಯಾಜ್ಯ ನೀರನ್ನುಸಂಸ್ಕರಿಸುವಾಗ ಮಲದಂತಹ ಘನಗಳು ಕೆಳಭಾಗದಲ್ಲಿ ನೆಲೆಗೊಳ್ಳುತ್ತವೆ ಮತ್ತು ಈ ವಸ್ತುವನ್ನು ಕೆಸರು ಎಂದು ಕರೆಯಲಾಗುತ್ತದೆ. ಕೆಸರನ್ನು ಈ ಕೆಳಗಿನಂತೆ ಸಂಸ್ಕರಿಸಲಾಗುತ್ತದೆ ಮಾಡಬಹುದು: ಕೆಸರನ್ನು ಬೇರೆ ತೊಟ್ಟಿಗೆ ವರ್ಗಾಯಿಸಿ, ಅಲ್ಲಿ ಅವಾಯುವಿಕ ಬ್ಯಾಕ್ಟೀರಿಯಾಗಳಿಂದ ವಿಘಟಿಸಲಾಗುತ್ತದೆ. ಈ ಕ್ರಿಯೆಯಲ್ಲಿ ಬಿಡುಗಡೆಯಾದ ಜೈವಿಕ ಅನಿಲವನ್ನು ಇಂಧನವಾಗಿ ಉಪಯೋಗಿಸಲಾಗುತ್ತದೆ ಅಥವಾ ವಿದ್ಯುತ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

೬. ಮಾನವನ ಸಂಸ್ಕರಿಸದ ಮಲಮೂತ್ರವು ಆರೋಗ್ಯಕ್ಕೆ ಅಪಾಯಕಾರಿ. ವಿವರಿಸಿ.

ಉತ್ತರ-ಸಂಸ್ಕರಿಸದ ಮಾನವ ಮಲವಿಸರ್ಜನೆಯು ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಏಕೆಂದರೆ ಇದು ವಿವಿಧ ರೋಗ-ಉಂಟುಮಾಡುವ ಸೂಕ್ಷ್ಮಾಣುಜೀವಿಗಳು ಮತ್ತು ಮಾಲಿನ್ಯಕಾರಕಗಳನ್ನು ಒಳಗೊಂಡಿರುತ್ತದೆ, ಅದು ಮಣ್ಣು ಮತ್ತು ನೀರಿನ ಸಂಪನ್ಮೂಲವನ್ನು ಕಲುಷಿತಗೊಳಿಸುತ್ತದೆ, ಜನರು ಮಾನವ ಮಲವಿಸರ್ಜನೆಯಿಂದ ಕಲುಷಿತಗೊಂಡ ನೀರನ್ನು ಬಳಸಿದಾಗ, ಅವರಿಗೆ ಕಾಲರಾ,ಮೆನಿಂಜೈಟಿಸ್ ಟೈಫಾಯಿಡ್, ಅತಿಸಾರ ಮತ್ತು ಹೆಪಟೈಟಿಸ್‌ನಂತಹ ಕಾಯಿಲೆಗಳು ಬರುತ್ತವೆ.

೭. ನೀರಿನ ಸೋಂಕು ನಿವಾರಿಸಲು ಬಳಸುವ ಎರಡು ರಾಸಾಯನಿಕಗಳನ್ನು ಹೆಸರಿಸಿ.

ಉತ್ತರ-ಕ್ಲೋರಿನ್ ಮತ್ತು ಓಝೋನ್ ಅನ್ನು ನೀರನ್ನು ಸೋಂಕುರಹಿತಗೊಳಿಸಲು ಬಳಸಲಾಗುತ್ತದೆ.

೮. ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರದಲ್ಲಿ ಸರಳುಗಳ ಪರದೆಯ ಕಾರ್ಯವನ್ನು ವಿವರಿಸಿ.

ಉತ್ತರ-ನೀರು ಸಂಸ್ಕರಣಾ ಸ್ಥಾವರದಲ್ಲಿ ಸರಳುಗಳ ಪರದೆಗಳು ಚಿಂದಿ, ತುಂಡುಗಳು, ಕ್ಯಾನ್‌ಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ನ್ಯಾಪ್‌ಕಿನ್‌ಗಳಂತಹ ದೊಡ್ಡ ವಸ್ತುಗಳನ್ನು ತೆಗೆದುಹಾಕುತ್ತವೆ.

೯. ನೈರ್ಮಲ್ಯ ಮತ್ತು ರೋಗಗಳ ನಡುವಿನ ಸಂಬಂಧವನ್ನು ವಿವರಿಸಿ.

ಉತ್ತರ-ನೈರ್ಮಲ್ಯ ಮತ್ತು ರೋಗಗಳು ಪರಸ್ಪರ ಸಂಬಂಧ ಹೊಂದಿವೆ ಏಕೆಂದರೆ ನೈರ್ಮಲ್ಯದ ಕೊರತೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಉತ್ತಮ ನೈರ್ಮಲ್ಯ ಅಭ್ಯಾಸಗಳು ರೋಗಗಳನ್ನು ತಡೆಯುತ್ತದೆ.

೧೦. ನೈರ್ಮಲ್ಯತೆಗೆ ಸಂಬಂಧಿಸಿದಂತೆ ಸಕ್ರಿಯ ನಾಗರಿಕರಾಗಿ ನಿಮ್ಮ ಪಾತ್ರವನ್ನು ಸಂಕ್ಷಿಪ್ತವಾಗಿ ವಿವರಿಸಿ.

ಉತ್ತರ-ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವಿದೆ. ಸಕ್ರಿಯ ಪಾತ್ರವನ್ನು ನಿರ್ವಹಿಸಲು ನಾವು ಅನುಸರಿಸಬೇಕಾದ ವಿಷಯಗಳು ಈ ಕೆಳಗಿನಂತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು ಒಳಚರಂಡಿ ಪೈಪ್‌ಗಳಲ್ಲಿ ಸೋರಿಕೆ ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಅಧಿಕಾರಿಗಳಿಗೆ ವರದಿ ಮಾಡಿ. ನೈರ್ಮಲ್ಯದ ಪ್ರಯೋಜನಗಳ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕು.

೧೧. ಪದಬಂಧವನ್ನು ಪೂರ್ಣಗೊಳಿಸಿ.solutions for class 7 science wastewater story

Solutions For Class 7 Science WasteWater Story

ಅಡ್ಡವಾಗಿ

೧. ದ್ರವರೂಪದ ತ್ಯಾಜ್ಯ ಪದಾರ್ಥ

ಉತ್ತರ-ಕೊಳಚೆ ನೀರು

೨. ಚರಂಡಿ ನೀರಿನ ಸಂಸ್ಕರಣೆಯಿಂದ ಹೊರತೆಗೆದ ಘನ ತ್ಯಾಜ್ಯ

ಉತ್ತರ-ಕೆಸರು

೩. ಆರೋಗ್ಯಕ್ಕೆ ಸಂಬಂಧಿಸಿದ ಪದ

ಉತ್ತರ- ನೈರ್ಮಲ್ಯ

೪. ಮಾನವನ ದೇಹದಿಂದ ವಿಸರ್ಜನೆಯಾಗುವ ತ್ಯಾಜ್ಯ ವಸ್ತು

ಉತ್ತರ-ಮಲವಿಸರ್ಜನೆ

ಕೆಳಗಡೆ

೫. ಬಳಕೆಯಾದ ನೀರು

ಉತ್ತರ-ತ್ಯಾಜ್ಯನೀರು

೬. ಚರಂಡಿ ನೀರನ್ನು ಸಾಗಿಸುವ ಕೊಳವೆ

ಉತ್ತರ-ಒಳಚರಂಡಿ

೭. ಕಾಲರಾ ಹರಡುವ ಸೂಕ್ಶ್ಮಾಣು ಜೀವಿ

ಉತ್ತರ-ಬ್ಯಾಕ್ಟೀರಿಯಾ

೧೨.ಓಜೋನ್ ಬಗ್ಗೆ ಕೆಳಗಿರುವ ಹೇಳಿಕೆಗಳನ್ನು ಅಭ್ಯಾಸ ಮಾಡಿ.

(ಎ) ಇದು ಜೀವಿಗಳ ಉಸಿರಾಟಕ್ಕೆ ಅವಶ್ಯಕವಾಗಿದೆ.

(ಬಿ) ಇದನ್ನು ನೀರಿನ ಸೋಂಕು ನಿವಾರಿಸಲು ಬಳಸಲಾಗುತ್ತದೆ.

(ಸಿ) ಇದು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ.

(ಡಿ) ಗಾಳಿಯಲ್ಲಿ ಇದರ ಪ್ರಮಾಣ ಸುಮಾರು ಶೇ. ೩ರಷ್ಟಿದೆ.

ಈ ಹೇಳಿಕೆಗಳಲ್ಲಿ ಯಾವುದು ಸರಿ.

(i) (ಎ), (ಬಿ) ಮತ್ತು (ಸಿ)

(ii) (ಬಿ) ಮತ್ತು (ಸಿ)

(iii)(ಎ) ಮತ್ತು (ಡಿ)

(iv) ಎಲ್ಲಾ ನಾಲ್ಕು

ಉತ್ತರ- (ii) (ಬಿ) ಮತ್ತು (ಸಿ)

FAQs

ತ್ಯಾಜ್ಯ ನೀರು ಎಂದರೇನು?

ಸಿಂಕ್‌ಗಳು, ಸ್ನಾನದ ಕೋಣೆ, ಶೌಚಾಲಯಗಳು, ಲಾಂಡ್ರಿಗಳಿಂದ ಹೊರಗೆ ಹರಿಯುವ ನೀರು ನೊರೆಯಿಂದ ಕೂಡಿದ್ದು, ತೈಲಮಿಶ್ರಿತ, ಕಪ್ಪು-ಕಂದು
ಬಣ್ಣವಾಗಿ ಕೊಳಕಾಗಿರುತ್ತದೆ. ಇದನ್ನು ತ್ಯಾಜ್ಯ ನೀರು ಎನ್ನುವರು.

ವಿಶ್ವ ಜಲದಿನ ಯಾವಾಗ ಆಚರಿಸುತ್ತಾರೆ?

ಮಾರ್ಚ್ ೨೨ರ ವಿಶ್ವ ಜಲದಿನ.

ನೀರಿನ ಶುದ್ಧೀಕರಣ ಎಂದರೇನು?

ಮಾಲಿನ್ಯಕಾರಕಗಳು ನೀರಿನ ಆಕರಗಳಿಗೆ ಸೇರುವ ಮುನ್ನ ಅಥವಾ ನೀರಿನ ಮರುಬಳಕೆಗೆ ಮುನ್ನ ಅವುಗಳನ್ನು ತೆಗೆದು ಹಾಕುವ ಪ್ರಕ್ರಿಯೆಯೇ ನೀರಿನ ಶುದ್ಧೀಕರಣ.

5th Standard EVS Notes In Kannada

Leave a comment